ಹೊಸ ಕಾದಂಬರಿ: ಹಳ್ಳಿಜನರ ಬದುಕಿನ ಕಥೆ-ವ್ಯಥೆಗಳ 'ತೊಂಡೆ ಚಪ್ಪರ'

Upayuktha
0


ಪುಸ್ತಕದ ಪ್ರಕಾಶಕರು: ಸಸಿ ಪ್ರಕಾಶನ ಮೈಸೂರು,

ಪುಟಗಳು:128

ಮೊಬೈಲ್ ಸಂಖ್ಯೆ: 951308456

ಬೆಲೆ: 155


ತೊಂಡೆ ಚಪ್ಪರ ಕನ್ನಡದ ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆಯವರ ಮೊದಲ ಕಾದಂಬರಿ. ಮಲೆನಾಡಿನ ಒಂದು ಪರಿಸರದಲ್ಲಿ ನಡೆದ ಕಥೆಯಾಗಿದ್ದರು, ತೊಂಬತ್ತರ ದಶಕದ ಆಸುಪಾಸಿನಲ್ಲಿ ಬಹುಶಃ ಬಹುತೇಕ ಹಳ್ಳಿಯಲ್ಲಿ ಬದುಕುತ್ತಿದ್ದ ಜನರ ಜೀವನದ ಕಥೆ ವ್ಯಥೆಯನ್ನು ಅಕ್ಷರಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 


ಪ್ರಮೋದ್ ಮರವಂತೆಯವರ ಸಾಹಿತ್ಯವನ್ನು ಗುನುಗಿದ್ದ ನಾವು, ಈ ಪುಸ್ತಕದ ಮೂಲಕ ಮಲೆನಾಡಿನ ಭಾಷೆಯ ಮೇಲೆ ಅವರಿಗಿರುವ ಹಿಡಿತ ಮತ್ತು ಸರಳವಾಗಿ ಒಂದು ಕಥೆಯನ್ನು ನಿರೂಪಿಸಿರುವ ರೀತಿಯನ್ನು ಇಲ್ಲಿ ಕಾಣಬಹುದಾಗಿದೆ‌. 


ಈ ಪುಸ್ತಕದ ಆರಂಭದಿಂದ ಅಂತ್ಯದವರೆಗೆ ಬರುವ ಪಾತ್ರಗಳೆಲ್ಲವೂ, ನಾವು ನಮ್ಮ ಬಾಲ್ಯದ ದಿನಗಳಲ್ಲಿ ನೋಡಿಯೂ ಮತ್ತು ಕೆಲವೊಮ್ಮೆ ಮನೆಯಲ್ಲಿ ಹೇಳಿ ಕೇಳಿದ ನೆನಪುಗಳು ಒಮ್ಮೆ ನಮ್ಮ ಮನದ ಪಟಲದಲ್ಲಿ ಬಂದು ಹೋಗುತ್ತದೆ. ಅವಶ್ಯಕತೆಗಿಂತ ಹೆಚ್ಚು ಯಾವ ಪಾತ್ರವನ್ನು ಎಳೆಯದೆ, ಹೆಣೆದು ಕೊಟ್ಟಿದ್ದು ಲೇಖಕರ ಬರವಣಿಗೆಗೆ ಹಿಡಿದ ಕೈಗನ್ನಡಿಯಾಗಿದೆ‌.


ಹಳ್ಳಿಯಲ್ಲೆ ಜನಿಸಿದ ನನಗೆ, ಹಲವಾರು ಸನ್ನಿವೇಶಗಳು ಸ್ವ ಅನುಭವಕ್ಕೆ ಬಂದಿರುವುದರಿಂದ, ನನ್ನ ಬಾಲ್ಯದ ದಿನಗಳ ತುಂಟತನ ಆಸೆ ಮತ್ತು ನಿರಾಸೆಗಳನ್ನು ಇನ್ನೊಮ್ಮೆ ಮೆಲುಕು ಹಾಕಿ ಒಂದು ಮುಗುಳ್ನಗು ಮುಖದಲ್ಲಿ ಜನಿಸಿದ್ದಂತೂ ನಿಜ.


ಎರಡು ಮೂರು ದಶಕಗಳ ಹಿಂದೆ ಬದುಕಿದ್ದ ಎಲ್ಲಾ ವಯಸ್ಸಿನವರು, ಒಂದಲ್ಲಾ ಒಂದು ರೀತಿಯಲ್ಲಿ ಅನುಭವಿಸಿದ ಘಟನೆಗಳ ಮೇಲೆಯೇ ಈ ಕಾದಂಬರಿ ಇರುವುದರಿಂದ, ಓದುವ ಪ್ರತಿಯೊಬ್ಬ ಓದುಗರಿಗೂ ತನ್ನ ಅಂದಿನ ದಿನಗಳ ಬದುಕಿನ ನೆನಪುಗಳು ಮತ್ತೊಮ್ಮೆ ಮೂಡುವುದರಲ್ಲಿ ಸಂಶಯವೇ ಇಲ್ಲ.


- ಪ್ರದೀಪ ಶೆಟ್ಟಿ ಬೇಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top