ವೈದ್ಯಕೀಯ ಪ್ರತಿನಿಧಿ ಸಂಘ, ಜಯಂಟ್ಸ್ ಗ್ರೂಪ್: ವೈದ್ಯರ ದಿನಾಚರಣೆ

Upayuktha
0


ಉಡುಪಿ: ಕನಾ೯ಟಕ ಸ್ಟೇಟ್ ಮೆಡಿಕಲ್ & ಸೇಲ್ಸ್ ರೆಪ್ರೆನ್ಟೆಂಟೀವ್ ಎಸೋಸಿಯೇಶನ್ ಉಡುಪಿ (ವೈದ್ಯಕೀಯ ಪ್ರತಿನಿಧಿಗಳ ಸಂಘ) ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ 23ನೇ ವಷ೯ದ ವೈದ್ಯರ ದಿನಾಚರಣೆ, ಅಭಿನಂದನಾ ಸಮಾರಂಭ ಉಡುಪಿ ಪುರಭವನದಲ್ಲಿ ಜುಲೈ 5 ರಂದು ಶನಿವಾರ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹುಟ್ಟುವಾಗ ಯಾರು ಕೂಡ ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ಆದರೆ ಈ ಅಪೂರ್ವ ಅವಕಾಶವನ್ನು ಬಳಸಿ ನಮ್ಮ ಜನ್ಮವನ್ನು ಸಾರ್ಥಕಗೊಳಿಸಬೇಕು ಪರೋಪಕಾರ ಮತ್ತು ಸಹಜೀವನ ನಮ್ಮ ತತ್ವವಾಗಬೇಕು ಎಂದರು.


ವೈದ್ಯರು ತಮ್ಮ ಅಪೂರ್ವ ಸೇವೆಯನ್ನು ಸಮಾಜಕ್ಕೆ ನಿರಂತರವಾಗಿ ನೀಡಿರುವ ಕಾರಣ ಇಂದು ಸಮಾಜದ ಆರೋಗ್ಯ ಸರಿಯಾದ ರೀತಿಯಲ್ಲಿ ಇದೆ; ವೈದ್ಯರ ಈ ಸೇವೆಯನ್ನು ಗುರುತಿಸುವ ಕಾರ್ಯ ನಿರಂತರವಾಗಿರಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯoಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್ ವಸಿದ್ದರು.


ಮುಖ್ಯ ಅತಿಥಿ ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ. ಸುರೇಶ್ ಶೆಣೈ ಮಾತನಾಡಿ, ವೈದ್ಯಕೀಯ ಪ್ರತಿನಿಧಿಗಳು ಬಹಳಷ್ಟು ಜನರು ತಮ್ಮ ಉದ್ಯೋಗದೊಂದಿಗೆ ಸಮಾಜಕ್ಕೆ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಿದ್ದಾರೆ ಮುಖ್ಯವಾಗಿ ಅನೇಕ ಆರೋಗ್ಯ ಶಿಬಿರಗಳಿಗೆ ಔಷಧಗಳನ್ನು ನೀಡಿತ್ತಿರುವುದು ಶ್ಲಾಘನೀಯ ಎಂದರು.


ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಮಾತನಾಡಿ, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿ.ಸಿ ರಾಯ್ ಅವರ ಜೀವನವೇ ಎಲ್ಲರಿಗೂ ಆದರ್ಶ ಅವರು ಇಡೀ ತಮ್ಮ ಜೀವನವನ್ನು ವೈದ್ಯರಾಗಿ ಮತ್ತು ಉತ್ತಮ ಜನಪ್ರತಿನಿಧಿಯಾಗಿ ಸಮಾಜಕ್ಕೆ ವ್ಯಯಿಸಿರುವುದು ಎಲ್ಲರಿಗೂ ಆದರ್ಶವಾಗಿದೆ ಎಂದರು.


ವೇದಿಕೆಯಲ್ಲಿ ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜಶ್ವರ್ ರಾವ್ ಮಾಜಿ ಅಧ್ಯಕ್ಷ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಗೌರವ ಸಲಹೆಗಾರ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಸತೀಶ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕಾರಂತ್ ಮುಂತಾದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಹಿರಿಯ ವೈದ್ಯರುಗಳಾದ ಮಣಿಪಾಲ ಕೆಎಂಸಿ ಸ್ತ್ರೀರೋಗ ತಜ್ಞ ಡಾ ಶ್ರೀಪಾದ ಹೆಬ್ಬಾರ್, ತೆಕ್ಕಟ್ಟೆಯ ವೈದ್ಯ ಡಾ. ಕೃಷ್ಣಯ್ಯ ಶೆಟ್ಟಿ, ಹಿರಿಯಡ್ಕ ಕಾಮತ್ ಕ್ಲಿನಿಕ್ ನ ಡಾ ಸುಧಾ ಕಾಮತ್, ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡಾ. ನಾಗೇಶ್ ಅವರನ್ನು ಅಪೂರ್ವವಾದ ವೈದ್ಯಕೀಯ ಸೇವೆಗಾಗಿ ಸನ್ಮಾನಿಸಲಾಯಿತು. ರಾಜು ಪಿ ಕರಾವಳಿ, ವಿಜೇತ, ಅಂಬಿಕಾ, ಅನಂತಕೃಷ್ಣ ಹೊಳ್ಳ, ರಾಘವೇಂದ್ರ ಪ್ರಭು ಕರ್ವಾಲು, ವಿವೇಕಾನಂದ ಕಾಮತ್ ಪರಿಚಯಿಸಿದರು.


ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು. ಪ್ರಸನ್ನ ಕಾರಂತ್ ವಂದಿಸಿದರು. ಈ ಸಂದರ್ಭದಲ್ಲಿ ಜಯಂಟ್ಸ್ ಸದಸ್ಯರನ್ನು ಮತ್ತು ವೈದ್ಯರುಗಳನ್ನು ಗೌರವಿಸಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top