ಬೆಳ್ತಂಗಡಿ: ಮನುಷ್ಯರಾದ ಮೇಲೆ ಎಲ್ಲವನ್ನೂ ಸಾಧಿಸುವ ಸಾಮರ್ಥ್ಯ, ಧೈರ್ಯ ಇರಬೇಕು. ಗಡಿಯಲ್ಲಿ ಚಳಿ, ಮಳೆಯನ್ನು ಲೆಕ್ಕಿಸದೆ ದೇಶ ಕಾಯುವ ಯೋಧರಿಂದಾಗಿ ನಾವು ನೆಮ್ಮದಿಯ ನಿದ್ರೆ ಮಾಡುತ್ತೇವೆ, ಸೈನಿಕರಾಗಿ ಸೇರಿ ದೇಶಸೇವೆ ಮಾಡಲು ಎಲ್ಲರೂ ಮನಸು ಮಾಡಬೇಕೆಂದು ಮಾಜಿ ವೀರ ಯೋಧ ವಿಕ್ಟರ್ ಕ್ರಾಸ್ಟಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಡ ಸ. ಪ. ಪೂ. ಕಾಲೇಜಿನ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವತಿಯಿಂದ ನಡೆಸಿದ ಕಾರ್ಗಿಲ್ ವಿಜಯ ದಿನ-26 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ರೇಂಜರ್ ಲೀಡರ್ ವಸಂತಿ ಪಿ. ಯವರು ಪ್ರಸ್ತಾವನೆಗೈದರು. ಹಿರಿಯ ಉಪನ್ಯಾಸಕರಾದ ಲಿಲ್ಲಿ ಪಿ.ವಿ. ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಂಜರ್ ಶಶಿಕಲಾ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಧೀರೋದಾತ್ತ ವ್ಯಕ್ತಿತ್ವವನ್ನು ವಿವರಿಸಿದಳು. ರೇಂಜರ್ ಸುರಕ್ಷಿತಾ ಅತಿಥಿಗಳನ್ನು ಪರಿಚಯಿಸಿದಳು. ರೇಂಜರ್ ಸಿಂಚನಾ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ರೇಂಜರ್ ಸುದಿಶಾ ಸ್ವಾಗತಿಸಿ, ರೇಂಜರ್ ಗಾಯತ್ರಿ ಧನ್ಯವಾದವಿತ್ತಳು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ