ಮಂಗಳೂರು: ಆಳ್ವಾಸ್ ಪ್ರಗತಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿಕೊಂಡು ಬರುತ್ತಿರುವ ಬೃಹತ್ ಉದ್ಯೋಗ ಮೇಳ. 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ಸದಾ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದೆ. ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಉದ್ಯೋಗ ಅವಕಾಶಕೊಡಿಸುವ ಮಹತ್ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ. ಇಲ್ಲಿವರೆಗೆ ಆಳ್ವಾಸ್ ಉದ್ಯೋಗ ಮೇಳಗಳ ಮೂಲಕ ಒಟ್ಟು 36,151 ಉದ್ಯೋಗಗಳನ್ನು ನೀಡಲಾಗಿದೆ ಹಾಗೂ 61,517 ಅಭ್ಯರ್ಥಿಗಳನ್ನು ವಿವಿಧ ಕಂಪೆನಿಗಳು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ.
ಉದ್ಘಾಟನಾ ಸಮಾರಂಭ
ಆಳ್ವಾಸ್ ಪ್ರಗತಿ 2025ರ 15ನೇ ಆವೃತ್ತಿಯ ಉದ್ಘಾಟನೆಯು ಆಗಸ್ಟ್ 01 ಮತ್ತು 02ರಂದು ವಿದ್ಯಾಗಿರಿಯಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು, ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಮಂಗಳೂರು ವಿವಿಯ ಕುಲಪತಿಗಳಾದ ಡಾ ಪಿಎಲ್ ಧರ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಎ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಜನಪ್ರತಿನಿಧಿಗಳ ಗೌರವ ಉಪಸ್ಥಿತಿ ಇರಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆಯ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಅವರು ಈ ಕುರಿತು ವಿವರವಾದ ಮಾಹಿತಿ ನೀಡಿದರು.
ಸನ್ಮಾನ:
ಅಲ್‌ಕಾರ್ಗೋ ಲಾಜಿಸ್ಟಿಕ್ಸ್‌ನ ಅಧ್ಯಕ್ಷ ಶಶಿಕಿರಣ್ ಶೆಟ್ಟಿ, ದುಬೈನ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಸೌದಿ ಅರೇಬಿಯದ ಎಕ್ಸಪರ್ಟೈಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಎಸ್ ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಶ್ ಕಾಮತ್, ರೋಹನ್ ಕಾರ್ಪೋರೇಶನ್ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹನ್ ಮೊಂತೇರೋ, ನೀವಿಯಸ್ ಸೊಲ್ಯೂಷನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿ ಇವರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಆಳ್ವಾಸ್ ಪ್ರಗತಿ 2025
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಈ ಬಾರಿ 15ನೇ ಆವೃತ್ತಿಯದ್ದಾಗಿದ್ದು, ಆಗಸ್ಟ್ 1 ಹಾಗೂ 2 ರಂದು ಇಲ್ಲಿನ ವಿದ್ಯಾಗಿರಿಯ ಆವರಣದಲ್ಲಿ ನಡೆಯಲಿದೆ. ಬ್ಯಾಂಕಿAಗ್ ಮತ್ತು ಹಣಕಾಸು, ಐಟಿ, ಐಟಿಇಎಸ್, ಹೆಲ್ತ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟ್ಯಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ.
ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ಯಾವುದೇ ಕೋರ್ಸಗಳನ್ನು 2025ರ ಶೈಕ್ಷಣಿಕ ವರ್ಷದ ಮುಂಚೆ ಅಥವಾ ಒಳಗೆ ಪೂರ್ಣಗೊಳಿಸುವವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು.
ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ http://alvaspragati.com/CandidateRegistration ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಂದಾವಣೆ ಮಾಡಬಹುದಾಗಿದೆ.
ಆಳ್ವಾಸ್ ಪ್ರಗತಿ- 2025ರ ವಿಶೇಷತೆಗಳು:
ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ ಈಗಾಗಲೇ 285 ಕಂಪೆನಿಗಳ ನೋಂದಾವಣೆಯನ್ನು ಖಾತ್ರಿಪಡಿಸಲಾಗಿದೆ. 15930+ ಉದ್ಯೋಗ ಅವಕಾಶಗಳು ಇರಲಿವೆ.
ಆಳ್ವಾಸ್ ಪ್ರಗತಿ 2025 ಉದ್ಯೋಗ ಮೇಳದ ವಲಯವಾರು ವಿಶೇಷಗಳು:
ಮ್ಯಾನುಫ್ಯಾಕ್ಚರಿಂಗ್ ವಲಯ:
ಈ ವಲಯದಲ್ಲಿ 70 ಕಂಪನಿಗಳು ಭಾಗವಹಿಸುತ್ತಿವೆ.
22 ಕಂಪನಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಭ್ಯರ್ಥಿಗಳಿಗೆ ಸುಮಾರು 200 ಉದ್ಯೋಗಾವಕಾಶಗಳನ್ನು ನೀಡಲಿವೆ
20 ಕಂಪನಿಗಳು ಬಿಕಾಂ ಪದವೀಧರರಿಗೆ ಸುಮಾರು 150 ಉದ್ಯೋಗಾವಕಾಶಗಳನ್ನು ನೀಡಲಿವೆ.
Tata Electronics Systems Solutions Private Limited (Kolar) ಕಂಪೆನಿ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ
ಐಟಿಐ ಅಭ್ಯರ್ಥಿಗಳಿಗೆ 1,000 ಉದ್ಯೋಗಾವಕಾಶಗಳು, ಡಿಪ್ಲೊಮಾ ಅಭ್ಯರ್ಥಿಗಳಿಗೆ 1,500 ಉದ್ಯೋಗಾವಕಾಶಗಳು ಲಭ್ಯವಿವೆ.
19 ಕಂಪೆನಿಗಳು Electrical and Electronics Engineering ವಿಭಾಗದ ಅಭ್ಯರ್ಥಿಗಳಿಗೆ ಸುಮಾರು 60 ಉದ್ಯೋಗಾವಕಾಶಗಳನ್ನು ನೀಡಲಿವೆ.
Toyota Kirloskar Motor Pvt. Limited, Buhler India Pvt Ltd, Volvo Group India Pvt Ltd, Biesse India Pvt Ltd, Exicom Tele-Systems Ltd, Toyota Kirloskar Auto Parts Pvt Ltd, Ace Designers Ltd- MCD, Kirloskar Toyota Textile Machinery Pvt Ltd, Ajax Engineering Ltd ಮುಂತಾದ ಪ್ರಮುಖ ಕಂಪೆನಿಗಳು ಭಾಗವಹಿಸಲಿವೆ.
ಲಾಜಿಸ್ಟಿಕ್ಸ್ ವಲಯ:
ಮುಂಬೈ ಮೂಲದ Allcargo Logistics ಮತ್ತು Bhavani Shipping ಹಾಗೂ ಮಂಗಳೂರಿನ ಗಣೇಶ ಶಿಪ್ಪಿಂಗ್ ಕಂಪೆನಿಗಳು ಲಾಜಿಸ್ಟಿಕ್ ವಲಯದ ಪ್ರಮುಖ ಕಂಪೆನಿಗಳು.
Flipkart ಈ ಮೇಳದಲ್ಲಿ ಭಾಗವಹಿಸಲಿದೆ.
ಐಟಿ ವಲಯ:
ಈ ವಲಯದಲ್ಲಿ 10 ಕಂಪನಿಗಳಿAದ 125 ಉದ್ಯೋಗಾವಕಾಶಗಳು ಲಭ್ಯವಿವೆ.
Niveus Solutions, Codecraft, Winman, Kakunje software ಕಂಪೆನಿಗಳು ಪ್ರಮುಖವಾಗಿ ಮಂಗಳೂರು ಭಾಗದ ಉದ್ಯೋಗಗಳ ಜೊತೆಗೆ ಬೆಂಗಳೂರಿನಲ್ಲಿ ಕೋರ್ ಐಟಿ ಉದ್ಯೋಗಗಳನ್ನು ನೀಡಲಿವೆ.
ಐಟಿಇಎಸ್ ವಲಯ:
24 ಕಂಪನಿಗಳು ಐಟಿಇಎಸ್ ವಲಯ 3000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುತ್ತಿವೆ.
Infosys BPM, First Source, 24X7.ai, UnifyCX, Amazon, Concentrix, Sagility Health ಸೇರಿದಂತೆ ಇನ್ನೂ ಹಲವಾರು ಕಂಪನಿಗಳು ಉದ್ಯೋಗಮೇಳಕ್ಕೆ ನೋಂದಾಯಿಸಿಕೊಂಡಿವೆ.
ಬಿಇ/ಬಿಟೆಕ್ ಅಭ್ಯರ್ಥಿಗಳಿಗಾಗಿ 1000ಕ್ಕೂ ಹೆಚ್ಚು ನಾನ್ ಕೋರ್ ಐಟಿ ಉದ್ಯೋಗಗಳು ಲಭ್ಯ.
ಹೆಚ್‌ಆರ್ ಹುದ್ದೆಗಳಿಗಾಗಿ 20 ಉದ್ಯೋಗಾವಕಾಶಗಳು ಲಭ್ಯವಿವೆ.
ಬ್ಯಾಂಕಿಂಗ್ ಮತ್ತು ಹಣಕಾಸು ವಲಯ:
30 ಕಂಪೆನಿಗಳಿಂದ 2500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ಬಿಬಿಎಂ, ಬಿಕಾಂ, ಎಂಬಿಎ, ಎಂಕಾಂ ಪದವೀಧರರನ್ನು ANZ, Oracle, Arjuna Research and Financial Services, Bharat Financial Inclusion Ltd., I Process Services India Ltd., Muthoot Microfin Ltd, Equitas Small Finance, ಕಂಪೆನಿಗಳು ಕಾರ್ಯನಿರ್ವಹಣಾ ಹುದ್ದೆಗಳಿಗೆ ನೇಮಿಸಿಕೊಳ್ಳಲಿವೆ.
ಎಂಬಿಎ ಮತ್ತು ಎಂಕಾಂ ಅಭ್ಯರ್ಥಿಗಳಿಗೆ 500 ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ.
ಉದ್ಯೋಗಮೇಳದಲ್ಲಿ ANZ, HDFC Bank, Kotak Mahindra Bank, AXIS Bank, Mahindra Finance ಮುಂತಾದ ಕಂಪೆನಿಗಳು ಪಾಲ್ಗೊಳ್ಳಲಿವೆ.
ಹೆಲ್ತ್‌ಕೇರ್ ವಲಯ
25ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳು ನೋಂದಾಯಿಸಿದ್ದು, 2000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ವಿವಿಧ ಆರೋಗ್ಯ ವಿಭಾಗಗಳಲ್ಲಿ ನೀಡುತ್ತಿವೆ.
ಈ ವಲಯದ ನೇಮಕಾತಿಯಲ್ಲಿ 750ಕ್ಕೂ ಹೆಚ್ಚು ನರ್ಸಿಂಗ್ ಹುದ್ದೆಗಳು, 300ಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಹುದ್ದೆಗಳು, ತಲಾ 50ಕ್ಕೂ ಹೆಚ್ಚು ಫಿಜಿಯೋಥೆರಪಿ ಹಾಗೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಪದವೀಧರರಿಗೆ ಇರಲಿವೆ.
ಈ ಉದ್ಯೋಗಮೇಳದಲ್ಲಿ Narayana Hrudhayalaya, Wockhardt (Mumbai), Sakra World Hospital (Japan-based), Apollo Homecare (unit of Apollo Hospitals), Indira Hospital (Mumbai & Bangalore), and People Tree Hospital, Bangalore ಮುಂತಾದ ಪ್ರಮುಖ ಆಸ್ಪತ್ರೆಗಳು ಭಾಗವಹಿಸಲಿವೆ.
ಫಾರ್ಮಾ ವಲಯ:
ಈ ಕ್ಷೇತ್ರದಲ್ಲಿ 5 ಪ್ರಮುಖ ಕಂಪನಿಗಳು ಸೇರಿ 250ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ.
ಉದ್ಯೋಗ ಮೇಳಕ್ಕೆ ನೋಂದಾಯಿಸಿದ ಸಂಸ್ಥೆಗಳು: Cipla, Hetero, Jubiliant Pharmova Ltd, Medorganics India Pvt Ltd, Meditek India, Vasudha Life Sciences Pvt. Ltd.
ಎಂಎಸ್ಸಿ ಕೆಮಿಸ್ಟ್ರಿ ಮತ್ತು ಎಂಫಾರ್ಮಾ ಅಭ್ಯರ್ಥಿಗಳಿಗೆ 50ಕ್ಕೂ ಹೆಚ್ಚು ಹುದ್ದೆಗಳಿವೆ.
ಬಿಎಸ್ಸಿ ಪದವೀಧರರಿಗೆ 60ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ.
ಬಿಇ/ಬಿಟೆಕ್ ಕೆಮಿಕಲ್ ಇಂಜಿನಿಯರಿAಗ್ ಅಭ್ಯರ್ಥಿಗಳಿಗೆ 20ಕ್ಕೂ ಹೆಚ್ಚು ಹುದ್ದೆಗಳ ಜೊತೆಯಲ್ಲಿ ವಿವಿಧ ಡಿಪ್ಲೊಮಾ ಪದವೀಧರರಿಗೆ 120ಕ್ಕೂ ಹೆಚ್ಚು ಅವಕಾಶಗಳು ಲಭ್ಯವಿವೆ.
ಮಾಧ್ಯಮ ವಲಯ:
10ಕ್ಕೂ ಹೆಚ್ಚು ಮೀಡಿಯಾ ಕಂಪನಿಗಳು 180ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ.
Zee entertainment, The Mysore Printers Pvt Ltd., Metropolitan Media company (Times of India, Bangalore Mirror, Vijayakarnataka), VRL Media, Manipal Media Network (Udayavani, Taranga, Roopatara), Vartha Bharati, Hosdiganta, News Karnataka ಮುಂತಾದ ಕಂಪನಿಗಳು ಉದ್ಯೋಗ ನೀಡಲಿವೆ.
ಮುದ್ರಣ ಮಾಧ್ಯಮ, ದೂರದರ್ಶನ, ಮನರಂಜನೆ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ, ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವೀಧರ ವಿದ್ಯಾರ್ಥಿಗಳಿಗೆ ವಿವಿಧ ಹುದ್ದೆಗಳ ಅವಕಾಶಗಳು ಲಭ್ಯವಿವೆ.
News reporter, Graphic designer, Marketing, Advertisement, Video editor, Translator, Content creator, Social media handler, Page designer, Photographer, Executive producer ಮುಂತಾದ ಇನ್ನಿತರ ಹಲವು ಹುದ್ದೆಗಳಿಗೆ ಉದ್ಯೋಗಾವಕಾಶಗಳು ಲಭ್ಯವಿವೆ
ಮುಂಬೈ, ಚೆನ್ನೈ, ಹೈದರಾಬಾದ್, ಕೇರಳ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಮುಂತಾದ ಮಹಾನಗರಗಳಲ್ಲಿ ಹಾಗೂ ಮಂಗಳೂರು, ಉಡುಪಿ, ಬೆಳ್ತಂಗಡಿ, ಪುತ್ತೂರು ಮುಂತಾದ ಸ್ಥಳೀಯ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳು ಇರಲಿವೆ.
ಮಾರಾಟ ಮತ್ತು ಚಿಲ್ಲರೆ ವಲಯ:
ಮಾರಾಟ ಮತ್ತು ಚಿಲ್ಲರೆವಲಯದಲ್ಲಿ ಒಟ್ಟು 59 ಕಂಪನಿಗಳು ಸೇರಿ 4,500 ಉದ್ಯೋಗಾವಕಾಶಗಳು ಲಭ್ಯವಿವೆ.
Codeyoung, Bigbasket, Reliance Retail Ltd - Trends, Decathlon Sports India, Cultfit, Just Dial, Hangyo, Kalyan Jewellers, Sangeetha Mobiles, Lenskart ಸಂಸ್ಥೆಗಳು ವಿವಿಧ ಸ್ಥಳಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.
120 ಕ್ಕೂ ಅಧಿಕ ನೇಮಕಾತಿ ಮಾಡಲಿರುವ Codeyoung ಕಂಪೆನಿಯ International Sales Specialist and Lead Generation Executive ಹುದ್ದೆಗಳಿಗೆ ವಾರ್ಷಿಕ ₹5 ಲಕ್ಷದಿಂದ ₹9 ಲಕ್ಷದವರೆಗಿನ ಆಕರ್ಷಕ ವಾರ್ಷಿಕ ವೇತನ ನೀಡಲಿದೆ.
ಕನ್‌ಸ್ಟ್ರಕ್ಷನ್ ವಲಯ:
ಒಟ್ಟು 8 ಕನ್ಸ್‌ಸ್ಟಕ್ಷನ್ ವಲಯದ ಕಂಪೆನಿಗಳು 400 ಕ್ಕೂ ಹೆಚ್ಚು ಉದ್ಯೋಗಾವಕಾಶಗಳೊಂದಿಗೆ ಭಾಗವಹಿಸಲಿವೆ.
Expertise Company, Rohan Corporation India Pvt Limited, Niketan Consultants LLP, STRAECON, Bimal Buildcon Pvt Ltd, Agrima Roof and Facad Systems, Manipal Energy and Infratech limited, Spaceware Dezines ಮುಂತಾದ ಕಂಪೆನಿಗಳು ಉದ್ಯೋಗಮೇಳಕ್ಕೆ ನೋಂದಾಯಿಸಿ ಕೊಂಡಿವೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ–30ಕ್ಕೂ ಹೆಚ್ಚು ಹುದ್ದೆಗಳು:
SSLC ಮತ್ತು PUC ಅರ್ಹ ಅಭ್ಯರ್ಥಿಗಳಿಗೆ 30ಕ್ಕೂ ಹೆಚ್ಚು ಹುದ್ದೆಗಳು, ITI ಅರ್ಹತೆಗೆ 60ಕ್ಕೂ ಹೆಚ್ಚು, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 150ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ಅದೇ ರೀತಿ, ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಿಗೆ 100ಕ್ಕೂ ಹೆಚ್ಚು ಹುದ್ದೆಗಳು, ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಗೆ(M.Tech) ಹೊಂದಿರುವವರಿಗೆ 10 ಉದ್ಯೋಗಾವಕಾಶಗಳು ಲಭ್ಯವಿವೆ.
B.Com, BBM, BBA, B.Sc ಮುಂತಾದ ಪದವೀಧರರಿಗೆ ಹಾಗೂ M.Com, MBA, M.Sc ಮುಂತಾದ ಸ್ನಾತಕೋತ್ತರ ಪದವಿಧರರಿಗೆ 50ಕ್ಕೂ ಹೆಚ್ಚು ಹುದ್ದೆಗಳು ಮೀಸಲಾಗಿವೆ.
ಹಾಸ್ಪಿಟಾಲಿಟಿ ವಲಯ:
ಹಾಸ್ಪಿಟಾಲಿಟಿ ವಲಯದಲ್ಲಿ 10 ಕಂಪನಿಗಳು ಆಳ್ವಾಸ್ ಪ್ರಗತಿ 2025ಕ್ಕೆ ನೋಂದಾಯಿಸಿಕೊಂಡಿವೆ.
ಪ್ರಮುಖ ಸಂಸ್ಥೆಗಳಾದ Fortune Group of Hotels UAE, Taj Sats Air Catering Limited, The Rameshwaram Café, the Avatar Hotel, Royal Ritz Hotels, Tamara Coorg, Goldfinch Hotels, Amps Facilities Management Service ಪಾಲ್ಗೊಳ್ಳಲಿವೆ.
ಹೋಟೇಲ್ ಮ್ಯಾನಜ್ಮೆಂಟ್ ಪದವೀಧರರು ಮತ್ತು ಬಿ.ಕಾಂ, ಬಿ.ಸಿ.ಎ, ಬಿ.ಎ, ಬಿ.ಎಸ್ಸಿ, ಎಮ್.ಕಾಂ ಪದವೀಧರರಿಗೆ 240 ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ.
ವಿಶೇಷ ಸೂಚನೆ
ಆಳ್ವಾಸ್ ಪ್ರಗತಿ 2025ರ ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪೆನಿಗಳ ಮಾಹಿತಿ ಹಾಗೂ ವಿವರಕ್ಕಾಗಿ ಭೇಟಿ ನೀಡಿ: www.alvaspragati.com
ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಆಕಾಂಕ್ಷಿಗಳಿಗೆ ಜುಲೈ 31ರಿಂದ ಉಚಿತ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು.
ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಗೆ ಉಚಿತ ಬಸ್‌ನ ವ್ಯವಸ್ಥೆ ಮಾಡಲಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9741440490 / 7975223865/ 9611750531
ಸೂಚನೆ: ಐಟಿಐ, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರಂಜಿತಾ ಆಚಾರ‍್ಯ, ಮುಖ್ಯಸ್ಥರು- ತರಬೇತಿ ಮತ್ತು ನಿಯೋಜನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ; ಪ್ರಸಾದ್ ಶೆಟ್ಟಿ, ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಆಳ್ವಾಸ್ ಕಾಲೇಜು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ