ಕವನ: ಪಾರ್ವತಿ ನಂದನ

Upayuktha
0


(ಸಾಂಗತ್ಯ ಛಂದಸ್ಸಿನಲ್ಲಿ)


ಗೌರಿಯಪುತ್ರ ವಿನಾಯಕ ದೇವನೆ

ಚಾರುಕರದಲಿ ನೀ ಹರಸು|

ಮಾರಮರ್ದನ ಸುತ ಮೂಷಕವಾಹನ

ಕೋರುವೆ ವಿದ್ಯೆಯ ಕಲಿಸು||


ಮೋದಕ ಹಸ್ತನೆ ಪಾಪವಿನಾಶನೆ

ಬಾಧೆಯ ಕಳೆ ನೀ ಗಣೇಶ|

ವೇದಪಾರಂಗತ ಷಣ್ಮುಖ ಸೋದರ

ಮೋದವ ತೋರು ವಿಘ್ನೇಶ||


ಮೇರೆಯ ಮೀರದ ತೆರದಲಿ ಹಾರೈಸು

ಪಾರವಿಲ್ಲದ ನಲ್ಮೆ ತೋರು|

ಘೋರಪಾಪವ ಮಾಡದೊಲಿರಿಸು ತಂದೆಯೆ

ಕಾರುಣ್ಯ ದೃಷ್ಟಿಯ ಬೀರು||


ಗಜಮುಖ ಹೊಂದಿಹ ಪಾರ್ವತಿ ನಂದನ

ಸುಜನರ ಪೊರೆಯುವ ದೇವ|

ಭಜಿಸುವೆ ನಿನ್ನಯ ಪಾವನ ನಾಮವ

ವಿಜಯ ನೀಡುತ ಕಳೆ ನೋವ||


- ಅಶ್ವತ್ಥನಾರಾಯಣ, ಮೈಸೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top