ಬಳ್ಳಾರಿ: ಕೃಷಿಯನ್ನು ಪ್ರಾರಂಭಿಸುವ ಮೊದಲು ರೈತರ ಆದ್ಯ ಕರ್ತವ್ಯ ಮಣ್ಣು ಸಂರಕ್ಷಣೆ ಬಹು ಮುಖ್ಯವಾಗಿದೆ, ಮಣ್ಣು ಫಲವತ್ತತೆಯಾಗಿದ್ದರೆ ರೈತರು ಭೂಮಿಯಲ್ಲಿ ಬಂಗಾರ ಬೆಳೆಯಬಹುದು. ಆಧುನಿಕ ತಂತ್ರಜ್ಞಾನದೊಂದಿಗಿನ ಸಮಗ್ರ ಕೃಷಿ ಪದ್ದತಿ ಬೇಸಾಯ ಅಳವಡಿಕೆಯಿಂದ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ, ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಡಾ. ಬಿಜಿ ಕೆರೆ ವೀರಭದ್ರಪ್ಪನವರು ಕೃಷಿ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಬಳ್ಳಾರಿ-1 ತಾಲ್ಲೂಕಿನ ಗಾಂಧಿನಗರ ವಲಯದ ಅವಂಬಾವಿ ಮತ್ತು ಒಕ್ಕರಣಿ ಕ್ಯಾಂಪಿನ ಸ್ವ ಸಹಾಯ ಸಂಘದ ಆಸಕ್ತಿಯುಳ್ಳ 50 ಜನ ಸದಸ್ಯರು ಸೇರಿ ಸಮಗ್ರ ಮಿಶ್ರಿತ ವಿಶಿಷ್ಠವಾದ ಪದ್ದತಿಯಲ್ಲಿ ಕೃಷಿ ಹೊಟ್ಟೆಗೆ ಇತರೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ರೇಷ್ಮೆ, ನುಗ್ಗೆ,ಅಜೋಲಾ, ಹೀಗೆ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿ ಅಧಿಕ ಲಾಭವನ್ನು ಪಡೆಯುತ್ತಿರುವ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಬರಗಾಲದ ವೈದ್ಯ,ರೈತರ ಮಿತ್ರ,ನೇಗಿಲ ಯೋಗಿ ಎಂದೆ ಪ್ರಖ್ಯಾತಿಯಾದ ಕೃಷಿ ರಂಗದಲ್ಲಿ ಹಲವಾರು ಪ್ರಶಸ್ತಿ ವಿಜೇತರಾದ ಬಿಜಿ ಕೆರೆ ಡಾ.ಎಸ್.ಸಿ.ವೀರಭದ್ರಪ್ಪ ನವರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.
ರೈತರು ಮನಸ್ಸು ಮಾಡಿದ್ರೆ ವರ್ಷದ 365 ದಿನ ಆದಾಯ ಗಳಿಸಬಹುದಾದ ಹೈನುಗಾರಿಕೆ,ತರಕಾರಿ ಕೃಷಿ, ಹೂವಿನ ಬೇಸಾಯ, ರೇಷ್ಮೆ ಕೃಷಿ, ಮುಂಗಾರು & ಹಿಂಗಾರು ಬೆಳೆ, ಹುಣಸೆ, ಮಾವು,ತೆಂಗು ಹೀಗೆ ಮಿಶ್ರಿತ ಬೇಸಾಯ ಮಾಡುವುದರಿಂದ ಒಂದು ಬೆಳೆ ನಷ್ಟ ಆದರೂ ಇನ್ನೊಂದರಲ್ಲಿ ಲಾಭ ಪಡೆಯಬಹುದು ಎಂದು ಅಧ್ಯಯನ ಪ್ರವಾಸಕ್ಕೆ ಬಂದ ರೈತರಿಗೆ ಡಾ/ ಎಸ್.ಸಿ.ವೀರಭದ್ರಪ್ಪ ನವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೋರಯ್ಯ ಮೊಳಕಾಲ್ಮೂರು ತಾಲ್ಲೂಕಿನ ಕೃಷಿ ಮೇಲ್ವಿಚಾರಕರು ಮಹೇಶ್ ಎಸ್, ಬಳ್ಳಾರಿ ತಾಲ್ಲೂಕಿನ ಕೃಷಿ ಮೇಲ್ವಿಚಾರಕರು ಗೌಸೀಯಾ ಹವಂಬಾವಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು. ನಾಗವೇಣಿ ಅಧ್ಯಕ್ಷರು ಒಕ್ಕರಣಿ ಕ್ಯಾಂಪಿನ ಒಕ್ಕೂಟ ಒಕ್ಕೂಟದ ಸದಸ್ಯರು ಅನಿತಾ, ಬಸಮ್ಮ, ಶಿವಮ್ಮ ಹಾಗೂ ಸಂಘ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ