ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಶಾಲೆಗಳ ಜವಾಬ್ದಾರಿ: ಜಿ. ನಾಗರಾಜ್

Chandrashekhara Kulamarva
0



ಬಳ್ಳಾರಿ: ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ವಿದ್ಯೆಯ ಜೊತೆಗೆ ಅವರನ್ನು ಗುಣವಂತರಾಗಿ ಮತ್ತು ಸಂಸ್ಕಾರವಂತರನ್ನಾಗಿ ಮಾಡುವುದು ಶಾಲೆಗಳ ಜವಾಬ್ದಾರಿ ಎಂದು ಎಸ್.ಜಿ.ಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ. ನಾಗರಾಜ್ ರವರು ಅಭಿಪ್ರಾಯ ಪಟ್ಟರು.


ಅವರು ಶುಕ್ರವಾರ (ಜು.4) ಬಳ್ಳಾರಿಯ ಹೊರ ವಲಯದಲ್ಲಿರುವ ಶೃಂಗೇರಿ ಶಾರದಾಂಬ ದೇವಸ್ಥಾನದ ಆವರಣದಲ್ಲಿ ಎಸ್.ಜಿ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಆಟೋಟ ಮತ್ತು ಧ್ಯಾನಶಿಬಿರ ಉದ್ಘಾಟಿಸಿ ಮಾತನಾಡಿದರು.


ಹೊರ ಸಂಚಾರ ಶೈಕ್ಷಣಿಕ ಪ್ರವಾಸಗಳು ಐತಿಹಾಸಿಕ ಸ್ಥಳಗಳ ಪ್ರಾವಾಸಗಳೊಂದಿಗೆ ಗುರು ದೇವತಾ ಕ್ಷೇತ್ರಗಳ ಸಂಚಾರ ಮತ್ತು ಅಲ್ಲಿ ನಡೆಸುವ ಶಿಭಿರಗಳು ಎಳೆಯ ಮನಗಳ ಮೇಲೆ ಉತ್ತಮ ಪ್ರಭಾವ ಬೀರುತ್ತವೆ ಎಂದರು. 


ಗುರುರಾಜ್ ಆಚಾರ್ ಮಕ್ಕಳಿಗೆ ಆದಿಶಂಕರ ಭಗವತ್ಪಾದರ ಪರಿಚಯಿಸುತ್ತಾ ಮಕ್ಕಳಿಗೆ ದ್ಯಾನ ಮಾಡಿಸಿದರು. ಪ್ರವೀಣ್ ಮತ್ತಿತರು ಪ್ರಸಾದ ವಿನಿಯೋಗ ಮಾಡಿದರು. 


ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಂಕರ ಮಠ ಬಳ್ಳಾರಿಯ ಅಧ್ಯಕ್ಷ ಬಿ .ಕೆ. ಬಿ. ಎನ್ ಮೂರ್ತಿ, ಎಸ್.ಜಿ.ಟಿ ಶಾಲೆಯ ನಿರ್ದೇಶಕಿ ಜಿ ಮಂಜುಳ, ಮುಖ್ಯೋಪಾಧ್ಯಾಯ ಇಲಿಯಾಸ್ ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top