ಹುನಗುಂದ: ಬಾಗಲಕೋಟೆ ನಡೆದಾಡುವ ದೇವರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಅಮೃತ ಹಸ್ತದಿಂದ 1997ರಲ್ಲಿ ಶುರುವಾದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಸ್ತುತ ರಜತ ಮಹೋತ್ಸವ ಆಚರಿಸುವ ಮಟ್ಟಕ್ಕೆ ಬೆಳೆದಿರುವುದು ಆ ಸ್ವಾಮಿಗಳ ಶುಭಾರ್ಶೀವಾದ ಕಾರಣ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೇಳಿದರು ಹೇಳಿದರು.
ಎಸ್ ಆರ್ ಪಾಟೀಲ್ ಸಾಂಗ್ ಸಮೂಹ ಸಂಸ್ಥೆಗಳು ಬಾಡಗಂಡಿ ಅವರ ಅಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವದ ನಿಮಿತ್ತ ಬ್ಯಾಂಕಿನ ನವೀಕೃತ ಕಟ್ಟಡ, ಶಾಲಾ ನೂತನ ಕಟ್ಟಡ ಮತ್ತು ಎಸ್ಆರ್ ಪಾಟೀಲ್ ಶಿಕ್ಷಣ ಪ್ರತಿಷ್ಠಾನದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬರೀ ಹನ್ನೊಂದು ಲಕ್ಷ ರೂಪಾಯಿ ಶೇರು ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಇಂದು ಸುಮಾರು 900 ಕೋಟಿ ಬಂಡವಾಳ ಹೊಂದುವಷ್ಟು ಬೆಳೆದಿದೆ. ಸುಮಾರು ಹತ್ತು ಸಾವಿರದಷ್ಟು ಪೂರಕ ಉದ್ಯೋಗಗಳನ್ನು ನಮ್ಮ ಬ್ಯಾಂಕ್ ಒದಗಿಸಿದೆ.
ಇಂದು ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ ವಿಜಯಸಾಧಿಸಿದ ದಿನವಿದು. ಇಂತಹ ಮಹತ್ವದಾಯಕವಾದ ಘಳಿಯ ಶುಭ ದಿನದಂದೇ ನಮ್ಮ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮ ಜರುಗುತ್ತೀರುವುದು ನನ್ನ ಪುಣ್ಯ ಇದು ನಮ್ಮ ಸಂಸ್ಥೆಯ ಇತಿಹಾಸದಲ್ಲಿಯೇ ಚಾರಿತ್ರ್ಯಿಕ ಸಮಾರಂಭ ಎಂದ್ರೂ ತಪ್ಪಾಗಲಾರದು.
ಶತಮಾನಗಳಷ್ಟು ಹಳೆಯದಾದ ಬ್ಯಾಂಕ್ ಗಳ ಪೈಪೋಟಿಗಳನ್ನು ಎದುರಿಸಿ ಇವತ್ತು ರಜತ ಮಹೋತ್ಸವ ಆಚರಿಸುವ ಮಟ್ಟಕ್ಕೆ ನಮ್ಮ ಬ್ಯಾಂಕ್ ಬೆಳೆದಿರುವುದು ಸಣ್ಣ ವಿಚಾರವಲ್ಲ ಇದರ ಹಿಂದೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣದವರ ಪರಿಶ್ರಮ ಇದೆ. ಹೇಳಿದರು ಮುಂದುವರೆದು ನಮ್ಮ ಬ್ಯಾಂಕ್ ರಜತ ಮಹೋತ್ಸವದ ನಿಮಿತ್ತ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಾವು ಕಟ್ಟಿದ ಮೊದಲ ಸಂಸ್ಥೆ ಆಗಿದೆ. ಅಲ್ಲಿಂದ ನಾವು ಹಿಂತಿರುಗಿ ನೋಡಲೇಇಲ್ಲ. ಇವತ್ತು ಬ್ಯಾಂಕ ಹದಿನೆಂಟು ಶಾಖೆಗಳನ್ನು ಹಾಗೂ ಎಲ್ ಕೆಜಿ ಯಿಂದ ವೈದ್ಯಕೀಯ ಕಾಲೇಜ್ ಹಂತಕ್ಕೆ ಎಸ್ ಆರ್ ಪಾಟೀಲ ಸಮೂಹ ಸಂಸ್ಥೆಗಳ ಬೃಹತ್ ಮಟ್ಟಕ್ಕೆ ಬೆಳೆಯಲು ಬೀಳಗಿ ಪಟ್ಟಣ ಬ್ಯಾಂಕ್ ನಮಗೆ ತಳಪಾಯವಾಗಿದೆ ಎಂದು ಹೇಳಿದರು.
ನಮ್ಮ ಸಮೂಹ ಸಂಸ್ಥೆಗಳು ಜಾತ್ಯಾತೀತ, ಧರ್ಮಾತೀತ ಪರಿಕಲ್ಪನೆಯ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತೀವೆ. ನಮ್ಮ ಸಂಸ್ಥೆಗಳಲ್ಲಿ ಯಾವತ್ತೂ ಕೂಡ ನಾವು ಮೇಲು, ಕೀಳು ಭೇದಭಾವ ಮಾಡುವುದಿಲ್ಲ. ಮನುಷ್ಯ ಈ ಭೂಮಿಗೆ ಬಂದ ಮೇಲೆ ಜನ್ಮ ಕೊಟ್ಟ ತಂದೆ, ತಾಯಿಗಳ, ವಿದ್ಯೆ ಕೊಟ್ಟ ಗುರುಗಳ, ಜನ್ಮ ನೀಡಿದ ಭೂಮಿತಾಯಿ ಕೊನೆಗೆ ನಾವು ಹುಟ್ಟಿದ ಊರು, ಈ ನಾಡಿನ ಋಣ ತೀರಿಸುವ ಕೆಲಸ ಮಾಡಿದಾಗ ಮಾತ್ರವೇ ನಾವು ಮನುಷ್ಯರಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ನಾನು ಭಾವಿಸಿದ್ದೇನೆ. ಈ ಸಮಾಜದ ಅಭಿವೃದ್ಧಿಗೆ ನಾನು ಜೀವಂತ ಇರುವ ತನಕವೂ ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು.
ಈ ವೇಳೆಯಲ್ಲಿ ಪ.ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಚಿವರಾದ ಕೆ.ಎಚ್ ಮುನಿಯಪ್ಪ, ಎಚ್ ಕೆ ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್ ಬಿ ತಿಮ್ಮಪೂರ, ಸಂಸದ ಪಿ ಸಿ ಗದ್ದಿಗೌಡರ, ಶಾಸಕರಾದ ಎಚ್ ವೈ ಮೇಟಿ, ಭೀಮಸೇನ ಚಿಮ್ಮನಕಟ್ಟಿ ವಿಧಾನ ಪರಿಷತ್ ಸದಸ್ಯ ಪಿ ಎಚ್ ಪೂಜಾರಿ, ಹನಮಂತ ನೀರಾಣಿ, ಎಸ್ ಜಿ ನಂಜಯ್ಯನಮಠ, ಬಸವಪ್ರಭು ಸರನಾಡಗೌಡ, ಎಂ ಎನ್ ಪಾಟೀಲ ಸೇರಿದಂತೆ ಬ್ಯಾಂಕಿನ ನಿರ್ದೇಶಕ ಮಂಡಳಿ, ಸಿಬ್ಬಂದಿ ವರ್ಗದವರು ನಮ್ಮ ಸಮೂಹ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಗ್ರಾಹಕರು ಸಾರ್ವಜನಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ