ಮಂಗಳೂರು: ಗುರು ಪೂರ್ಣಿಮೆ ಅಂಗವಾಗಿ ಸಂಸ್ಕಾರ ಭಾರತಿಯ ಮಂಗಳೂರು ಮಹಾನಗರ ಘಟಕದ ವತಿಯಿಂದ ಐವರು ಹಿರಿಯ ಸಾಧಕರನ್ನು ಅವರ ನಿವಾಸಕ್ಕೆ ತೆರಳಿ ಗುರು ನಮನ ಸಲ್ಲಿಸುವ ಕಾರ್ಯಕ್ರಮ ಗುರುವಾರ ನಡೆಯಿತು.
ದೈವದ ಪಾರ್ದನ ಹಾಗೂ ಗಿಡಮೂಲಿಕೆ ಔಷಧದಲ್ಲಿ ವಿಶೇಷ ಅನುಭವ ಇರುವ ಹಾಗೂ 300ಕ್ಕೂ ಮಿಕ್ಕಿ ಆರೋಗ್ಯಕರ ಹೆರಿಗೆ ನಡೆಸಿರುವ ಭವಾನಿ(ಜಾನಪದ), ಬಾಲ್ಯದಲ್ಲಿಯೇ ಆರೆಸ್ಸೆಸ್ ಕಾರ್ಯಕರ್ತರಾಗಿ, ಬಿಎಂಎಸ್ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹಿರಿಯ ಸಮಾಜ ಸೇವಕ ಕೆ.ವಿಶ್ವನಾಥ ಶೆಟ್ಟಿ(ಸಮಾಜಸೇವೆ), ಪೌರಾಣಿಕ, ಐತಿಹಾಸಿಕ ನಾಟಕಗಳ ಪಾತ್ರಕ್ಕೆ ಪ್ರಸಾದನಕಾರರಾಗಿ ಕಲಾ ನೈಪುಣ್ಯ ಮೆರೆದ ಹಿರಿಯ ರಂಗಕರ್ಮಿ ಗಿರಿಯಪ್ಪ ಇಡ್ಯಾ(ಪ್ರಸಾದನ ಕಲೆ), ಬಾಲ್ಯದಲ್ಲಿಯೇ ವಾದನ ಪರಿಕರದಲ್ಲಿ ಆಸಕ್ತಿ ಹೊಂದಿ ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ ತಾಸೆ, ಡೋಲು, ಸೈಟ್ ಡ್ರಮ್ ಮುಂತಾದ ಪರಿಕರಗಳಲ್ಲಿ ಕಲಾಸೇವೆ ಮಾಡಿರುವ ಶ್ರೇಷ್ಠ ಸಾಧಕ.
ರಾಮ(ವಾದ್ಯ ಪರಿಕರ), ದೃಷ್ಟಿಹೀನರಾಗಿದ್ದರೂ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹೊಂದಿ ಕರ್ನಾಟಕ, ಧರ್ಮಸ್ಥಳ, ಸುರತ್ಕಲ್ ಕಟೀಲು ಮೇಳಗಳಲ್ಲಿ ಚಕ್ರತಾಳ ವಾದಕರಾಗಿ ತಿರುಗಾಟ ನಡೆಸಿರುವ ಪಿ.ಸುರೇಶ್ ಕಾಮತ್ ಅವರಿಗೆ ಗುರುನಮನ ಸಲ್ಲಿಸಲಾಯಿತು. ನಿಟ್ಟೆ ವಿದ್ಯಾಸಂಸ್ಥೆ ವತಿಯಿಂದ ನಗದು ಪುರಸ್ಕಾರ ಹಾಗೂ ಸನ್ಮಾನ ಪತ್ರ ನೀಡಲಾಯಿತು.
ಘಟಕದ ಅಧ್ಯಕ್ಷ ಪುರುಷೋತ್ತಮ ಕೆ.ಭಂಡಾರಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೊಳ್ಳ, ಸಂಸ್ಕಾರ ಭಾರತಿ ಮಾರ್ಗದರ್ಶಕ ಚಂದ್ರಶೇಖರ್ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಬೆಂಗಳೂರು, ರಾಜ್ಯ ಕಾರ್ಯದರ್ಶಿ ನಾಗರಾಜ್ ಮಂಗಳೂರು, ರಾಜ್ಯ ಸಹ ಕೋಶಾಧಿಕಾರಿ ರಘುವೀರ್ ಗಟ್ಟಿ, ಜಾನಪದ ಪ್ರಮುಖ್ ದಯಾನಂದ ಕತ್ತಲ್‌ಸಾರ್, ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಕ್ರೀಡಾ ಭಾರತಿ ರಾಜ್ಯ ಕಾರ್ಯ ಕಾರಿಣಿ ಸದಸ್ಯ ಭೋಜಾರ್ ಕಲಡ್ಕ.
ಮಂಗಳೂರು ಮಹಾನಗರ ಉಪಾಧ್ಯಕ್ಷರಾದ ರಾಜಶ್ರೀ ಉಳ್ಳಾಲ್, ಧನಪಾಲ್ ಶೆಟ್ಟಿಗಾರ್, ಕಾರ್ಯದರ್ಶಿಗಳಾದ ಮಾಧವ ಭಂಡಾರಿ, ಗಣೇಶ್ ಬೋಳೂರು, ಪ್ರದರ್ಶಕ ಕಲಾ ಪ್ರಮುಖ್ ಶ್ರೀಲತಾ ನಾಗರಾಜ್, ಸಾಹಿತ್ಯ ಪ್ರಮುಖ್ ಪ್ರವೀಣ್ ಬಸ್ತಿ, ಕೋಶಾಧಿಕಾರಿ ಚಂದ್ರಪ್ರಭ, ಕಾರ್ಯ ಕಾರಿಣಿ ಸದ್ಯಸರಾದ ಕಿರಣ್, ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್, ಜಗನ್ನಾಥ್ ಶೆಟ್ಟಿ, ಸಾಹಿತಿ ಗೀತಾ ಲಕ್ಷ್ಮೀಶ್, ಜಯಶ್ರೀ, ಸುಮಂಗಲ, ರಾಜೇಶ್ವರಿ,, ರಾಮ ಶಿರೂರು, ಕೌಶಿಕ್, ಕೀರ್ತನ, ಹೇಮಂತ್, ವಾರಿಜಾ, ನೃತ್ಯ ಗುರು ಭಾರತಿ, ಸಿಂಚನ, ಕೆ.ಕೆ.ಪೇಜಾವರ, ಯಕ್ಷಗುರು ಗಿರೀಶ್ ನಾವುಡ, ಪತ್ರಕರ್ತ ಆನಂದ ಶೆಟ್ಟಿ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ