ಸುರತ್ಕಲ್: ಅಧುನಿಕ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆ ಎಲ್ಲರಿಗೂ ಅಗತ್ಯವಾಗಿದ್ದು ಸಂವಹನ ಇಂಗ್ಲಿಷ್ ಕಲಿಕೆಗೆ ಉತ್ತಮ ಶಿಕ್ಷಕರು ಮತ್ತು ಉತ್ತಮ ಪುಸ್ತಕಗಳ ಅಗತ್ಯವಿದೆ. ಭಾಷೆಯ ಕಲಿಕೆಯಲ್ಲಿ ಸಂಕೋಚ ಮತ್ತು ಭಯ ಮುಖ್ಯ ತೊಡಕು ಆಗಿದೆ. ಉತ್ತಮ ಇಂಗ್ಲಿಷ್ ಶಿಕ್ಷಕಿ ಉಷಾ ಗುರುರಾಜ್ ಭಟ್ ಇಂಗ್ಲಿಷ್ ಭಾಷೆಯ ಕಲಿಕೆಯ ವಿಧಾನವನ್ನು ತನ್ನ ಪುಸ್ತಕದಲ್ಲಿ ಸರಳವಾಗಿ ನಿರೂಪಿಸಿದ್ದಾರೆ ಎಂದು ಗೋವಿಂದ ದಾಸ ಕಾಲೇಜುನ ನಿವೃತ್ತ ಪ್ರಾಂಶುಪಾಲ ಡಾ. ಕೆ. ರಾಜಮೋಹನ್ ರಾವ್ ನುಡಿದರು.
ಅವರು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಬಾಳ ಉಷಾ ಗುರುರಾಜ್ ಭಟ್ ಅವರ ಸ್ಪೀಕ್ ಇಂಗ್ಲಿಷ್ ಫ್ಲುಯೆಂಟ್ಲಿ (Speak English Fluently) ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ಕೃಷ್ಣಮೂರ್ತಿ ಪುಸ್ತಕದ ಕುರಿತು ಮಾತನಾಡಿ, ಭಾಷೆಯ ಕಲಿಕೆ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರವಣಿಗೆ ಹಂತಗಳಲ್ಲಿ ನಡೆಯುತ್ತಿದ್ದು ಈ ಪುಸ್ತಕ ಇವೆಲ್ಲವನ್ನು ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದ್ದು ಇಂಗ್ಲಿಷ್ ಭಾಷಾ ಪರಿಣತೆ ಪಡೆಯಲು ಸಾಧ್ಯವಿದೆ ಎಂದರು.
ಲೇಖಕಿ ಬಾಳ ಉಷಾ ಗುರುರಾಜ್ ಭಟ್ ಮಾತನಾಡಿ, ತನ್ನ ಹಿರಿದಾದ ಇಂಗ್ಲಿಷ್ ಬೋಧನೆಯ ಅನುಭವದ ಹಿನ್ನಲೆಯಲ್ಲಿ ಕೃತಿ ರಚನೆ ಮಾಡಿದ್ದು ಇಂಗ್ಲೀಷ್ ಕಲಿಕಾಸಕ್ತರು ಪ್ರಾವೀಣ್ಯತೆ ಪಡೆಯಬಹುದೆಂದರು.
ಸುರತ್ಕಲ್ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ದಿವ್ಯ ಶೆಟ್ಟಿ ಶುಭ ಹಾರೈಸಿದರು. ಲಕ್ಷ್ಮೀಶ ರಾವ್ ಮತ್ತು ಕಮಲಾಕ್ಷಿ ಅಭಿನಂದಿಸಿದರು.
ಪುಸ್ತಕ ಪ್ರಕಟಣೆಗೆ ಮಾರ್ಗದರ್ಶನ ನೀಡಿ ಸಹಕರಿಸಿದ ಡಾ. ಕೆ. ರಾಜಮೋಹನ ರಾವ್, ಚಂದ್ರಶೇಖರ ಕಬ್ಬಿನಹಿತ್ಲು ಮತ್ತು ವಸಂತ ಅವರನ್ನು ಸಂಮಾನಿಸಲಾಯಿತು.
ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರನ್ನು ಗೌರವಿಸಲಾಯಿತು. ಕೌಶಿಕ್ ಜಿ. ಭಟ್ ಮತ್ತು ಕೌಸ್ತುಬ್ ಜಿ. ಭಟ್ ಉಪಸ್ಥಿತರಿದ್ದರು. ಪಾವನ ಕೌಸ್ತುಬ್ ಭಟ್ ಸಂದೇಶ ವಾಚಿಸಿ ವಂದಿಸಿದರು. ಪೂರ್ಣಿಮಾ ಕೌಶಿಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ