.png)
ಶಿವಮೊಗ್ಗ: ಮನಸ್ಫೂರ್ತಿ ಕಲಿಕಾ ತರಬೇತಿ ಕೇಂದ್ರ, ಮಾನಸಾಧಾರ ಟ್ರಸ್ಟ್ (ರಿ) ಮತ್ತು ಜನಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕೈ ಕಸೂತಿ ಮತ್ತು ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು. ಈ ತರಬೇತಿ ಶಿಬಿರದ ಕಾರ್ಯಕ್ರಮವನ್ನು ಜನಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಸ್.ವೈ. ಅರುಣಾದೇವಿಯವರು ಉದ್ಘಾಟಿಸಿ "ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದೊಂದಿಗೆ ಇತರೆ ಕೌಶಲ್ಯಗಳನ್ನು ಕಲಿಯಬೇಕಾಗಿದೆ" ಎಂದು ಹೇಳುತ್ತಾ ಜನಶಿಕ್ಷಣ ಸಂಸ್ಥೆ ಮತ್ತು ಮಾನಸಾಧಾರ ಟ್ರಸ್ಟ್ (ರಿ) ವತಿಯಿಂದ ಕೌಶಲ್ಯಗಳನ್ನು ಪಡೆದ ಕೆಲವು ಸಾಧಕರ ಹೆಸರುಗಳನ್ನು ಹೇಳುವುದರ ಮೂಲಕ ತರಬೇತುದಾರಿಗೆ ಸ್ಪೂರ್ತಿ ತುಂಬಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ.ಎ.ಪೈರವರು "ಹೊಲಿಗೆ ಮತ್ತು ಕೈ ಕಸೂತಿ ತರಬೇತಿಯನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಂಡು ಸಣ್ಣ ಸಣ್ಣ ಕೈ ಚೀಲಗಳನ್ನು ಹೊಲಿದು ಸಹ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು" ಎಂದು ನುಡಿದರು.
ಈ ತರಬೇತಿ ಪಡೆಯಲು ಇನ್ನೂ 20 ಜನರಿಗೆ ಅವಕಾಶವಿದ್ದು, ತರಬೇತಿ ತೆಗೆದುಕೊಳ್ಳಲು ಬಯಸುವವರು ತಮ್ಮ ಆಧಾರ್ ಕಾರ್ಡ್ ಹಾಗೂ ಫೋಟೋದೊಂದಿಗೆ ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ಜುಲೈ 10 ರ ಒಳಗಾಗಿ ನೋಂದಣಿ ಮಾಡಿಸಬಹುದು. ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ಕಲಿಕಾ ಮಟ್ಟ ಕಡಿಮೆ ಇರುವಂತಹ ಮಕ್ಕಳಿಗೂ ವಿಶೇಷ ಶಿಕ್ಷಣ ನೀಡುವುದರ ಜೊತೆಗೆ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ.
ಕು. ಶಿಲ್ಪಾರವರು ಕಾರ್ಯಕ್ರಮ ನಿರೂಪಿಸಿದರು. ಮನಸ್ಪೂರ್ತಿ ವಿಶೇಷ ಶಾಲೆಯ ಸಂಯೋಜಕಿ ಜ್ಯೋತಿ ಅರುಣ್ ಕುಮಾರ್ ರವರು ಸ್ವಾಗತಿಸಿದರು. ಪ್ರಾರ್ಥನೆಯನ್ನು ಪದ್ಮಿನಿ ಹಾಗೂ ವಂದನಾರ್ಪಣೆಯನ್ನು ಸುಜಾತ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜನಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿಗಳಾದ ಸುಮಾ, ಮನಃಸ್ಪೂರ್ತಿಯ ಸಂಯೋಜಕರಾದ ರಂಗನಾಯಕಿ ಸೇರಿದಂತೆ ಸಂಸ್ಥೆಯ ಎಲ್ಲಾ ಬೋಧಕ - ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ