ಪತ್ರಿಕೋದ್ಯಮದಲ್ಲಿ ಅಪಾರ ಪ್ರಸಿಧ್ಧರಾಗಿದ್ದ ನಾಡಿಗ ಕೃಷ್ಣಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮದಲ್ಲಿ 25-1-1921 ರಂದು ಜನಿಸಿದರು. ಇವರು ಪತ್ರಿಕೋದ್ಯಮ, ಶಿಕ್ಷಣ, ಬರಹಗಳಿಗೆ ಖ್ಯಾತಿಯನ್ನು ಪಡೆದಿದ್ದ ಅಪರೂಪದ ಲೇಖಕರು. ನಾಡಿಗ ಕೃಷ್ಣಮೂರ್ತಿ ಅವರ ಪ್ರಥಮ ವಿದ್ಯಾಭ್ಯಾಸ ಶಿವಮೊಗ್ಗದಲ್ಲಿ ಪೂರೈಸಿ, ತದನಂತರ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದರು.
ಅಮೇರಿಕಾಕ್ಕೆ ತೆರಳಿ,ಸ್ನಾತಕೋತ್ತರ ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ "ಪತ್ರಿಕೋದ್ಯಮ ಇತಿಹಾಸ" ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಗಳಿಸಿದ ಮಹಾನುಭಾವರು.
ಇವರು ಅನೇಕ ವಿದೇಶ ಪ್ರವಾಸ ಮಾಡಿ ಸಾಕಷ್ಟು ಪತ್ರಿಕೋದ್ಯಮದ ಬಗ್ಗೆ ಅನುಭವ ಸಂಪಾದಿಸಿದರು. ಒಂದು ಕಡೆ ನಿಲ್ಲದ ಇವರು ಪ್ರವಾಸ ಮಾಡಿ ಅಮೇರಿಕಾ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್, ಜಮ೯ನಿ, ಜಪಾನ್, ಚೀನಾ, ಯುಗೋಸ್ಲೋವಿಯ, ಥೈಲ್ಯಾಂಡ್, ಫಿಲಿಪೈನ್ಸ್ ಮುಂತಾದ ದೇಶಗಳನ್ನು ಸುತ್ತಾಡಿ, ಅನೇಕ ಅನುಭವಗಳನ್ನು ಪಡೆದರು. ಹಲವಾರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪನ ನಡೆಸಿ ಬಂದದ್ದು ವಿಶೇಷ.
ಪುನಃ ಇವರು ಮೈಸೂರಿಗೆ ವಾಪಸ್ಸು ಬಂದು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪಾಠ ಪ್ರಾರಂಭಗೊಂಡಾಗ, ಆ ವಿಭಾಗದ ಮುಖ್ಯಸ್ಥರ ಜವಾಬ್ದಾರಿ ವಹಿಸಿ, ನಂತರ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸಿದರು. 1982-1983 ಅವಧಿಯಲ್ಲಿ ಇವರು ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದು ವಿಶೇಷ. ನಾಡಿಗ ಕೃಷ್ಣಮೂರ್ತಿ ಅವರು 40 ಕೃತಿಗಳನ್ನು ರಚಿಸಿದ ಮಹನೀಯರು. ಶಾಂತಿ ಸಾರ್ವಭೌಮರು, ಕಮಲಾ ನೆಹರು, ಭಾರತದ ವೀರರಮಣಿಯರು, ಮುಂತಾದವರ ಜೀವನ ಚರಿತ್ರೆ ಸಹ ರಚಿಸಿದ್ದಾರೆ. ಭಾರತೀಯ ಪತ್ರಿಕೋದ್ಯಮ, ಪತ್ರಿಕೋದ್ಯಮ ಪರಿಚಯ ಮೊದಲಾದವು. ಅದಲ್ಲದೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಸಾಗರದಾಚೆ ಪ್ರವಾಸ ಸಾಹಿತ್ಯ ಕೃತಿ ರಚಿಸಿದ ಮಹನೀಯರು. ಅಮೇರಿಕನ್ ಜರ್ನಲಿಸಂ ಅನುವಾದ ಕೃತಿ ರಚಿಸುವುದಲ್ಲದೆ, ಇಂಗ್ಲಿಷ್ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಮಾನಸ ಗಂಗೋತ್ರಿ ಇವರು ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆಯಾಗಿತ್ತು.
ನಾಡಿಗ ಕೃಷ್ಣಮೂರ್ತಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಶಸ್ತಿ, ಲೋಕ ಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ ಹಿಂದಿ ಸಾಹಿತ್ಯ ಪರಿಷತ್‌ನಿಂದ ಪತ್ರಕಾರ ಶಿರೋಮಣಿ ಬಿರುದು- ಹೀಗೆ ಅನೇಕ ಗೌರವಗಳಿಗೆ ಪುರಸ್ಕೃತರಾದ ಮಹಾನುಭಾವರು. ಇವರು ಸದಾ ಟೆನ್ನಿಸ್, ತೋಟಗಾರಿಕೆ ಮತ್ತು ಪ್ರವಾಸ ಪ್ರಿಯರಾದ ಲೇಖಕರು. ಅನೇಕ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿ, 1983 ರಂದು ನಿಧನರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ