ಶೇಷಾದ್ರಿಪುರ ರಾಯರ ಮಠದ ವಾರ್ಷಿಕೋತ್ಸವ ; ಶ್ರೀ ಜಯತೀರ್ಥರ ಆರಾಧನೆ

Upayuktha
0



ಬೆಂಗಳೂರು : ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶೇಷಾದ್ರಿಪುರದ ಫ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಾರ್ಷಿಕೋತ್ಸವ ಹಾಗೂ ಶ್ರೀ ಜಯತೀರ್ಥರ ಆರಾಧನೆಯ ನಿಮಿತ್ತ (ಜುಲೈ 15 ರಂದು) ಬೆಳಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕನಕಾಭಿಷೇಕ, ಗಿರಿನಗರದ ಶೃತಿ ಸಂಗೀತ ಶಾಲೆಯ ಸದಸ್ಯರುಗಳಿಂದ ದಾಸರ ಪದಗಳ ಗಾಯನ, ರಥೋತ್ಸವ, ಮಹಾಮಂಗಳಾರತಿ ಹಾಗೂ ಅಲಂಕಾರ ಪಂಕ್ತಿ ಸೇವಾ ಕಾರ್ಯಕ್ರಮಗಳು ಜರುಗಿದವು. 


ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶ್ರೀಮಠದ ವಿಚಾರಣಾಕರ್ತರಾದ ಸುಬ್ಬುನರಸಿಂಹ ಅವರು ತಿಳಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top