ಮಾಣಿ ಮಠದಲ್ಲಿ ನುಡಿದೇಣಿಗೆ ಹಬ್ಬ-2025 ಸಂಪನ್ನ

Upayuktha
0

ಮಂಗಳೂರು: ಅಖಿಲ ಹವ್ಯಕ ಮಹಾಮಂಡಲದ 'ಮಂಗಳೂರು ಹೋಬಳಿ'ಯ 'ನುಡಿದೇಣಿಗೆ ಹಬ್ಬ- 2025' ಮಾಣಿಯ ಶ್ರೀರಾಮಚಂದ್ರಾಪುರ ಮಠದಲ್ಲಿ ಭಾನುವಾರ (ಜು.20) ನಡೆಯಿತು.


ಶಂಖನಾದ, ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ|| ಪಾದೇಕಲ್ಲು ವಿಷ್ಣು ಭಟ್ಟರು ದೀಪ ಪ್ರಜ್ವಲನೆ ಮಾಡಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಮೇಲೆ ಪ್ರತಿಭಾ ಕಾರ್ಯಕ್ರಮಗಳು ಆರಂಭವಾದವು. ಒಟ್ಟು 32 ಮಂದಿ ಹಿರಿ-ಕಿರಿಯ ಪ್ರತಿಭಾನ್ವಿತರಿಂದ, (9 ವಿದ್ಯಾರ್ಥಿಗಳು) 24 ಕವನಗಳು, 2 ಹಾಡುಗಳು, 2 ಕಥೆಗಳು, 2 ಹನಿಗವನಗಳು, 3 ಚೂರ್ಣಿಕೆಗಳು, 1 ಲಘುಬರಹ, 1 ನಗೆಹನಿ, 1 ಸಂಭಾಷಣೆ, 1 ಯಕ್ಷಗಾನ ಏಕಪಾತ್ರಭಿನಯ, 2 ಸಂಗೀತ ಹಾಡುಗಾರಿಕೆಗಳು, ಹೀಗೆ 39 ಕಾರ್ಯಕ್ರಮಗಳು ಸೊಗಸಾಗಿ ಮೂಡಿ ಬಂದವು.


ನಡುವಿನಲ್ಲಿ ವಿ.ಬಿ. ಕುಳಮರ್ವ ಅವರು ನಮ್ಮ ಭಾಷೆಯ ಮಹತ್ತ್ವವನ್ನು ತಿಳಿಸಿದರು. ಕೊನೆಯಲ್ಲಿ ಎ.ಪಿ. ಸದಾಶಿವ ಮರಿಕೆ ಇಂದಿನ ಕಾರ್ಯಕ್ರಮದ ಅವಲೋಕನ ಮಾಡಿದರು. ಉಂಡೇಮನೆ ವಿಶ್ವೇಶ್ವರ ಭಟ್ ವಿನೂತನ ಚಟುವಟಿಕೆಯೊಂದಿಗೆ ಭಾಷಾ ಮಹತ್ವವನ್ನು ಚೆನ್ನಾಗಿ ತಿಳಿಸಿದರು. ಶಾಂತಿ ಮಂತ್ರ, ಶಂಖನಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


ಬೆಳಗ್ಗೆ 10.30 ಕ್ಕೆ ಆರಂಭವಾದ ಕಾರ್ಯಕ್ರಮ ಸಂಜೆ 3.30ಕ್ಕೆ ಮುಕ್ತಾಯವಾಯಿತು. ಹೋಬಳಿಯ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಶಾಸನ ತಂತ್ರ ಸೇವಾ ಖಂಡದ ಶ್ರೀ ಸಂಯೋಜಕರಾದ ಕೇಶವ ಪ್ರಕಾಶ ಮುಣ್ಚಿಕ್ಕಾನ, ಮಹಾಮಂಡಲ ಗುರುಕುಲ ಶ್ರೀ ಸಂಯೋಜಕರಾದ ಈಶ್ವರ ಪ್ರಸಾದ ಕನ್ಯಾನ  ಸಹಕರಿಸಿದರು.


ಮಾಣಿ ಮಠ ಕ್ರಿಯಾ ಸಮಿತಿಯ ಸರ್ವರೂ ಸರ್ವ ರೀತಿಯ ಸಹಕಾರವನ್ನು ನೀಡಿದರು.


ಕೃಷ್ಣ ಪ್ರಮೋದ ಮುಡಿಪು (ಮಂಗಳೂರು ಮಂಡಲ ಯುವ ಪ್ರಧಾನ), ಕೇಶವ ಪ್ರಸಾದ ಎಡೆಕ್ಕಾನ (ಗುಂಪೆ ವಲಯ ಕಾರ್ಯದರ್ಶಿ) ಇವರ ಸಮಗ್ರ ಸಹಕಾರದೊಂದಿಗೆ ಸುರೇಶ ಸೂರ್ಡೇಲು (ದರ್ಬೆ ವಲಯ ಕಾರ್ಯದರ್ಶಿ) ಇಡೀ ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿದರು.


ಹಬ್ಬದಲ್ಲಿ ಭಾಗವಹಿಸಿದವರು ಇಂತಹ ಕಾರ್ಯಕ್ರಮಗಳು ತಳಮಟ್ಟದ ತನಕ ಹರಿದು ಬರಲಿ ಎಂದು ಆಶಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top