ಬಳ್ಳಾರಿ ಸೇವಾ ಸಮಿತಿ ವತಿಯಿಂದ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳ ವಿತರಣೆ

Upayuktha
0



ಬಳ್ಳಾರಿ : ಬಳ್ಳಾರಿ ಸೇವಾ ಸಮಿತಿವತಿಯಿಂದ ಇಂದು  ಬಳ್ಳಾರಿ ನಗರದ ಡಿ.ಸಿ. ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದ್ರಾಳ ರಾಮನಗರ ಶಾಲೆ, ವಿಜಯಪುರ ಕ್ಯಾಂಪ್ ಮೂರು ಶಾಲೆಗಳಿಗೆ ಶೈಕ್ಷಣಿಕ ಸಾಮಾಗ್ರಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ  ಯಶವಂತರಾಜ್ ನಾಗಿರೆಡ್ಡಿ ಅವರು ನೆರವೇರಿಸಿದರು.


ಕಾರ್ಯಕ್ರಮದ ಅಂಗವಾಗಿ ಶಾಲೆಯ 250 ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಗತ್ಯವಿರುವ ನೋಟಪುಸ್ತಕ, ಪೆನ್, ಪೆನ್ಸಿಲ್, ರಬ್ಬರ್, ಡ್ರಾಯಿಂಗ್ ಪುಸ್ತಕ, ಕಂಪಾಸ್ ಬಾಕ್ಸ್, ಎರೇಜರ್, ಶಾರ್ಪ್ನರ್, ಸ್ಕೆಚ್ ಪೆನ್, ಸ್ಕೇಲ್, ಬಳಪ ಹಾಗೂ ಶಾಲಾ ಬ್ಯಾಗ್ ಸೇರಿದಂತೆ ವಿವಿಧ ಶೈಕ್ಷಣಿಕ ಪ್ರೋತ್ಸಾಹದಾಯಕ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಬಿಡಿಸಿಸಿ&ಐ ಮಾಜಿ ಅಧ್ಯಕ್ಷರಾದ ಡಾ. ರಮೇಶ್ ಗೋಪಾಲ್ ಮಾತನಾಡಿ, ಮಕ್ಕಳಿಗೆ ದೇಶಭಕ್ತ ಭಗತ್ ಸಿಂಗ್ ರವರ ಸಾಹಸ ಕಥೆಗಳನ್ನು ಬೋಧಿಸಿ, ಅವರಂತೆ ಸಾಹಸಿಗಳಾಗುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.


ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ  ಜೆ.ಸಿ. ನಾಗೇಶ, ಬಳ್ಳಾರಿ ಸೇವಾ ಸಮಿತಿ ಅಧ್ಯಕ್ಷರಾದ  ಸುರೇಂದ್ರ ಕುಮಾರ್ ಭಪ್ನಾ, ಬಳ್ಳಾರಿ ಸೇವಾ ಸಮಿತಿ ಕಾರ್ಯದರ್ಶಿಗಳಾದ,  ವಿ. ರಾಮಚಂದ್ರ, ಕಿರಾಣಿ ಅಂಗಡಿಯ ಅಸೋಸಿಯೇಷನ್ ಅಧ್ಯಕ್ಷರಾದ  ವೀರಾಂಜಿನೇಯಲು, ಬಿ.ಎಸ್.ಎಸ್ ಮಾಜಿ ಅಧ್ಯಕ್ಷರಾದ  ಸತ್ಯನಾರಾಯಣ, ಶಾಲೆಯ ಮುಖ್ಯ ಗುರುಗಳಾದ, ತಿಪ್ಪೆಸ್ವಾಮಿ ಹಾಗೂ ಎಲ್ಲಾ ಸಹ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top