ಮಂಗಳೂರು: ಕಳೆದ ಮೇ ತಿಂಗಳಲ್ಲಿ ನಡೆದ ಜಾಗತಿಕ ಸ್ವಯಂಸೇವಕ ಮಾಸಾಚಾರಣೆ (ಜಿಎಂವಿ)ಯಡಿ ಅಮೆಜಾನ್ ಇಂಡಿಯಾದ 60 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು 350ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೆರವಿನ ಹಸ್ತ ಚಾಚಿದರು.
ದೇಶದಾದ್ಯಂತ 66,000ಕ್ಕೂ ಹೆಚ್ಚು ಉದ್ಯೋಗಿಗಳು ಸಮುದಾಯ ಉಪಕ್ರಮಗಳಿಗೆ ತಮ್ಮ ಸಮಯ ಮತ್ತು ಕೌಶಲಗಳನ್ನು ಕೊಡುಗೆಯಾಗಿ ನೀಡಿದ್ದಾರೆ. "ಜಿಎಂವಿ 2025'ರ ಸಮಯದಲ್ಲಿ ತಂಡದ ಸದಸ್ಯರು ದೇಶದಾದ್ಯಂತ 60ಕ್ಕೂ ಹೆಚ್ಚು ನಗರಗಳಲ್ಲಿ 530 ವಿಶಿಷ್ಟ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ ಎಂದು ಸಂಸ್ಥೆಯ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಮತ್ತು ಗ್ರಾಹಕ ಸೇವಾ ಕಾರ್ಯಾಚರಣೆಗಳ ಸಹವರ್ತಿ ಅಮೂಲ್ಯ ದೇವಲರಾಜು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಹಿಳಾ ಸಬಲೀಕರಣ, ಸುಸ್ಥಿರತೆ, ಶಿಕ್ಷಣ, ಆಹಾರ ಭದ್ರತೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸೀಮಿತ ಭೌಗೋಳಿಕ ಪ್ರದೇಶಗಳಿಗೆ ನೆರವು ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು.
ನಗರಗಳಲ್ಲಿನ ಕೆರೆಗಳನ್ನು ಪುನಶ್ಚೇತನಗೊಳಿಸಲು ಚೌಗು ಪ್ರದೇಶಗಳನ್ನು ನಿರ್ಮಿಸುವುದರಿಂದ ಹಿಡಿದು ಸುಮಾರು 2,00,000 ಊಟಗಳನ್ನು ಪೂರೈಸುವ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸುವವರೆಗೆ, ಸಮುದಾಯದ ಸವಾಲುಗಳನ್ನು ಪರಿಹರಿಸಲು ಅಮೆಜಾನ್‍ನ ಅನುಶೋಧನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಒಂದು ವರ್ಷದಲ್ಲಿ ಸುಧಾರಣಾ ಕ್ಷೇತ್ರಗಳಿಗೆ ನೆರವಾಗಲು 1,00,000ಕ್ಕೂ ಹೆಚ್ಚು ಸಂಪನ್ಮೂಲ ಕಿಟ್‍ಗಳನ್ನು ವಿತರಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‍ಟಿಇಎಂ) ಕಿಟ್‍ಗಳು, ಕ್ರೀಡಾ ಕಿಟ್‍ಗಳು, ಮುಟ್ಟಿನ ಕಿಟ್‍ಗಳು, ಪ್ರಥಮ ಚಿಕಿತ್ಸಾ ಕಿಟ್‍ಗಳು, ಸ್ಟೇಷನರಿ ಕಿಟ್‍ಗಳು, ಶ್ವಾನ ಆರೈಕೆ ಕಿಟ್‍ಗಳು, ವಿಜ್ಞಾನ ಮಾದರಿಗಳು, ರಸಪ್ರಶ್ನೆ ಫಲಕಗಳ ಜೋಡಣೆ ಮತ್ತು ಸೈಕಲ್‍ಗಳು ಸೇರಿದಂತೆ ಹಲವಾರು ಕಿಟ್‍ಗಳು ಇದರಲ್ಲಿ ಸೇರಿವೆ ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ