ಉಜಿರೆ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪ್ರೋಗ್ರಾಮಿಂಗ್ ಆರ್ಟ್ಸ್ ಯುನಿವರ್ಸಿಟಿ ಇವರು 2025 ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಗುರುವಾಯನಕೆರೆಯ ನಿವಾಸಿ ಹಾಗೂ ಉಜಿರೆಯ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ವಿ ಪ್ರಕಾಶ್ ಕಾಮತ್ ಮತ್ತು ಶ್ರೀಮತಿ ರಾಧಿಕಾ ದಂಪತಿಯ ಪುತ್ರಿ ವಿದುಷಿ ಸಿ.ಎ ಸುಕನ್ಯಾ ಕಾಮತ್ ಉತ್ತೀರ್ಣರಾಗಿದ್ದಾರೆ.
ಇವರು ಭರತನಾಟ್ಯ ವಿದ್ವತ್ ಅಂತಿಮ ಹಾಗೂ ವಿದ್ವತ್ ಪೂರ್ವ ತರಬೇತಿಯನ್ನು ವಿದುಷಿ ಸ್ವಾತಿ ಕಿರಣ್ ಇವರಲ್ಲಿ ಹಾಗೂ ಭರತನಾಟ್ಯ ಜ್ಯೂನಿಯರ್ ಮತ್ತು ಸೀನಿಯರ್ ತರಬೇತಿಯನ್ನು ವಿದುಷಿ ವಿದ್ಯಾ ಮನೋಜ್ ಇವರಲ್ಲಿ ಪಡೆದಿರುತ್ತಾರೆ.
ಇವರು ವಾಣಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ಡಿ.ಎಂ ಪಿ.ಯು ಕಾಲೇಜಿನ ಹಳೇಯ ವಿದ್ಯಾರ್ಥಿನಿ. ಪ್ರಸ್ತುತ ಪೈರಿಯನ್ ಸರ್ವಿಸಸ್ ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ