(ಕವಿ ದೊಡ್ಡೆರಂಗೇಗೌಡರ ಕ್ಷಮೆ ಕೋರಿ - ಅಣಕು ಗೀತೆ)
ತೋಟದಾಗೆ ನಗೆಯ ಮೀಟಿ
ಮೋಜಿನಾಗೆ ಎಲ್ಲೆಯ ದಾಟಿ
ಮೋಡೀಯ ಮಾಡಿದಂತ
ಕೊಳೆರೋಗ ಐತೆ, ಕೊಳೆರೋಗ ಐತೆ
ಅಯ್ಯೋ,
ಅಡಿಕೆಗೇ ಕೊಳೆರೋಗದ
ಪರಸಂಗ ಐತೆ, ಪರಸಂಗ ಐತೆ
ಬರಡಾಗಿ ಬದುಕೀಗೆ ಉರಿಯಿಟ್ಟಾ ಹಾಗೈತೆ
ಮನಸ್ನಾಗೆ ಕಸಿವಿಸಿಯ ದುಗಡಾವೆ ಬೆಳೆದೈತೆ
ಕುಂತ್ರೂ ನಿಂತ್ರೂ ಉದುರಿದಾ ಅಡಿಕೇಯೆ ಕಾಡೈತೆ
ಮೈಯಾಗೆ ಸಂತೋಸದ ಮಲ್ಲೀಗೆ ಬಾಡೈತೆ
ಮೈಯಾಗೆ ಸಂತೋಸದ ಮಲ್ಲೀಗೆ ಬಾಡೈತೆ
ಕಡುಬಾಳಾ ಹಾದ್ಯಾಗೆ ಮರಗಳೇ ಹೊಳೆದೈತೆ
ಹಗಲಾಗೆ ಇರುಳಾಗೆ ಆ ನಿಲುವೆ ಸೆಳೆದೈತೆ
ಬಲವಾದ ಹಂಬಲಕೆ ಮೋಡಗಳು ತುಂಬೈತೆ
ತೋಟದಾ ಪಟದೊಳಗೆ ಚಾಪೆಯೇ ಹಾಸೈತೆ
ತೋಟದಾ ಪಟದೊಳಗೆ ಚಾಪೆಯೇ ಹಾಸೈತೆ
ಕೊರಳಾಗೆ ಇನಿದನಿ ಅಡಗಿದಾ ಹಾಗೈತೆ
ಹ್ಞಾ,
ನಡೆಯಾಗೆ ಕಾಲಲ್ಲಿ ಬಾರವೇ ತುಂಬೈತೆ
ಮುಖದಾಗೆ ಅಳುವಿನಾ ಕಣ್ಣೀರೆ ಚೆಲ್ಲೈತೆ
ನಗುತಿದ್ದ ರೈತನಾ ರಂಗನ್ನೇ ಮರಸೈತೆ
ನಗುತಿದ್ದ ರೈತನಾ ರಂಗನ್ನೇ ಮರಸೈತೆ
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ