ಶೈಲಜಾ ಪ್ರಶಾಂತ್ ಅವರಿಗೆ SIWAA 2025 ವುಮೆನ್ ಅಚೀವರ್ ಚೇಂಜ್ ಮೇಕರ್ ಅವಾರ್ಡ್

Upayuktha
0



ದಾವಣಗೆರೆ: ಸೌತ್ ಇಂಡಿಯನ್ ವುಮೆನ್ ಅಚಿವರ್ ಅವಾರ್ಡ್ ಈ ಕಾರ್ಯಕ್ರಮ ಜುಲೈ 6ರಂದು ಚೆನ್ನೈನ ಎಂಸಿಸಿ ಸ್ಕೂಲ್ ಆಡಿಟೋರಿಯಂನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಟ್ವೆಲ್ ಮ್ಯಾಗಝಿನ್ ಆಯೋಜಿಸಿದ್ದು ಟ್ವೆಲ್‌ನ ಸ್ಥಾಪಕ ಸಿಇಓ ಮತ್ತು ಪ್ರಧಾನ ಸಂಪಾದಕ ದೀಪಕ್ ಟಾಟರ್ ಜೈನ್ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ದೇಶದಾದ್ಯಂತ 400ಕ್ಕೂ ಹೆಚ್ಚು ಮಹಿಳಾ ಸಾಧಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 60,000 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ 300 ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಯಿತು.

300ರಲ್ಲಿ ಒಬ್ಬರಾದ ಶೈಲಜಾ ಪ್ರಶಾಂತ್ ಅವರು ಅತ್ತಿಗೆರೆ ಎಂಬ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಅವಶ್ಯವಿರುವ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದ್ದಾರೆ. ಬ್ಯೂಟಿಷಿಯನ್, ಎಂಬ್ರಾಯ್ಡರಿ ಟೈಲರಿಂಗ್ ಹಲವು ಸೇವೆಗಳನ್ನು ಒದಗಿಸಲು ಮುಂದಾಗಿದ್ದಾರೆ. ಇವರದೇ ಆದ ಶ್ರೀಶೈಲ ಕಲಾಸಾಗರ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ಹಲವು ತರಬೇತಿಗಳನ್ನು ನೀಡುವುದು ಇವರ ಗುರಿಯಾಗಿದೆ . ಇವರ ಬಹುಮುಖ ಪ್ರತಿಭೆಗಳನ್ನು ಗುರುತಿಸಿ SIWAA 2025 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆ ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸಂಸ್ಥೆಯ  ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿಮಾನದಿಂದ ಅಭಿನಂದಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top