ಕೆಲವು ದಿನಗಳ ಹಿಂದೆ ಪಡ್ರೆ ಸರ್ ಹಲಸಿನ ಬೀಜದ ಹಪ್ಪಳದ ಬಗ್ಗೆ ಹೇಳಿದರು. ಒಬ್ಬರು ಹಪ್ಪಳ ಮಾಡಿರುವ ಬಗ್ಗೆಯೂ ಹೇಳಿದರು.
ನಾವು ಹಲಸಿನ ಬೀಜದ ಹಿಟ್ಟು (ಹಬೀಹು) ತಯಾರಿಸಿ ಮಾರಾಟ ಮಾಡುತ್ತೇವೆ. ಮಾರಾಟ ಮಾಡುವಾಗ ಸುಮಾರು ಉತ್ಪನ್ನಗಳ ಪ್ರಯೋಗವನ್ನೂ ಮಾಡಿದ್ದೆವು.
ದೋಸೆ, ಚಪಾತಿ, ಖೀರು, ಚಟ್ನಿ ಪುಡಿ, ಲಾಡು, ಮಾಲ್ಟ ಪುಡಿ, ಹಲ್ವಾ ಈ ತರ...
ಆದರೆ ಹಪ್ಪಳ ಮಾಡಿರಲಿಲ್ಲ. ಸರ್ ಮೊನ್ನೆ ಹಪ್ಪಳದ ಸುದ್ದಿ ಹೇಳಿದಾಗ ಅದೊಂದು ಮಾಡಿ ನೋಡುವ ಅಂತ ವಿಚಾರ ಬಂತು.
ಮನೆಯಲ್ಲಿ ಹಬೀಹು ಅಂತೂ ಇತ್ತು. ಎರಡು ರೀತಿಯಲ್ಲಿ ಹಪ್ಪಳ ಮಾಡುವ ವಿಚಾರ ಬಂತು.
ಒಂದು ಲೋಟ ಹಬೀಹುವನ್ನು 9 ಲೋಟ ಕುದಿಯುವ ನೀರಿಗೆ ಸೇರಿಸಿ (ಅಕ್ಕಿ ಹಿಟ್ಟಿನ ಹಪ್ಪಳ ಮಾಡಿದ ರೀತಿ) ಮಾಡಿದೆವು.
ಮತ್ತೊಂದು ರೀತಿಯಲ್ಲಿ, ಅಂದರೆ ಹಬೀಹುವನ್ನು ನೀರಿನಲ್ಲಿ ಕಲಸಿ ಉಗಿಯಲ್ಲಿ ಬೇಯಿಸಿ ಲಟ್ಟಿಸಿ ಮಾಡಿದೆವು.
ಹಲಸಿನ ಬೀಜ ಬೆಯಸಿ ರುಬ್ಬಿ ಕೂಡ ಮಾಡಬಹುದು. ಹ.ಬೀ.ಹಿ ಇಲ್ಲದಿದ್ದರೆ ಬೀಜ ಬೇಯಿಸಿ ರುಬ್ಬಿ ಕೂಡ ಮಾಡಬಹುದು.
ಎರಡೂ ರೀತಿಗಳಲ್ಲಿ ಮಾಡಿ ನೋಡಿದಾಗ ಹಬೀಹುನಲ್ಲಿ ಅಂಟಿನ ಅಂಶ ಇಲ್ಲದಿರುವುದರಿಂದ ಅಂಟು ಬರಲಿಕ್ಕೆ ಬೇರೆ ಧಾನ್ಯದ ಪುಡಿ ಬೇಕಾಗಬಹುದು ಅಂತ. ಅದು ಎಷ್ಟು ಪ್ರಮಾಣದಲ್ಲಿ ಬೇಕೆಂದು ತಿಳಿದುಕೊಳ್ಳಬೇಕಿದೆ.
ಇನ್ ರುಚಿಯ ಬಗ್ಗೆ ಹೇಳಬೇಕು ಅಂದರೆ ತುಂಬಾ ರುಚಿಯಾಗಿ ಬಂತು. ಹಲಸಿನ ಹಪ್ಪಳದ ರುಚಿಗೆ ಇದರ ಹಪ್ಪಳ ರುಚಿಗೆ ವ್ಯತ್ಯಾಸ ಇದೆ. ಹಾಕುವ ಮಸಾಲೆಯಿಂದಲೂ ಇರಬಹುದು.
ಸರಿಯಾದ ಪ್ರಯೋಗ ನಡೆಸಿ ಸ್ಟಾಂಡಾರ್ಡೈಸ್ ಮಾಡಿಕೊಂಡರೆ, ಹಲಸಿನ ಹಪ್ಪಳದ ರೀತಿ ಹಬೀಹು ಹಪ್ಪಳ ಕೂಡ ಯಶಸ್ಸು ಆಗಿ ಒಳ್ಳೆಯ ಮಾರುಕಟ್ಟೆಗೆ ಬರಬಹುದು.
-ವಸುಂಧರಾ ಹೆಗಡೆ, ಶಿರಸಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ