ಜೀವನದ ಅಡೆತಡೆಗಳು ನಮ್ಮ ಆಸಕ್ತಿಗಳಿಗೆ ಅಡ್ಡಿಯಾಗವು: ಶಿವಾನಂದ ಯು.ಎಲ್
ಉಜಿರೆ: ನಮ್ಮ ಬದುಕಿನಲ್ಲಿ ಶಿಕ್ಷಣ ಅಥವಾ ಇನ್ನಿತರ ವಿಚಾರಗಳಲ್ಲಿ ಎಷ್ಟೇ ಅಡೆತಡೆಗಳು ಬಂದರೂ ನಮಗೆ ಪ್ರಬಲವಾದ ಆಸಕ್ತಿ ಇದ್ದರೆ ಅದನ್ನು ಖಂಡಿತವಾಗಿಯೂ ಸಾಧಿಸಿ ತೋರಿಸಬಹುದು ಎಂದು ಧರ್ಮಸ್ಥಳದ ಯು.ಎಲ್ ಶಿವಾನಂದ ಅವರು ಅಭಿಪ್ರಾಯಪಟ್ಟರು. ತಾವೇ ರಚಿಸಿದ ಕೆಲವಾರು ಕವನಗಳನ್ನು ವಾಚಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ನೀಡಿದರು.
ಅವರು ಇಂದು (ಜು.26) ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಹಾಬಿ ಸರ್ಕಲ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ಅವರು ಮಾತನಾಡಿ, ಹವ್ಯಾಸಗಳು ಮತ್ತು ಚಟಗಳು ಸಂಪೂರ್ಣ ಭಿನ್ನವಾದವುಗಳು. ಉತ್ತಮವಾದ ಹವ್ಯಾಸ ಮನುಷ್ಯನನ್ನು ಉತ್ತುಂಗದ ಸ್ಥಿತಿಗೆ ಕೊಂಡೊಯ್ಯಬಲ್ಲದು. ಹವ್ಯಾಸವೇ ಇಲ್ಲದ ವ್ಯಕ್ತಿ ಎಷ್ಟೇ ಸಂಪಾದಿಸಿದರೂ ಜೀವನವನ್ನು ಆನಂದಿಸುವುದು ಅಸಾಧ್ಯ. ಹವ್ಯಾಸಗಳು ಮನುಷ್ಯನ ಜೀವನವೆಂಬ ಚಿತ್ರಕ್ಕೆ ಬಣ್ಣ ತುಂಬುವವುಗಳು. ಎಂದು ವಿವರಿಸಿದರು ಹಾಗೂ ಹಾಬಿ ಸರ್ಕಲ್‌ನಲ್ಲಿ ವರ್ಷವಿಡೀ ನಡೆಯುವ ಕಾರ್ಯಗಳ ಕುರಿತು ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅದರ ಮಹತ್ವದ ಕುರಿತು ವಿವರವಾಗಿ ಬೆಳಕು ಚೆಲ್ಲಿದರು.
ದೀಪ ಬೆಳಗುವುದರ ಮೂಲಕ ವಿಧ್ಯುಕ್ತವಾಗಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಉದ್ಘಾಟಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ದ್ವಿತೀಯ ಬಿ ಎಸ್ ಸಿ ವಿದ್ಯಾರ್ಥಿನಿ ಸನ್ನಿಧಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕಿ ಸುಶಿರಾ ವಂದನಾರ್ಪಣೆಗೈದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಕಿರಣ್ಮಯಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕ ಮಿಥುನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾತ್ವಿಕ್ ಹಾಗೂ ಬಳಗವು ಪ್ರಾರ್ಥನೆ ನೆರವೇರಿಸಿ ಕೊಟ್ಟಿತು. ಹಾಬಿ ಸರ್ಕಲ್‌ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ