ಕಲಿಯುಗವಿದು. ಇಟ್ಟ ಆಸೆ, ಕನಸು ನೆರವೇರುತ್ತದೆಯೆಂಬ ಭರವಸೆ ಇರುವುದಿಲ್ಲ. ನಮ್ಮ ನೆರಳು ನಮ್ಮನ್ನು ಬಿಟ್ಟು ಹೋಗುತ್ತದೆ, ಅದೇ ಪರಿಚಯವಾದವರು ಕೊನೆತನಕ ನಮ್ಮ ಬದುಕಲ್ಲಿ ಇರುತ್ತಾರೆಯೇ ? ಮೊದಮೊದಲು ಎಲ್ಲವೂ ಹಿತವಾಗಿರುತ್ತದೆ, ದಿನ ಕಳೆದಂತೆ ಮಾತಾಡಿದರೆ ಕಿರಿಕಿರಿ. ಮನುಷ್ಯನ ಸ್ವಭಾವವೇ ಅಷ್ಟೇ! ಬೇಕಾದಾಗ ಅಕ್ಕರೆ ತೋರಿಸಿ, ಬೇಡವೆಂದಾಗ ದೂರ ತಳ್ಳುವವರೇ ಜಾಸ್ತಿ.
ಇನ್ನೊಬ್ಬರ ಜೀವನದಲ್ಲಿ ನಾವೂ ಎಷ್ಟು ಬೇಕೋ ಅಷ್ಟಿರಬೇಕು. ಅತಿಯಾದರೆ ಉಪಯೋಗಕ್ಕೆ ಬಾರದ ವಸ್ತುವಾಗುತ್ತೇವೆ. ಇದ್ದಷ್ಟು ದಿನ ನಮ್ಮ ಖುಷಿಗಾಗಿ ಬಾಳಬೇಕು, ಇನ್ನೊಬ್ಬರ ಬಳಿ ಏನನ್ನೂ ಬಯಸದೇ ಅವರ ತಾಳಕ್ಕೆ ಕುಣಿಯದೇ. ಮಾತು ಬಾರದಂತೆ, ಏನನ್ನೂ ಕೇಳದಂತೆ, ಎಲ್ಲವನ್ನೂ ನೋಡಿ ದೂಷಿಸದೇ ಮೌನವಿರಬೇಕು ಬದುಕಲ್ಲಿ.
- ಸುಚಿರಾ ಪಿ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ