ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವ್ಯಾಸರಾಜ ಮಠ ಸೋಸಲೆ ಸುಬ್ರಹ್ಮಣ್ಯನಗರ ಶಾಖೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೆಲಮಂಗಲದ ಆರ್ & ಆರ್ ಸಹೋದರಿಯರಾದ ಕು ರಶ್ಮಿ ಮತ್ತು ಕು ರಕ್ಷಾ ಇವರು ಹರಿದಾಸರ ಪದಗಳನ್ನು ವಿಶಿಷ್ಟ ರೀತಿಯಲ್ಲಿ ಹಾಡಿ ನೆರೆದಿದ್ದ ದಾಸ ಸಾಹಿತ್ಯಾಭಿಮಾನಿಗಳ ಮನಸೂರೆಗೊಂಡರು.
ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಎಂ.ಎನ್. ಸತ್ಯನಾರಾಯಣ, ಮೃದಂಗ ವಾದನದಲ್ಲಿ ಶ್ರೀನಿವಾಸ್ ಅನಂತರಾಮಯ್ಯ ಸಾಥ್ ನೀಡಿದರು. ಟಟಿಡಿ ಹೆಚ್.ಡಿ.ಪಿ.ಪಿ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಂದನಾರ್ಪಣೆ ಮಾಡಿದರು. ಶ್ರೀಮಠದ ವಿಚಾರಣಾಕರ್ತರಾದ ಸೋಸಲೆ ಪ್ರಕಾಶ್ ಕಲಾವಿದರನ್ನು ಸನ್ಮಾನಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ