ಜುಲೈ 28; ವಿಶ್ವ ಯಕೃತ್ತಿನ ಉರಿಯೂತ ದಿನ

Upayuktha
0



ದಿನಾಚರಣೆಯನ್ನು ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ. ಪರುಚ್ ಬ್ಲೂಮ್ ಬರ್ಗ್ ಅವರ ಜನ್ಮ ದಿನಾಂಕದಂದು ಆಚರಿಸಲಾಗುತ್ತಿದೆ. ಈತ ಹೆಪಟೈಟಿಸ್-ಬಿ ವೈರಸ್ ಸಂಶೋಧನೆ ಮಾಡಿ, ಇದಕ್ಕಾಗಿ ಒಂದು ರೋಗ ನಿರ್ಣಯ ಪರೀಕ್ಷೆ ಹಾಗೂ ಈ ವೈರಸ್‌ನ್ನು ತಡೆಯುವ ಲಸಿಕೆ ಕಂಡುಹಿಡಿದ.


ಕ್ರಿ.ಶ.2030ರೊಳಗೆ ಈ ಹೆಪಟೈಟಿಸ್ ರೋಗವನ್ನು ನಿವಾರಿಸ ಬೇಕೆಂಬ ಗುರಿಯಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪ್ರಯತ್ನಗಳನ್ನು ಹೆಚ್ಚಿಸಲು, ವ್ಯಕ್ತಿಗಳು, ಪಾಲುದಾರರು ಹಾಗೂ ಸಾರ್ವಜನಿಕರು ಇವರ ಕ್ರಿಯೆಗಳು ಹಾಗೂ ತೊಡಗಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶವಿದೆ. ವಿಶ್ವ ಆರೋಗ್ಯ ಸಂಸ್ಥೆಯ 2017ರ ವರದಿಯಂತೆ, ವಿಶ್ವದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಪಡೆಯಬೇಕಾಗಿದೆ.


ಹೆಪಟೈಟಿಸ್‌ಗೆ ಚಿಕಿತ್ಸೆ ಇದೆ. ಆದರೆ ಯಕೃತ್ತಿನ ಈ ಕಾಹಿಲೆಯನ್ನು ಸರಿಯಾಗಿ, ನಿಖರವಾಗಿ ಗುರುತಿಸಬೇಕಾಗಿದೆ. ಇಲ್ಲಿ ಇರುವ ಅಪಾಯದ ಅಂಶಗಳನ್ನು ಅರಿಯಬೇಕಾಗಿದೆ. ಅಮೇರಿಕಾ ಸಂಸ್ಥಾನದಲ್ಲಿ ಅನೇಕ ದಶಲಕ್ಷ ಜನರಿಗೆ, ರೋಗಕಾರಕ ಸೂಕ್ಷ್ಮಜೀವಿಯ ಹೆಪಟೈಟಿಸ್ ಇದೆ. ಇದು ಬಹಳ ಜನರಿಗೆ ಗೊತ್ತೇ ಆಗಿರುವುದಿಲ್ಲ. 


ಈ ರೋಗದಲ್ಲಿ ಯಕೃತ್ತಿನ ಉರಿಯೂತ ಉಂಟಾಗುತ್ತದೆ. ಇದರಲ್ಲಿ 4 ರೀತಿಯ ಹೆಪಟೈಟಿಸ್ ಇದೆ. ಹೆಪಟೈಟಿಸ್-ಎ (HAV) ಹೆಪಟೈಟಿಸ್-ಬಿ (HBV) ಹೆಪಟೈಟಿಸ್-ಸಿ (HCV). ಹೆಪಟೈಟಿಸ್-ಎ ದೀರ್ಘಾವಧಿಯ ಸೋಂಕು ಉಂಟು ಮಾಡುವುದಿಲ್ಲ. ಆದರೆ ಚಿಕಿತ್ಸೆ ಪಡೆಯದಿದ್ದರೆ, ಹೆಪಟೈಟಿಸ್-ಬಿ ಹಾಗೂ ಹೆಪಟೈಟಿಸ್-ಸಿ ಮಾರಕ ಸೋಂಕುಗಳನ್ನು ವೃದ್ಧಿಪಡಿಸಿ, ಯಕೃತ್ತಿನ ನಾಶ ಮಾಡುತ್ತವೆ.


ನಮ್ಮ ದೇಶದಲ್ಲಿ 4 ಕೋಟಿ ಜನ  ಹೆಪಟೈಟಿಸ್ ಯಿಂದ ನರಳುತ್ತಿದ್ದಾರೆ. 0.6ರಿಂದ 1.2 ಕೋಟಿ ಜನ ಹೆಪಟೈಟಿಸ್-ಅಯಿಂದ ಬಳಲುತ್ತಿದ್ದಾರೆ. ಕ್ರಿ.ಶ.2030ರೊಳಗೆ, ಹೆಪಟೈಟಿಸ್‌ನ್ನು ಭಾರತದಿಂದ ದೂರ ಮಾಡಬೇಕೆಂಬ ಹೊಸ ಯೋಜನೆಯ ಗುರಿಯಿದೆ. National Viral Hepatitis Control Programme ಇದರ ಭಾಗವಾಗಿ, ಸರಕಾರ, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ  ಹೆಪಟೈಟಿಸ್ ಹಾಗೂ ಹೆಪಟೈಟಿಸ್-ಅ ರೋಗಗಳಿಂದ ಬಳಲುತ್ತಿರುವವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ನೀಡುತ್ತಿದ್ದಾರೆ. 


ಹೆಚ್.ಐ.ವಿ. ಹಾಗೂ ಏಡ್ಸ್ ಗಾಗಿ ಚಿಕಿತ್ಸೆ ಪಡುತ್ತಿರುವ ಜನರನ್ನು ವಿಶೇಷವಾಗಿ ತಪಾಸಣೆ ಮಾಡಿ ಪಾಸಿಟಿವ್ ಕಂಡರೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್.ಐ.ವಿ., ಮಲೇರಿಯಾ ಹಾಗೂ ಕ್ಷಯ ರೋಗಗಳು ಕೊಲ್ಲುವ ಒಟ್ಟು ಜನಸಂಖ್ಯೆಗಿಂತ ಹೆಪಟೈಟಿಸ್ ಸೋಂಕು ಕೊಲ್ಲುತ್ತದಂತೆ. 


ಮುಂಬೈಯಲ್ಲಿ ಕೆಲವು ತಿಂಗಳುಗಳ ಹಿಂದೆ, ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಮಂತ್ರಿ ಅಶ್ವಿನಿ ಕುಮಾರ್ ಚೌಬೆ ಅವರು ಹೆಪಟೈಟಿಸ್ ಸೋಂಕಿನ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಉದ್ಘಾಟಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ವಿಶ್ವದಲ್ಲಿ 2015ರಲ್ಲಿ ಹೆಪಟೈಟಿಸ್ ಸೋಂಕಿನಿಂದ 1.34 ದಶಲಕ್ಷ ಮರಣಗಳಾಗಿವೆ. ಸರಿಯಾದ ಸಮಯದಲ್ಲಿ ಗುರುತಿಸ ಲ್ಪಡದಿದ್ದರೆ, ಹೆಪಟೈಟಿಸ್-ಬಿ ಹಾಗೂ ಹೆಪಟೈಟಿಸ್-ಸಿ ಸೋಂಕುಗಳಿಂದ, ಯಕೃತ್ತು ಊದಿಕೊಂಡು, ಗರಿಷ್ಠ ಸಂಖ್ಯೆಯ ಮರಣ ಉಂಟಾಗಬಹುದು.


ಸದ್ಯ ಅಮೇರಿಕಾ ಸಂಸ್ಥಾನದಲ್ಲಿ 3.5 ದಶಲಕ್ಷ ಹೆಪಟೈಟಿಸ್-ಸಿ ಹೊಂದಿದ್ದರೆ, 850 ಸಾವಿರ ಜನ ಹೆಪಟೈಟಿಸ್-ಬಿ ಹೊಂದಿದ್ದಾರೆ. ಪ್ರತೀವರ್ಷ 25 ಸಾವಿರ ಜನ ಹೆಪಟೈಟಿಸ್-ಎ ಸೋಂಕು ಹೊಂದುತ್ತಾರೆ.



-ಎನ್.ವ್ಹಿ.ರಮೇಶ್ 

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು

        ಆಕಾಶವಾಣಿ

ಮೊ: 98455 65238



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top