ಉಜಿರೆ: "ಯಾವ ವಿಶ್ವವಿದ್ಯಾಲಯವೂ ಮಾತನಾಡುವುದನ್ನು ಕಲಿಸುವುದಿಲ್ಲ. ಅದು ನಿರಂತರ ಅಭ್ಯಾಸದಿಂದ ಮಾತ್ರ ಬರಲು ಸಾಧ್ಯ. ಆ ಕೌಶಲ್ಯವನ್ನು ಬಳಸಿ ಪ್ರತಿಯೊಬ್ಬರೂ ತಮ್ಮ ಐಡೆಂಟಿಟಿಯನ್ನ ಬೆಳೆಸಿಕೊಳ್ಳಬೇಕು" ಎಂದು ರೇಡಿಯೋ ಸಾರಂಗ್‌ನ ಮುಖ್ಯ ಕಾರ್ಯಕ್ರಮ ನಿರ್ಮಾಪಕ ಆರ್‌ಜೆ ಅಭಿಷೇಕ್ ಶೆಟ್ಟಿ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ ಇದರ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಇಂಟರ್ನೆಟ್ ಯುಗದಲ್ಲಿ ಇಂದು ಎಲ್ಲರಿಗೂ ಮಾಧ್ಯಮ ಹತ್ತಿರವಾಗುತ್ತಿದೆ. ಸ್ಮಾರ್ಟ್ ಫೋನ್‌ಗಳ ಮೂಲಕವೇ ಕಂಟೆಂಟ್ ಮಾಡುವವರಿದ್ದಾರೆ. ಇದರಿಂದಾಗಿ ಎಲ್ಲ ಕಡೆಗಳಲ್ಲಿ ಮಾಧ್ಯಮ ಸಂಬಂಧಿತ ಕೋರ್ಸ್‌ಗಳನ್ನು ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಬೇಕಾದ ಕನಸನ್ನು ಹೊತ್ತವರು, ವೃತ್ತಿಪರತೆ, ನೈತಿಕತೆಯನ್ನು ಅರಿತು ಸರಿಯಾದ ಮಾರ್ಗದರ್ಶನ ಪಡೆಯಬೇಕಾಗಿರುವುದು ಅನಿವಾರ್ಯ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, "ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಷ್ಟು ಅವರ ವ್ಯಕ್ತಿತ್ವ ವಿಕಸನ ಸಾಧ್ಯ. ಇದಕ್ಕಾಗಿ ಬೇಕಾದಂತೆ ವಿದ್ಯಾರ್ಥಿ ಸಂಘಗಳು ರೂಪುಗೊಳ್ಳಬೇಕು. ತಂತಮ್ಮ ಕೌಶಲ್ಯಗಳನ್ನು ಪ್ರಸ್ತುತಪಡಿಸಲು ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಬಳಸಬೇಕು" ಎಂದರು.
ಸಹಾಯಕ ಪ್ರಾಧ್ಯಾಪಕ ಇಂದುಧರ ಕಿಣಿ, ಲೂಮೋಸ್ ವಿದ್ಯಾರ್ಥಿ ಸಂಘದ 2024-25ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಲುಮೋಸ್ ವಿದ್ಯಾರ್ಥಿ ಸಂಘದ 2025-26ನೇ ಸಾಲಿನ ಅಧ್ಯಕ್ಷರಾಗಿ ಅಂಕಿತಾ, ಕಾರ್ಯದರ್ಶಿಯಾಗಿ ಪವನ್ ಕುಮಾರ್, ದ್ವಿತೀಯ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಶಿಕಾ ಮತ್ತು ಲುಬ್ನಾ ಮರಿಯಮ್ ಪ್ರಮಾಣ ವಚನ ಸ್ವೀಕರಿಸಿದರು.
ಅಂತಿಮ ವರ್ಷದ ವಿದ್ಯಾರ್ಥಿನಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸಹಾಯಕ ಪ್ರಾಧ್ಯಾಕಪರಾದ ಅಶ್ವಿನಿ ಜೈನ್ ಸ್ವಾಗತಿಸಿ, ತೇಜಸ್ವಿನಿ ಆರ್ ಎಸ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ