ಮಂಗಳೂರು: ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಮಾಲತಿ ಪ್ರಭು (ಮಾಲತಿ ಜಿ.ಪೈ) ಅವರು ಮಂಡಿಸಿದ “ಹಿಂದಿ ಕೇ ಲೋಕ್ ಗೀತೋಂ ಮೇ ಗ್ರಾಮೀಣ್ ಜೀವನ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಉತ್ತರ ಪ್ರದೇಶದ ಮಹಾಮಾಯ ಪ್ರಾವಿಧಿಕ ವಿಶ್ವವಿದ್ಯಾಲಯ (ನೋಯ್ಡ)ದ ಭಾಷಾ ಅಧ್ಯಯನ ವಿಭಾಗವು ಪಿಎಚ್‌ಡಿ ಪದವಿಯನ್ನು ನೀಡಿದೆ.
ಅವರು ಉತ್ತರ ಪ್ರದೇಶದ ಮಹಾಮಾಯ ಪ್ರಾವಿಧಿಕ ವಿಶ್ವವಿದ್ಯಾಲಯ (ನೋಯ್ಡ)ದ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ರಾಮನ್ ಶರ್ಮ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಿದ್ದರು.
ಮಾಲತಿ ಪ್ರಭು ಈ ಹಿಂದೆ 2009ರಲ್ಲಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ತಿರುಪತಿಯಿಂದ ಡಾ.ಜಿ. ಭಾಸ್ಕರ ಮಯ್ಯ ಮಾರ್ಗದರ್ಶನದಲ್ಲಿ “ವೋಲ್ಗಾ ಸೆ ಗಂಗಾ ತಕ್- ಏಕ್ ಸಾಂಸ್ಕೃತಿಕ್ ಅಧ್ಯಯನ್” ಎಂಬ ವಿಷಯದಲ್ಲಿ ಎಂ.ಫಿಲ್ ಪದವಿಯನ್ನೂ ಪಡೆದಿರುತ್ತಾರೆ.
ಅವರು ಗೋವಾ ಮತ್ತು ಗೋಕರ್ಣದ ಪೃಥ್ವಿ ಏರ್ ಕಂಡಿಷನರ್ಸ್ ಮಾಲಕ ಆರ್. ಗಣೇಶ್ ಪೈ ಅವರ ಧರ್ಮಪತ್ನಿಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ