ಮಂಗಳೂರು: ಭಾರತದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಎಸ್‍ಎಂಇ) ರಫ್ತು ವಿಭಾಗವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಮೆಜಾನ್ ಇಂಡಿಯಾ, ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ಸ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಒಪ್ಪಂದದ ಪ್ರಕಾರ ಅಮೆಜಾನ್ ಮತ್ತು ಎಫ್‍ಐಇಓ ಜಂಟಿಯಾಗಿ ಇ- ಕಾಮರ್ಸ್ ರಫ್ತು ಕಾರ್ಯಪಡೆಯನ್ನು ಸ್ಥಾಪಿಸಲಿದ್ದು, ಈ ವಿಭಾಗವು ಮಾರಾಟಗಾರರಿಗೆ ನೆರವಾಗಬಲ್ಲ ನೀತಿ ನಿರೂಪಣೆ ಮತ್ತು ಮೂಲಸೌಕರ್ಯ ಸ್ಥಾಪನೆ ಕುರಿತ ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ. ಜೊತೆಗೆ ವಿಶೇಷವಾಗಿ ಭಾರತದಾದ್ಯಂತ ಎಂಎಎಸ್‍ಎಂಇಗಳಲ್ಲಿ ಇ- ಕಾಮರ್ಸ್ ರಫ್ತು ಅವಕಾಶಗಳ ಕುರಿತು ಜಾಗೃತಿ ಮೂಡಿಸಲಿದೆ. ಈ ಪಾಲುದಾರಿಕೆಯು ಭಾರತದಾದ್ಯಂತ ಸಣ್ಣ ಉದ್ಯಮಗಳು ಮತ್ತು ತಯಾರಕರ ಸಾಮಥ್ರ್ಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಎಫ್‍ಐಇಒ ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ಮತ್ತು ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ಇಂಡಿಯಾದ ಮುಖ್ಯಸ್ಥ ಶ್ರೀನಿಧಿ ಕಲ್ವಪುಡಿ ಹೇಳಿದ್ದಾರೆ.
ಈ ಪಾಲುದಾರಿಕೆಯು 2030ರ ವೇಳೆಗೆ ಭಾರತದಿಂದ ಒಟ್ಟು 80 ಶತಕೋಟಿ ಡಾಲರ್ ಇ-ಕಾಮರ್ಸ್ ರಫ್ತನ್ನು ಸಾಧಿಸುವ ಅಮೆಜಾನ್ ನ ಗುರಿ ಸಾಧನೆಗೆ ಪೂರಕವಾಗಿದೆ. ಪ್ರಮುಖ ರಫ್ತು ಉತ್ಪನ್ನ ವಿಭಾಗಗಳಾದ ಹೋಮ್ ಲೆನಿನ್ ಮತ್ತು ಗೃಹಾಲಂಕಾರ, ಹೆಲ್ತ್ ಆಂಡ್ ಪರ್ಸನಲ್ ಕೇರ್, ಉಡುಗೆ, ಆಟಿಕೆಗಳು ಇತ್ಯಾದಿ ವಿಭಾಗಗಳಲ್ಲಿ ರಫ್ತುದಾರರ ಸಾಮಥ್ರ್ಯ ಹೆಚ್ಚಿಸಲು ತರಬೇತಿ ಕಾರ್ಯಾಗಾರಗಳನ್ನು ನಡೆಸಲಿದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ