ಸ್ಫೂರ್ತಿ ಸೆಲೆ: ಬದುಕು ಜಟಕಾ ಬಂಡಿ

Upayuktha
0


ಹಲೋ, ಹೇಗಿದ್ದೀರಾ?

ಬದುಕು ಒಂದು ಜಟಕಾ ಬಂಡಿ 

ವಿಧಿ, ಆದರ ಸಾಹೇಬ,

ಕುದುರೆಯತ್ತ ಪೇಳ್ವದು.

ಮದುವೆ ಮನೆಗೋ, 

ಮಸಣಕೊ ಮಂಕುತಿಮ್ಮ


ಡಿ.ವಿ.ಜಿಯವರ ಈ ಅರ್ಥಪೂರ್ಣ ಸಾಲುಗಳು ನಮ್ಮ ಬದುಕಿನ ವಾಸ್ತವತೆಯನ್ನು ತೆರೆದಿಡುತ್ತವೆ.


ನಮ್ಮ ನಮ್ಮ ಕರ್ಮಗಳೇ ನಮ್ಮ ಪಾಲಿಗೆ ವಿಧಿಯ ರೂಪ ತಾಳಿ ನಮ್ಮನ್ನು ಜೀವನದ ಕೆಲವು ಸಂದರ್ಭಗಳಲ್ಲಿ ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತವೆ. ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ನಮ್ಮ ಕರ್ಮಗಳೇ  ನಮ್ಮ ಹಣೆ  ಬರಹದ ರೂಪ ತಾಳಿ ನಿಂತು ಬಿಡುತ್ತವೆ.


"ಕುದಿದವರು ಆವಿಯಾದರು, ಉರಿದವರು ಬೂದಿಯಾದರು" ಎನ್ನುವಂತೆ ಇನ್ನೊಬ್ಬರ ಜೀವನಕ್ಕೆ ಬೆಂಕಿ ಹಚ್ಚಿ ತುಪ್ಪ ಕಾಯಿಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿದ್ದರೆ ಅದು ನಮ್ಮ ಜೀವನವೆಂಬ ಜಟಕಾ ಬಂಡಿ ವಿನಾಶದತ್ತ ಸಾಗುವ ಸಂಭವವೇ ಜಾಸ್ತಿ.


ಕೃಷ್ಣನು ಗೀತೆಯಲ್ಲಿ "ಉದ್ದರೇದಾತ್ಮಾನಂ" ಎಂಬ ಮಾತಿನಂತೆ ನಮ್ಮ ಜೀವನವನ್ನು ಸಾರ್ಥಕಗೊಳಿಸುವ ಶಕ್ತಿ ನಮ್ಮ ಕೈಯ್ಯಲ್ಲಿದೆ. ನಮ್ಮ ಜೀವನ ಮದುವೆ ಮನೆಯಂತೆ ಮಂಗಳದತ್ತ ಸಾಗಬೇಕೋ, ಅಥವಾ ಮಸಣದಂತೆ ಅವಸಾನದ ಕೇಂದ್ರವಾಗಬೇಕೋ ಎಂಬುದನ್ನು ನಾವೇ ತಾನೇ ನಿರ್ಧರಿಸುವುದು ಹೌದಲ್ಲವೇ?


ನಮ್ಮ ಜೀವನದ ಸೂತ್ರವನ್ನು ಬೇರೊಬ್ಬರ ಕೈಗೆ ಕೊಡದೆ ನಾವೇ ನಮ್ಮ ವಿವೇಕದಿಂದ ಸಾರ್ಥಕ ಮಾಡಿಕೊಳ್ಳೋಣ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top