ಸಂಗೀತ ಪ್ರಿಯರ ಮನಸೂರೆಗೊಂಡ ಶಿಶಿರ ಗಾಯನ

Upayuktha
0


ಬೆಂಗಳೂರು :
ಪವಮಾನಪುರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ (ಜುಲೈ 24ರಂದು) ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಪ್ರತಿಭೆ ಶಿಶಿರ ಕೆ.ಪಿ. ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಅಪರೂಪದ ಹರಿದಾಸರ ಪದಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಪುರಂದರದಾಸರ "ಗಜವದನ ಬೇಡುವೆ" ಎಂಬ ವಿಘ್ನನಿವಾರಕನ ಕೃತಿಯೊಂದಿಗೆ ಗಾಯನ ಆರಂಭಿಸಿದ ಶಿಶಿರ "ಗುರು ರಾಘವೇಂದ್ರರ ಚರಣ ಕಮಲವನ್ನು" (ಗೋಪಾಲದಾಸರು), "ವಾಸುದೇವನ ಚರಣ" (ಪುರಂದರದಾಸರು), "ಶಿವನೇ ನಾ ನಿನ್ನ ಸೇವಕನಯ್ಯ (ಶ್ರೀಧವಿಠ್ಠಲದಾಸರು), "ನಂಬಿದೆ ನಿನ್ನ ಪಾದವ" (ಗುರು ವಿಜಯವಿಠ್ಠಲದಾಸರು), "ಬಾರೆ ಭಾಗ್ಯದ ನಿಧಿಯೇ" (ಅನಂತಾದ್ರೀಶದಾಸರು), 


"ಸ್ಮರಣೆ ಒಂದೇ ಸಾಲದೆ ಗೋವಿಂದನ" (ಪುರಂದರದಾಸರು), "ಬನ್ನಿ ಮುರಳಿಯ ನಾದವ ಕೇಳಿ" (ಶ್ರೀ ವಿದ್ಯಾಪ್ರಸನ್ನತೀರ್ಥರು), "ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ" (ಪುರಂದರದಾಸರು), "ನಾರಸಿಂಹ ಶ್ರೀ ನಾರಸಿಂಹ" (ಶ್ರೀ ಸಂಕರ್ಷಣ ಒಡೆಯರು),:"ಶ್ರೀಪತಿಯ ಕಟಾಕ್ಷ ವೀಕ್ಷಣ" (ಪುರಂದರದಾಸರು),


"ಆಡಿದನೋ ರಂಗ"(ಪುರಂದರದಾಸರು) "ಕರೆದು ತಾರೆಲೆ ರಂಗನ"(ಶ್ರೀ ವ್ಯಾಸರಾಜರು), "ಕರುಣಿಸೋ ರಂಗ ಕರುಣಿಸೋ" (ಪುರಂದರದಾಸರು), "ಶ್ರೀನಿಕೇತಾನ ಪಾಲಯಮಾಂ" (ಜಗನ್ನಾಥದಾಸರು), "ಕರಿಯ ಕಾಯ್ದವನ" (ಶ್ರೀ ವಾದಿರಾಜರು), "ನೀ ಕರುಣಿಸೋ ವಿಠ್ಠಲ" (ಪ್ರಸನ್ನ ವೆಂಕಟದಾಸರು), "ಹರೇ ವಿಠ್ಠಲ ಪಾಂಡುರಂಗ" (ವಿಜಯದಾಸರು) ಕೃತಿಗಳನ್ನು  ಪ್ರಸ್ತುತ ಪಡಿಸಿ, ಸಂದರ್ಭಕ್ಕೆ ತಕ್ಕಂತೆ ಕೆಲವು ಉಗಾಭೋಗಗಳನ್ನೂ ಹಾಡಿದ್ದು ಅಂದಿನ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. 


ಇವರ ಗಾಯನಕ್ಕೆ ಕು|| ಸಂಸ್ಕೃತಿ ಎಸ್. ಬಾಣಾವರ್ (ಹಾರ್ಮೋನಿಯಂ), ಅವೀಕ್ಷಿತ್ ಶ್ರೀನಿವಾಸನ್ (ತಬಲಾ) ಮತ್ತು ಕು|| ಇಂಚರ ಎಸ್.ಆರ್ (ತಾಳ) ಸಾಥ್ ನೀಡಿದರು. ಎಲ್ಲಾ ಕಲಾವಿದರೂ ಭಕ್ತಿಭಾವಪರವಶರಾಗಿ ಕಾರ್ಯಕ್ರಮವನ್ನು ಗುರುಗಳಿಗೆ ಸಮರ್ಪಣೆ ಮಾಡಿದರು. ಶ್ರೀಮಠದ ವಿಚಾರಣಾಕರ್ತರಾದ ಗಿರಿರಾಜಾಚಾರ್ಯರು ಕಲಾವಿದರನ್ನು ಸನ್ಮಾನಿಸಿ, ಗುರುಗಳ ಪ್ರಸಾದವನ್ನು ನೀಡಿ. ಶುಭಕೋರಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top