ಸಾಗರ: ದಶಕಗಳ ಕಾಲದ ಹೋರಾಟದ ಬಳಿಕ ಸಿಗಂದೂರು ಸೇತುವೆ ನಿರ್ಮಾಣಗೊಂಡು ಈ ಭಾಗದ ಜನರ ಸಂಪರ್ಕದ ಅವಶ್ಯಕತೆಯನ್ನು ಈಡೇರಿಸಿದ ಕೇಂದ್ರ ಸರಕಾರ ಹಾಗೂ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಕೃತಜ್ಞತೆ ವ್ಯಕ್ತಪಡಿಸಿದರು. ಈ ಭಾಗದ ಜನರ ಬಹು ಅಪೇಕ್ಷಿತ ಸೇತುವೆ ಸಂಪರ್ಕವನ್ನು ಒದಗಿಸಿದ್ದಕ್ಕಾಗಿ ನಿಮ್ಮ ಕಾಲಿಗೆ ಬಿದ್ದು ನಮಸ್ಕರಿಸುವೆ ಎಂದು ಹಿರಿಯರಾದ ಕಾಗೋಡು ತಿಮ್ಮಪ್ಪ ಹೇಳಿರುವುದು ಇಲ್ಲಿನ ಜನರ ಭಾವನೆಗಳನ್ನು ಒಂದೇ ವಾಕ್ಯದಲ್ಲಿ ವ್ಯಕ್ತಪಡಿಸಿದಂತಾಗಿದೆ.
ಸಿಗಂದೂರು 'ಶ್ರೀ ಚೌಡೇಶ್ವರಿ ಸೇತುವೆ' ಲೋಕಾರ್ಪಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸಿಗರು ಸಿಗಂದೂರು ಸೇತುವೆಯ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರೂ ಹಿರಿಯ ಕಾಂಗ್ರೆಸಿಗರಾದ ಕಾಗೋಡು ತಿಮ್ಮಪ್ಪ ಅವರು ಭಾಗವಹಿಸಿರುವುದು ಸ್ಥಳೀಯರಿಗೆ ಸಂತೋಷ ಉಂಟುಮಾಡಿದೆ.
ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ತುಂಬಾ ಹಿರಿಯರಾದ ಶ್ರೀ ಕಾಗೋಡು ತಿಮ್ಮಪ್ಪನವರು ಮಾತಾಡುತ್ತಾ ಕಿರಿಯರಾದ ಶ್ರೀ ಗಡ್ಕರಿ ಅವರಿಗೆ ಸೇತುವೆ ಕೊಟ್ಟಿದ್ದಕ್ಕಾಗಿ ನಿಮ್ಮ ಕಾಲಿಗೆ ಬೀಳುತ್ತೇನೆ ಅಂದಾಗ ಅಳು ಬಂತು! ಅದು ನಮ್ಮೆಲ್ಲರ ಇವತ್ತಿನ ಭಾವನೆಗಳ ಒಟ್ಟು ಸಾರ. ಹೌದು, ಅವರು ನಮ್ಮೆಲ್ಲರ ಭಾವನೆಗಳನ್ನ ಒಂದೇ ವಾಕ್ಯದಲ್ಲಿ ಹೇಳಿದರು. ಅದಕ್ಕಿಂತ ಸುಂದರವಾಗಿ ಬಹುಶಃ ಯಾರೂ ಹೇಳಲಾರರು! ಈ ಸೇತುವೆ ನಮಗೆ ಕೇವಲ ಸಂಪರ್ಕ ಸಾಧಕ ಮಾತ್ರ ಅಲ್ಲ, ಅದು ನಮ್ಮ ಎರಡು ತಲೆಮಾರುಗಳ ಗೋಳಿನ, ಅನ್ಯಾಯದ ಮತ್ತು ದಾಸ್ಯದ ಬಿಡುಗಡೆ! ಅದಕ್ಕಾಗೇ ಈ ಪರಿಯ ಸಂಭ್ರಮ.
-ಭರತ್ ನಾಡಿಗ್, ವಿಜಯನಗರ ಸಾಗರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ