ನಮ್ಮ ಬಳಿ ಎಷ್ಟೇ ಐಷಾರಾಮಿ ಜೀವನವಿದ್ದರೂ, ಎಷ್ಟೇ ಹಣವಿದ್ದರೂ ನಮ್ಮ ಮನಸಿಗೆ ನೆಮ್ಮದಿ ಕೊಡುವುದು ಆ ಒಂದು ಪುಟ್ಟ ಕುಟುಂಬ ಜೊತೆಗೆ ಒಂದು ಸಣ್ಣ ಮನೆ. ಸುತ್ತಮುತ್ತ ತೋಟ ಹಚ್ಚ-ಹಸಿರಿನಿಂದ ಕಂಗೊಳಿಸುವ ಊರು ಅಲ್ಲಿ ಒಂದು ಚಿಕ್ಕ ಮನೆ ಇದು ನೆಮ್ಮದಿಯ ಪ್ರತೀಕವೇ ಸರಿ. ಮಳೆಗಾಲದ ಸಮಯದಲ್ಲಿ ಮನೆಯ ಅಂದವನ್ನು ಪ್ರಕೃತಿ ಹೆಚ್ಚಿಸುತ್ತದೆ. ನಮ್ಮ ಹಳ್ಳಿಮನೆ ಚಿಕ್ಕದಾಗಿ ಇದ್ದರೂ, ಪ್ರೀತಿಗೆ ಕೊರತೆ ಇಲ್ಲ. ಅಮ್ಮ ಅಪ್ಪನ ಪ್ರೀತಿಯ ಜೊತೆಗೆ ಎಲ್ಲರ ಪ್ರೀತಿಯೂ ಸಿಗುತ್ತದೆ.
ಮನೆ ಚಿಕ್ಕದಾಗಿ ಇದ್ದರೂ ಮನಸು ಯಾವಾಗಲೂ ದೊಡ್ಡದಾಗಿರುತ್ತದೆ. ಬೆಳಗಿನ ಸಮಯದಲ್ಲಿ ಹಕ್ಕಿಯ ಕೂಗೇ ನಮಗೆ ಅಲಾರಂ. ಮುಂಜಾನೆಯ ರವಿಕಿರಣ ಆ ಹಚ್ಚ ಹಸಿರ ಸಿರಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಹಳ್ಳಿಯ ಮನೆಯ ಅಂದವನ್ನು ಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ. ಏಕೆಂದರೆ ಹಳ್ಳಿಯ ಪರಿಸರ, ಹಕ್ಕಿಯ ಹಾಡನ್ನು ನಗರ ಪ್ರದೇಶದಲ್ಲಿ ಕೇಳಲು ಸಾಧ್ಯವಿಲ್ಲ. ಹಳ್ಳಿಯ ಪರಿಸರವೂ ಮನಸಿಗೆ ನೆಮ್ಮದಿ ಕೊಡುವುದರ ಜೊತೆಗೆ ಆರೋಗ್ಯವು ಕೊಡುತ್ತದೆ. ಹಳ್ಳಿ ಜೀವನವನ್ನು ಅನುಭವಿಸಿದವರಿಗೆ ಮಾತ್ರ ಅದರ ಸೊಬಗು ಗೊತ್ತಾಗುತ್ತದೆ.
ಜೀವನದಲ್ಲಿ ಒಂದು ಬಾರಿಯಾದರೂ ಹಳ್ಳಿ ಜೀವನವನ್ನು ಅನುಭವಿಸಬೇಕು. ಮಳೆಗಾಲ ಬಂದರೆ ಸಾಕು, ಮೀನುಗಳನ್ನು ಹಿಡಿಯುವುದು ನೀರಿನಲ್ಲಿ ಆಟಮಾಡುವುದು ಅದೇ ಒಂದು ಮಜಾ. ಕೆರೆಯಲ್ಲಿ ಆಟವಾಡುವುದು ಮಳೆಗಾಲದ ಒಂದು ಸೊಬಗು.
ಹಬ್ಬಗಳ ದಿನದಲ್ಲಿ ಕೇಳೋವುದೇ ಬೇಡ ಅಷ್ಟು ಅದ್ಬುತವಾಗಿ ಆಚರಿಸುತ್ತಾರೆ. ಬೆಳಗ್ಗೆಯೇ ಬೇಗ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆಯನ್ನು ಅರ್ಪಿಸುವುದು ದೇವಸ್ಥಾನಕ್ಕೆ ಹೋಗುವುದು ಅದರ ಚಂದವೇ ಬೇರೆ. ಹಳ್ಳಿಯಲ್ಲಿ ಅನುಸರಿಸುವ ಆಚಾರ -ವಿಚಾರ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಅದನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಂಡಾಗ ಮುಂದಿನ ಜನಾಂಗಕ್ಕೆ ಅದರ ಮಾಹಿತಿ ಗೊತ್ತಾಗುತ್ತದೆ.
ಹಳ್ಳಿಯ ಪರಿಸರ ಅಲ್ಲಿ ಇರುವ ಮೌಲ್ಯಗಳು, ತಿಳಿಯುವ ವಿಷಯಗಳು, ಜೀವನ ಶೈಲಿ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹಳ್ಳಿ ಜೀವನ ಶೈಲಿ ಒಂದು ರೀತಿಯ ವಿಶೇಷ ಅನುಭವ ಅದನ್ನು ವಿವರಿಸಲು ಹೋದರೆ ಪದಗಳೇ ಸಾಲದು ಇದು ಹಳ್ಳಿಯ ವರ್ಣನೆ.
- ಮಧುಶ್ರೀ ಸೊರಕೆ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ