ಚುಂಚಘಟ್ಟ (ಬೆಂಗಳೂರು): ಪರಂಗೋಡು ಗಿರೀಶ ಅವರ ಕುರಿತಾದ ಸಂಸ್ಮರಣಾ ಗ್ರಂಥ 'ಗಿರಿಯೆತ್ತರ' ಕೋಣನಕುಂಟೆಯ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದಲ್ಲಿ ಕಳೆದ ಭಾನುವಾರ ಬಿಡುಗಡೆಗೊಂಡಿತು.
ಶ್ರೀರಾಮ ಕಲಾ ಸಂಘದ ಅಧ್ಯಕ್ಷ ವಿದ್ವಾನ್ ಎ.ಎಸ್.ಕೆ ವಾಸಿಷ್ಠ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚುಂಚಘಟ್ಟ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ ಡಾ. ಕೆ.ಎಸ್ ಸಮೀರ್ ಸಿಂಹ ಭಾಗವಹಿಸಿದ್ದರು.
ಕೃತಿ ಬಿಡುಗಡೆಯ ಬಳಿಕ ಯಕ್ಷಗಾನ ತಾಳಮದ್ದಳೆ 'ಕರ್ಣ ಭೇದನ' ನಡೆಯಿತು.
ಎಂ. ಸುಬ್ರಹ್ಮಣ್ಯ ಭಟ್ ಪರಂಗೋಡು ಅವರ ಗೌರವ ಸಂಪಾದಕತ್ವದಲ್ಲಿ ಸಿದ್ದಪಡಿಸಲಾದ ಸಂಸ್ಮರಣಾ ಕೃತಿಯನ್ನು ಶ್ರೀರಾಮ ಕಲಾ ಸಂಘದವರು ಪ್ರಕಟಿಸಿದ್ದಾರೆ.
ಗಿರೀಶ್ ಪರಂಗೋಡು ಸಂಕ್ಷಿಪ್ತ ಪರಿಚಯ:
ಗಿರೀಶ ಅವರು ಕಾಸರಗೋಡಿನ ಮುಳ್ಳೇರಿಯದ ಸಮೀಪ ಪರಂಗೋಡುವಿನಲ್ಲಿ 1973ರಲ್ಲಿ ಜನಿಸಿದರು. ತಂದೆ ಸುಬ್ರಹ್ಮಣ್ಯ ಭಟ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಹುಟ್ಟೂರಿನ ಸುತ್ತಮುತ್ತಲಿನ ಊರುಗಳಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಗಿರೀಶರು ಸುಳ್ಯದ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ ಓದಿದರು. ಆಗ ಅವರಿಗೆ ಆಶ್ರಯ ನೀಡಿದ್ದು ಅವರ ದೊಡ್ಡಪ್ಪ.
ಪಠ್ಯೇತರ ಚಟುವಟಿಕೆಗಳಲ್ಲೂ ಬಹಳಷ್ಟು ಅಸಕ್ತಿ ಹೊಂದಿದ್ದ ಗಿರೀಶರು ನಾಟಕಗಳಲ್ಲೂ ಪಾತ್ರಗಳನ್ನು ಮಾಡಿದ್ದರು. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪದವಿ ಪೂರೈಸಿದರು.
ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಗಿರೀಶರು ಮದ್ದಳೆ ನುಡಿಸುತ್ತಿದ್ದರು. ಹೈಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ತಮ್ಮ 52ನೇ ವರ್ಷ ವಯಸ್ಸಿನಲ್ಲಿ ಅಕಾಲ ಮೃತ್ಯುವಿಗೆ ಈಡಾದ ಗಿರೀಶರ ನೆನಪಿಗಾಗಿ ಈ ಕೃತಿಯನ್ನು ಪ್ರಕಟಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ