ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ನಿಗದಿತ ಅವಧಿಯ ವಿಶೇಷ ರಿಯಾಯಿತಿ

Chandrashekhara Kulamarva
0



ಪುತ್ತೂರು: ಇಲ್ಲಿನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ( ಸ್ವಾಯತ್ತ) ಕಾಲೇಜು ಪ್ರಸಕ್ತ ವರ್ಷದಲ್ಲಿ ಪ್ರಥಮ ವರ್ಷದ ಎಂ.ಕಾಂ, ಎಂಎಸ್ಸಿ( ಇಂಡಸ್ಟ್ರಿಯಲ್ ಕೆಮಿಸ್ಟ್ರಿ/ಗಣಿತಶಾಸ್ತ್ರ ಹಾಗೂ ಎಂಸಿಜೆ(ಪತ್ರಿಕೋದ್ಯಮ) ಗೆ ಪ್ರವೇಶಾತಿ ಬಯಸುವ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರಾಯೋಜಕತ್ವದ ಮೂಲಕ ಶುಲ್ಕದಲ್ಲಿ  ವಿಶೇಷ ರಿಯಾಯಿತಿಯನ್ನು ಕಲ್ಪಿಸಿದೆ.


ವಿದ್ಯಾಭ್ಯಾಸವನ್ನು ಪಡೆಯಲಿಚ್ಚಿಸಲಿದ್ದು ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ಈ ವಿಶೇಷ ಅವಕಾಶವನ್ನು ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.


ಈ ವಿಶೇಷ ರಿಯಾಯಿತಿಯು ನಿಗದಿತ  ಅವಧಿಗೆ ಸೀಮಿತವಾಗಿದ್ದು ದಿನಾಂಕ 23.07.2025 ರಿಂದ 30.7.2025 ರ ತನಕ ಇದ್ದು ಮೊದಲು ಬಂದವರಿಗೆ ಆದ್ಯತೆಯನ್ನು ನೀಡಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು.


ಈ ಯೋಜನೆಯಡಿಯಲ್ಲಿ ಕೆಲವೇ ಸೀಟುಗಳು ಲಭ್ಯವಿದ್ದು ಆಯ್ಕೆಯಾಗುವ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಲಾಗುವುದರಿಂದ ಆಸಕ್ತ ವಿದ್ಯಾರ್ಥಿಗಳು ಸಂಬಂಧಪಟ್ಟ ದಾಖಲೆಗಳನ್ನು ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಕಾಲೇಜಿಗೆ ನೀಡಬೇಕಾಗುತ್ತದೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ 9448726100 (ಪ್ರಾಂಶುಪಾಲರು) ಹಾಗೂ 9449268442(ನಿರ್ದೇಶಕರು)ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್  ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top