ಪನ್ರುತ್ತಿಯ ಯುವ ಗೃಹಿಣಿ ಶರಣ್ಯ ಹರಿದಾಸ್ ಈಚೆಗೆ ತಾಜಾ ಹಲಸಿನ ಬೀಜದಿಂದ (ಹಬೀ) ನವೀನ ರೀತಿಯ ಹಲ್ವ ತಯಾರಿಸಿದ್ದಾರೆ.
ಹಲಸಿನ ಬೀಜ ಅರೆದು ಹಾಲು ಹಿಂಡಿ ಅದಕ್ಕೆ ಸೇರಿಸಿದ್ದು ಸಕ್ಕರೆ ಮತ್ತು ಗೋಡಂಬಿ ಮಾತ್ರ. ಗಟ್ಟಿಗೊಳಿಸಲು ಸ್ವಲ್ಪ ಕಾರ್ನ್ ಫ್ಲೋರ್.
ವಾಟ್ಸಪ್ ಮೂಲಕ ಇದರ ಪಟ, ಮಾಹಿತಿ ಪಡೆದ ಕಣ್ಣೂರಿನ ಉತ್ಸಾಹಿ ಗೃಹಿಣಿ ಶೀಬಾ ಸನೀಶ್ ಹಹಾಹ (ಹಬೀ ಹಾಲಿನ ಹಲ್ವ) ತಯಾರಿಸಿದರು. ಶೀಬಾ ಹಿಂದೆಯೂ ಇದನ್ನು ಮಾಡಿದ್ದರಂತೆ. ಪನ್ರುತ್ತಿಯ ಸುದ್ದಿ ಕೇಳಿ ಮಾಡಿದವ ಈಗಿನ ಉದ್ಗಾರ: ’ಟೇಸ್ಟಿ, ವಳರೆ ಟೇಸ್ಟಿ’. ಕೆಳಗಿನ ಪಟ ಇವರಿಗೆ ಪಾಕದ್ದು.
ಕಾಸರಗೋಡು ಕೇವೀಕೆಯ ಡಾ. ಸರಿತಾ ಹೆಗಡೆ ಅವರಿಗೂ ಮಾಡೋಣ ಅನ್ನಿಸಿ ಬೆಲ್ಲ ಹಾಕಿ ಮಾಡಿದರು. 'ರುಚಿ ಭಾರೀ ಚೆನ್ನಾಗಿದೆ. ಎಷ್ಟು ತುಂಡು ತಿಂದೆವು ಅಂತ ನೆನಪಾಗೋಲ್ಲ’ ಎನ್ನುತ್ತಾರೆ.
ಸಾಕಷ್ಟು ಆರ್ ಆಂಡ್ ಡಿ ಮಾಡಿ ಪಾಕವಿಧಾನವನ್ನು ಸ್ಟಾಂಡರ್ಡೈಸ್ ಮಾಡಿದರು ಹಹಾಹವನ್ನು ಮಾರುಕಟ್ಟೆಗೇರಿಸಬಹುದು. ಖಂಡಿತ, ಥ್ಯಾಂಕ್ ಯೂ, ಶರಣ್ಯ.
ಅಂದ ಹಾಗೆ ಶೀಬಾ ಸನೀಶ್ ಹಲಸಿನ ಅದೆಷ್ಟೋ ಉತ್ಪನ್ನಗಳ ತಯಾರಿಯಲ್ಲಿ ತರಬೇತಿ ಕೊಡುತ್ತಾರೆ. ಭಾಷೆ ಮಲೆಯಾಳಂ.
-ಶ್ರೀಪಡ್ರೆ,
ಪ್ರಧಾನ ಸಂಪಾದಕರು, ಅಡಿಕೆ ಪತ್ರಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ