Ai ಕ್ರಾಂತಿಗೆ ಹೆಜ್ಜೆ: ಯತಿಕಾರ್ಪ್‌ನಿಂದ ರಾಜ್ಯದ 10,000 ಮಂದಿಗೆ ಉಚಿತ AI ಶಿಕ್ಷಣ ಕಿಟ್ ವಿತರಣೆ

Upayuktha
0

ರೂ 20,000 ಮೌಲ್ಯದ ಕಿಟ್‌ ಪಡೆಯಲು ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!





ಮಂಗಳೂರು: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದೆ. ಇದೀಗ ಈ ಕಾರ್ಡ್ ಅನ್ನು ಒಳಗೊಂಡ AI ಸಾಕ್ಷರತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿದೆ. ಇದರ ಭಾಗವಾಗಿ, ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ ರೂ. 20,000 ಮೌಲ್ಯದ AI ಶಿಕ್ಷಣ ಕಿಟ್‌ಗಳನ್ನು ವಿತರಿಸುವ ವಿಶೇಷ ಪೈಲಟ್ ಯೋಜನೆಯನ್ನು ಯತಿಕಾರ್ಪ್‌ ಆರಂಭಿಸಿದೆ.


ನಗರದ ಪ್ರೆಸ್‌ ಕ್ಲಬ್‌ನಲ್ಲಿ ಇಂದು (ಜು.21) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ (MANAGING DIRECTOR) ಯತೀಶ ಕೆ. ಎಸ್ ಅವರು, ತಮ್ಮ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದರು.


ಈ ಯೋಜನೆಯಡಿ, ಪ್ರತಿ ತಾಲೂಕಿನಲ್ಲಿ 10 ಯುವ ಉದ್ಯೋಗಾಕಾಂಕ್ಷಿಗಳು, 5 ಪ್ರಗತಿಪರ ಕೃಷಿಕರು, 15 ಉತ್ಸಾಹಿ ವಿದ್ಯಾರ್ಥಿಗಳು, 5 ಪೊಲೀಸ್ ಅಧಿಕಾರಿಗಳು ಹಾಗೂ 5 ಪತ್ರಕರ್ತರು ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗುವುದು. ಹೀಗೆ, ರಾಜ್ಯದಾದ್ಯಂತ ಒಟ್ಟು 10,000 ಫಲಾನುಭವಿಗಳಿಗೆ AI ಶಿಕ್ಷಣ ಕಿಟ್‌ಗಳನ್ನು ಉಚಿತವಾಗಿ ವಿತರಿಸಿ, ಕೃತಕ ಬುದ್ಧಿಮತ್ತೆಯನ್ನು ಅವರವರ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಲು ತರಬೇತಿ ನೀಡಲಾಗುವುದು. ಈ ಮೂಲಕ ಒಟ್ಟು 20 ಕೋಟಿ ರೂ. ಮೌಲ್ಯದ AI ಶಿಕ್ಷಣವನ್ನು ಉಚಿತವಾಗಿ ವಿತರಿಸಲಾಗುವುದು.


ಈ ಕಾರ್ಯಕ್ರಮದ ಮೂಲಕ ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ವಿವಿಧ ಕ್ಷೇತ್ರದ 10 ಸಾವಿರ AI ತಂತ್ರಜ್ಞರನ್ನು ಸೃಷ್ಟಿಸುವ ಗುರಿ ಹಾಕಿಕೊಳ್ಳಲಾ ಗಿದೆ. ಇದರಿಂದಾಗಿ ಸಮಾಜದಲ್ಲಿ AI ಬಗೆಗಿನ ತಪ್ಪು ಕಲ್ಪನೆಗಳು ದೂರವಾಗಿ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರಲು ಸಹಾಯವಾಗಲಿದೆ.



ವಿಶೇಷ ಆಯ್ಕೆ ಪ್ರಕ್ರಿಯೆ:

ಪ್ರತಿ ತಾಲೂಕಿನಲ್ಲಿ 40 ಸೂಕ್ತ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡುವುದು ಸಂಸ್ಥೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ರೋಟರಿ, ಲಯನ್ಸ್, ಜೆಸಿಐ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಓ) ಮೂಲಕ ಆಯ್ಕೆ ಮಾಡಲಾಗುತ್ತದೆ. ಎನ್‌ಜಿಓಗಳು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ, ಯತಿಕಾರ್ಪ್ ಸಂಸ್ಥೆಯು ಉಚಿತ AI ಶಿಕ್ಷಣ ಕಿಟ್‌ಗಳನ್ನು ಈ ಸ್ಥಳೀಯ ಸಂಸ್ಥೆಗಳಿಗೆ ಪೂರೈಸಲಿದೆ. ಸ್ಥಳೀಯ ಸಂಸ್ಥೆಗಳು ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಿ ಫಲಾನುಭವಿಗಳಿಗೆ ಕಿಟ್‌ಗಳನ್ನು ಹಸ್ತಾಂತರಿಸುವಾಗ, ಯತಿಕಾರ್ಪ್‌ನ ಸಂಪನ್ಮೂಲ ವ್ಯಕ್ತಿಗಳು ಕಿಟ್‌ ಬಳಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.


ಏನಿದರ ಉದ್ದೇಶ?

ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಅತ್ಯಂತ ಅಗತ್ಯವಾಗಿದೆ. AI ಮಾನವ ಸಮಾಜಕ್ಕೆ ವರದಾನವಾಗುವ ಸಾಮರ್ಥ್ಯದ ಜೊತೆಗೆ ಶಾಪವಾಗಬಲ್ಲ ಅಪಾಯವನ್ನೂ ಹೊಂದಿದೆ. ಈ ತಂತ್ರಜ್ಞಾನವು ನಿರುದ್ಯೋಗ, ಆರ್ಥಿಕ ಅಸಮಾನತೆ, ಖಾಸಗಿತನದ ಉಲ್ಲಂಘನೆ, ತಪ್ಪು ಮಾಹಿತಿ ಹರಡುವಿಕೆ, ದಾರಿತಪ್ಪಿಸುವಿಕೆ ಮತ್ತು ಸ್ವಾಯತ್ತ ಶಸ್ತ್ರಾಸ್ತ್ರಗಳಂತಹ ಗಂಭೀರ ಅಪಾಯಗಳನ್ನು ತಂದೊಡ್ಡಬಹುದು.


ಮಾನವನ ಅಸ್ತಿತ್ವಕ್ಕೆ ಸವಾಲಾಗಬಲ್ಲ ಈ ತಂತ್ರಜ್ಞಾನವನ್ನು, ನೈತಿಕ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮಾನವಕುಲದ ಉಳಿವಿಗಾಗಿ AI ಮೇಲೆ ನಿಯಂತ್ರಣ ಸಾಧಿಸುವುದು ಅನಿವಾರ್ಯ. ಒಂದು ವೇಳೆ AI ಬಳಕೆಯು ಮಾನವನ ನೈತಿಕ ಚೌಕಟ್ಟಿನಿಂದ ಹೊರಗುಳಿದರೆ ಅಥವಾ ಕೆಲವೇ ವ್ಯಕ್ತಿ/ಸಂಸ್ಥೆಗಳ ಕೈಯಲ್ಲಿ ಕೇಂದ್ರೀಕೃತವಾದರೆ, ಅದು ಸಮಾಜದಲ್ಲಿ ಭೀಕರ ಅನಾಹುತಗಳಿಗೆ ಕಾರಣವಾಗಬಹುದು.


AI ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಪ್ರತಿಯೊಬ್ಬರಲ್ಲಿ ಬೆಳೆಸುವುದು ಇಂದಿನ ಯುಗದ ಅನಿವಾರ್ಯತೆ. ಹಾಗಾಗಿ, 'ಎಲ್ಲರಿಗೂ AI ಕಲಿಕೆ ಸಾಧ್ಯ' ಎಂಬುದನ್ನು ಸಾಬೀತುಪಡಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮೇಲೆ ತಿಳಿಸಿದ ಎಲ್ಲಾ ಗಂಭೀರ ಚಿಂತನೆಗಳನ್ನು ಮನಗಂಡು, 'AI ಈಗ ಆಯ್ಕೆಯಲ್ಲ, ಅವಶ್ಯಕತೆ' ಎಂಬ ಧೈಯವಾಕ್ಯದೊಂದಿಗೆ ಯತಿಕಾರ್ಪ್ ಸಂಸ್ಥೆಯು ಕರ್ನಾಟಕದಲ್ಲಿ AI ಸಾಕ್ಷರತಾ ಯೋಜನೆಯನ್ನು ಆರಂಭಿಸಿದೆ.


AI ಕಿಟ್‌ನಲ್ಲಿ ಏನಿದೆ?                                                                                    

ಯತಿಕಾರ್ಪ್‌ ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, ಫಲಾನುಭವಿಗಳಿಗೆ ನೀಡಲಾಗುವ 20,000 ರೂ. ಮೌಲ್ಯದ AI ಶಿಕ್ಷಣ ಕಿಟ್‌ ಅತ್ಯಾಧುನಿಕ ಸಂಪನ್ಮೂಲಗಳನ್ನು ಒಳಗೊಂಡಿದೆ. AI ಶಿಕ್ಷಣದ ಜೊತೆಗೆ ಇಪ್ಪತ್ತಕ್ಕಿಂತಲೂ ಅಧಿಕ Ai ಟೂಲ್‌ಗಳನ್ನು ಬಳಕೆಯನ್ನು ತರಬೇತಿ ನೀಡುವುದಲ್ಲದೆ ಈ ಕೆಳಗಿನವು ಸೇರಿವೆ:


1.⁠ ⁠AI ಆಕ್ಸೆಸ್ ಕಾರ್ಡ್

2.⁠ ⁠ಪ್ರಿಂಟೆಡ್ ಹ್ಯಾಂಡ್‌ಬುಕ್

3.⁠ ⁠ಡಿಜಿಟಲ್ ಆಕ್ಸೆಸ್ ಮೆಟೀರಿಯಲ್

4.⁠ ⁠AI ವರ್ಕ್‌ ಬುಕ್

5.⁠ ⁠ನೋಟ್‌ ಪ್ಯಾಡ್

6.⁠ ⁠ಮಾಸ್ಕಾಟ್ ಬ್ಯಾಡ್ಜ್

7.⁠ ⁠ವೆಲ್‌ಕಮ್ ಲೆಟರ್

8.⁠ ⁠ಸರ್ಟಿಫಿಕೇಟ್ ಆಫ್ ಎನ್‌ರೋಲ್‌ಮೆಂಟ್

9.⁠ ⁠ಲರ್ನಿಂಗ್ ಟ್ರ್ಯಾಕ‌ರ್


ವಿಶ್ವದ ಮೊದಲ AI ಕಾರ್ಡ್:

ಯತಿಕಾರ್ಪ್ ಸಂಸ್ಥೆಯ ಸಂಶೋಧನಾ ವಿಭಾಗವು 2022ರಿಂದಲೇ AI ಕಾರ್ಡ್‌ಗೆ ಸಂಬಂಧಿಸಿದಂತೆ ನಿರಂತರ ಸಂಶೋಧನೆ ನಡೆಸಿ ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸಿ ಯಶಸ್ಸು ಕಂಡಿದೆ. ಅಮೆರಿಕಾದ ಪ್ರಖ್ಯಾತ AI ವಿಜ್ಞಾನಿ ಪ್ರೊ. ಎಸ್.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಈ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳ ಒಂದು ಲಕ್ಷಕ್ಕೂ ಅಧಿಕ ಬಳಕೆದಾರರನ್ನು ತಲುಪಿದೆ.ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಪತ್ರಕರ್ತರು ಸೇರಿದಂತೆ 32 ವಿವಿಧ ಕ್ಷೇತ್ರದ ವೃತ್ತಿಪರರು ಈ ಕಾರ್ಡ್‌ ನಿಂದ ಪ್ರಯೋಜನ ಪಡೆಯುತ್ತಿದ್ದಾರೆ.


ಕೈಜೋಡಿಸಿ, ಮಾಹಿತಿ ತಲುಪಿಸಿ:

ಈ ಮಹತ್ವದ ಯೋಜನೆ ಯಶಸ್ವಿಗೊಳಿಸಲು ಸಮಾಜದ ಎಲ್ಲ ಸ್ತರಗಳ ಬೆಂಬಲ ಅನಿವಾರ್ಯ. ಸೋಷಿಯಲ್ ಮೀಡಿಯಾ ಪ್ರಭಾವಿಗಳು, ಸಾರ್ವಜನಿಕ ವ್ಯಕ್ತಿಗಳು, ಚಿತ್ರರಂಗದ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ಯತಿಕಾರ್ಪ್ ಸಂಸ್ಥೆಯು ಮನವಿ ಮಾಡಿದೆ. ಈ ಸುದ್ದಿಯನ್ನು ನಿಮ್ಮ ವೇದಿಕೆಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ. ಅರ್ಹ ಫಲಾನುಭವಿಗಳಿಗೆ ಈ ಉಚಿತ AI ಶಿಕ್ಷಣದ ಅವಕಾಶವನ್ನು ತಲುಪಿಸಲು ಸಹಾಯ ಮಾಡಿ. ನಿಮ್ಮ ಸಹಕಾರವು ಕರ್ನಾಟಕದಲ್ಲಿ AI ಸಾಕ್ಷರತಾ ಕ್ರಾಂತಿಗೆ ನಿರ್ಣಾಯಕ ಕೊಡುಗೆ ನೀಡಲಿದೆ.


ಈ ಮಹತ್ವಾಕಾಂಕ್ಷೆಯ AI ಸಾಕ್ಷರತಾ ಯೋಜನೆಯ ಮೂಲಕ, ಯತಿಕಾರ್ಪ್‌ ಸಂಸ್ಥೆಯು 10.000 ಫಲಾನುಭವಿಗಳಿಗೆ AI ಸಾಕ್ಷರತೆಯನ್ನು ಮಾತ್ರವಲ್ಲದೆ, ಸಮಗ್ರ ತಾಂತ್ರಿಕ ಪ್ರಗತಿಗೆ ಒತ್ತು ನೀಡಿದೆ. AI ಕಾರ್ಡ್‌ಗಳ ಅಭಿವೃದ್ಧಿ ಮತ್ತು ವಿತರಣೆಯು ಈಗಾಗಲೇ 1,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದು, ರಾಜ್ಯದಲ್ಲಿ ಹೊಸ ವ್ಯಾಪಾರ ಅವಕಾಶಗಳಿಗೂ ರಹದಾರಿ ಮಾಡಿಕೊಟ್ಟಿದೆ. ಶಿಕ್ಷಣ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ, ಕರ್ನಾಟಕದಲ್ಲಿ AI ಕ್ರಾಂತಿಗೆ ನಾಂದಿ ಹಾಡುವ ಮೂಲಕ, ಯತಿಕಾರ್ಪ್ ಸಂಸ್ಥೆಯು ಭವಿಷ್ಯದ ಬಾಗಿಲು ತೆರೆಯುತ್ತಿದೆ.


ಪತ್ರಿಕಾಗೋಷ್ಠಿ ಯಲ್ಲಿ ಕೃಪಾ ಕೆ (GENERAL MANAGER), ನವ್ಯ ಅಮೈ (BUSINESS DEVELOPMENT MANAGER), ಭೂಮಿಕಾ ಪೂಜಾರಿ (HR MANAGER),  ಶ್ರೀನಿಧಿ ಸಿ (SOFTWARE DEVELOPER), ಕಿರಣ್ ಸಿ.ಸಿ (SOFTWARE DEVELOPER), ರೆತಿಕ್ (S&M ASSOCIATE), ಮತ್ತು ಜಿತೇಶ್ ಶೆಟ್ಟಿ (S&M ASSOCIATE) ಉಪಸ್ಥಿತರಿದ್ದರು.




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top