ರಂಗಾಯಣದ ಕಲಾವಿದೆ ಗೀತಾ ಮೊಂಟೆಡ್ಕಗೆ ರಂಗ ಸಂಗಮ ಪ್ರಶಸ್ತಿ

Upayuktha
0


ಕಲಬುರಗಿ: ರಂಗ ಜಂಗಮ ಸಂಸ್ಥೆ ವತಿಯಿಂದ 2025 ನೇ ಸಾಲಿನ ಸುಭದ್ರಾ ಜಂಗಮಶೆಟ್ಟಿ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಮೈಸೂರು ರಂಗಾಯಣದ ನಿವೃತ್ತ ಕಲಾವಿದೆ ಶ್ರೀಮತಿ ಗೀತಾ ಮೊಂಟೆಡ್ಕ ಅವರಿಗೆ ನೀಡಿ ಗೌರವಿಸಲಾಗಿದೆ. 


ಕಲಬುರಗಿಯ ವಿಶ್ವೇಶ್ವರ ಭವನ (ಇಂಜಿನಿಯರಿಂಗ್ ಹಾಲ್) ದಲ್ಲಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 20 ರಂದು ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿ ಪುರಸ್ಕೃತರಾದ ಗೀತಾ ಅವರು ಮೈಸೂರು ರಂಗಾಯಣದಲ್ಲಿ 30 ವರ್ಷಗಳ ಕಾಲ ಕಲಾವಿದೆಯಾಗಿ ಸೇವೆ ಸಲ್ಲಿಸಿ ಖ್ಯಾತರಾದವರು. ನಟಿ,ರಂಗ ನಿರ್ದೇಶಕಿ, ನಾಟಕ ರಚನೆಕಾರರು, ಮಿಮಿಕ್ರಿ ಕಲಾವಿದೆಯಾಗಿ, ಅರೆ ಭಾಷಾ ಸಾಹಿತ್ಯ ರಚನೆಕಾರರಾಗಿ ಗುರುತಿಸಿಕೊಂಡವರು. ಪ್ರಸ್ತುತ ಮೈಸೂರಿನಲ್ಲಿರುವ ಗೀತಾ ಅವರಿಗೆ ರಂಗಂ ಜಂಗಮ ಸಂಸ್ಥೆಯು 10,000 ನಗದು, ಪ್ರಶಸ್ತಿ ಫಲಕ, ಶಾಲು, ಹಾರ, ತೊಗರಿ ಬೇಳೆ ಚೀಲ ಮತ್ತು ಮೈಸೂರು ಪೇಟಗಳೊಂದಿಗೆ ಗೌರವ ಸಲ್ಲಿಸಿದೆ.


ಗೀತಾ ಮೊಂಟೆಡ್ಕ ಅವರನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ವಿಶೇಷವಾಗಿ ಸನ್ಮಾನಿಸಿ ಶುಭ ಹಾರೈಸಿದರು. ರಂಗ ಜಂಗಮ ಸಂಸ್ಥೆಯ ಮುಖ್ಯಸ್ಥರು ಹಾಗೂ ಕಲಬುರಗಿ ರಂಗಾಯಣ ಸಂಸ್ಥೆಯ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷ  ರವಿ ಹಿರೇಮಠ ಶಹಾಪುರ ಹಾಗೂ ಸದಸ್ಯ  ಬಸು ಪಾಟೀಲ್ ಜೊತೆಗೆದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top