ಲೇಖಾಲೋಕ-47: ಮಹಾನ್ ಚಿಂತಕರು, ವಿದ್ವಾಂಸರು ಲಕ್ಷ್ಮೀಶ ತೋಳ್ಪಾಡಿ

Upayuktha
0




ತೋಳ್ಪಾಡಿತ್ತಾಯ ವಂಶಸ್ಥರ ವೈದಿಕ ಮನೆತನದವರಾಗಿ, ಉತ್ತುಬಿತ್ತು ಗೇಯಕ ಮಾಡುವ ಲಕ್ಷ್ಮೀಶ ತೋಳ್ಪಾಡಿಯವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹತ್ತಿರ ಶಾಂತಿಗೋಡು ಗ್ರಾಮದಲ್ಲಿ ಜನಿಸಿದರು. ಆಡು ಭಾಷೆ ತುಳು ಆಗಿದ್ದರೂ, ವೈಚಾರಿಕ ಮತ್ತು ವೈದಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿ ಯಾಗಿಸಿದ ವ್ಯಕ್ತಿ. ಯೌವನದಲ್ಲಿ, ಇವರಿಗೆ ಬೆಂಗಳೂರಿನಲ್ಲಿ ವೈ ಎನ್ ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ್ ಪತ್ರಿಕೆ, ಕಿ.ರಂ. ನಾಗರಾಜ ಅವರ ಒಡನಾಟವಾಯಿತು. ಭಕ್ತಿ, ಆಧ್ಯಾತ್ಮಿಕ ವ್ಯಾಕರಣದ ಹುಡುಕಾಟ ಮಾಡಿ, ಶಿವಮೊಗ್ಗದಲ್ಲಿ ಸತ್ಯಕಾಮ ಅವರ ಸಂಪರ್ಕ ದೊರಕಿತು. ನಂತರ ಪುತ್ತೂರಿನ  ಅಜ್ಜನ ಸಾಧನೆಯ ಗವಿಯೊಳಗೆ ಬೆಳಕು ಕಂಡು ಇವರನ್ನು ಕೈ ಹಿಡಿದು ನಡೆಸಿದ್ದು ವಿಶೇಷ.


ಬುದ್ಧ, ಗಾಂಧಿಯವರ ಮಧ್ಯಮ ಮಾರ್ಗ ಇವರಿಗೆ ನೆರಳಾಯಿತು. ತದನಂತರ, ಸೂಫಿ ಬ್ಯಾರಿಯವರ ಮಾತುಗಳು ಇವರ ಮೇಲೆ ಗಾಢವಾದ ಪರಿಣಾಮ ಬೀರಿತು. ರೈತಪರ ಚಳುವಳಿಯಲ್ಲೂ ಭಾಗವಹಿಸಿ, ಜಯಶೀಲರಾದರು. ಗ್ರಾಮಸ್ವರಾಜ್ಯದ ಕನಸು ನಿರಂತರ ಕಂಡ ಮಹಾನುಭಾವರು. ಆಧ್ಯಾತ್ಮಿಕ ನಿಗೂಢತೆ, ಜೀವನ ಪ್ರೀತಿಯ ಸರಳ ಜೀವನ ಕಾಣುವ ಇವರ ತುಡಿತ, ಮಾತು, ಮೌನ, ಓದು, ಬರಹಗಳೊಂದಿಗೆ ಸಾಗುತ್ತಲಿವೆ. ವೇದ, ಉಪನಿಷತ್ತು, ಪೌರಾಣಿಕ ಮಹಾಕಾವ್ಯಗಳ ಪದಗಳ ನಡುವಿನ ಮೌನ ತಮ್ಮ ಓದುವಿಕೆಯಲ್ಲಿ ಕಂಡುಕೊಂಡ ಮಹನೀಯರು.


ಗೋತ್ರಗಳು ಹುಟ್ಟಿನಿಂದ ಬರುವುದಿಲ್ಲ ಎಂಬ ಸಮರ್ಥನೆ ಉಪನಿಷತ್ತು ಉದಾಹರಿಸಿದ ಬರಹಗಾರರು. ಪುರಾಣಗಳ ಅನೇಕ ಉದಾಹರಣೆಯನ್ನು ಹೇಳುತ್ತಾ, ತಮ್ಮ ಮಾತಿನ ಹಾರವನ್ನು ಪೋಣಿಸುವ ಲೇಖಕರು. ಲಕ್ಷ್ಮೀಶ ತೋಳ್ಪಾಡಿ ಅವರದು ಕವಿಹೃದಯ, ಮಾತಿನಲ್ಲೂ ಮೌನದಲ್ಲೂ ಕಥನಕಿಂತ ಕಾವ್ಯವೇ ಹೆಚ್ಚಾಗಿದೆ. ಇವರ ಪ್ರಥಮ ಕೃತಿ ಬಂದು, ಭಗವದ್ಗೀತೆಯ ಬಗೆಗಿನ ಮಹಾಯುಧ್ಧಕ್ಕೆ ಮುನ್ನ ಪ್ರಕಟಿತ ಕೃತಿ. ಹಲವಾರು ಪತ್ರಿಕೆಗಳಲ್ಲಿ ಇದರ ವಿಮರ್ಶೆ ಪ್ರಕಟವಾಗಿ, "ಆಧುನಿಕನಿಗೆ ಹೃದಯಸ್ಪರ್ಶಿ" ಮೆಚ್ಚುಗೆ ಪಡೆದ ಲೇಖಕರು.

ಇವರು ಅಂತರ್ಜಾಲದ ಪತ್ರಿಕೆಯಲ್ಲಿ ಸರಣಿಯಲ್ಲಿ ಪುರಾಣ ಗ್ರಂಥ ಭಾಗವತದ ಬಗ್ಗೆ ಬರಹಗಳನ್ನು ಬರೆದರು. ತದನಂತರ ಸಂಪಿಗೆ ಭಾಗವತ ಸಂಕಲನ ಸಹ ಪ್ರಕಟವಾಯಿತು. ಇನ್ನಿತರ ಕೃತಿಗಳಾದ ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ, ಭವತಲ್ಲಣ, (ತಾಳಮದ್ದಳೆ) ಕುರಿತು ಸಹ ಪ್ರಕಟವಾದವು. ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಅವರ ಕನ್ನಡ ಕೃತಿ ಮಹಾಭಾರತ ಅನುಸಂಧಾನ ಭಾರತ ಯಾತ್ರೆಗೆ, ಪ್ರಬಂಧ ವಿಭಾಗದಲ್ಲಿ  2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಕೃತಿ ವ್ಯಾಸ ಮಹಾಭಾರತದ ಪ್ರಬಂಧಗಳ ಸಂಗ್ರಹರೂಪದಲ್ಲಿದೆ. ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ಭಾನುವಾರದ ಅಂಕಣದಲ್ಲಿ ಈ ಪ್ರಬಂಧವು ಪ್ರಕಟವಾಗಿತ್ತು. ಭಗವದ್ಗೀತೆಯ ದಾಶ೯ನಿಕತೆ, ಮತ್ತು ಭಗವದ್ಗೀತೆಯಲ್ಲಿ ಸಮನ್ವಯ ದೃಷ್ಟಿ, ಉತ್ತರ ಕಾಂಡ ಮುಂತಾದವು ಇವರ ಆಧ್ಯಾತ್ಮಿಕ ಕೃತಿ.


ಎಷ್ಟೋ ಕನ್ನಡ ಕೃತಿಗಳು ಸಿಧ್ಧಾಂತ ಸಮಥ೯ನೆಗೊಂಡಿರುವುದು ಆದರೆ ಅವುಗಳು ವಿಮರ್ಶೆಗೆ ಒಳಪಟ್ಟ ಕೃತಿಗಳು ಕೆಲವೇ ಮಾತ್ರ ಎಂಬ ನಿಲುವು ಇವರದು. ಭಕ್ತಿಯ ನೆಪದಲ್ಲಿ, ಆನಂದಲಹರೀ, ಮಹಾಯುಧ್ಧಕ್ಕೆ ಮುನ್ನ, ಬಾಳು ಸಂಪಿಗೆ ಭಾಗವತ, ಮುಂತಾದ ಕೃತಿಗಳನ್ನು ಬರೆದ ಮಹನೀಯರು. ಎಲ್ಲಿಯೇ ಹೊಸ ವಿಷಯವಿರಲಿ ಅಲ್ಲಿ ತೋಳ್ಪಾಡಿಯವರ ಮನಸ್ಸಿರುತ್ತಿತ್ತು. ಮಠದಿಂದ ಮಡಿಯಿಂದ ಹೊರಬಂದು, ಕೆಲ ಕಾಲ ಲಂಕೇಶ್, ಕಿ.ರಂ ಬಳಗ, ವೈಎನ್ ಕೆ ಬಳಗದಲ್ಲಿದ್ದರು.


ಕ್ರಾಂತಿ ಇವರ ಮನಸ್ಸಿನಲ್ಲಿ ತುಡಿಯುತ್ತಿತ್ತು. ಕೃಷಿ ಬದುಕು ಇವರ ಸತ್ಯಾನ್ವೇಷಣೆ ಕಡೆಗೆ ಹೊರಟಿತು. ರೈತರ ಸಂಘಟನೆಗಳ ಮೂಲಕ ರೈತರ ಧ್ವನಿ ಆದರು. ಪರಿಸರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದರು. ತುರ್ತು ಪರಿಸ್ಥಿತಿ ಎದುರಿಸಿ, ಶಿಕ್ಷೆ ಎದುರಿಸುವ ಶಕ್ತಿ ಪಡೆದಿದ್ದರು. ಇವರಿಗೆ ಪ್ರಬಂಧಗಳ ಸಂಗ್ರಹಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ 2023 ರಲ್ಲಿ ಲಭಿಸಿತು. ಹಲವಾರು  ಸಂಘ ಸಂಸ್ಥೆಗಳ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪುತ್ತೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪೂವಾ೯ಧ್ಯಕ್ಷರಾಗಿ ಸೇವೆ ಸಲ್ಲಿಸಿ ಗೌರವ ಪಡೆದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top