ಇನ್ನೋವೇಶನ್ ಕೌನ್ಸಿಲ್ 2025: ಇನ್ನೋವಾಸ್ಥಾನ- 'ವಿಚಾರ ವಿಕಾಸ್ ಯಾತ್ರಾದ ಕರ್ನಾಟಕ ಚಾಪ್ಟರ್'ಗೆ ರಾಜ್ಯಪಾಲರಿಂದ ಚಾಲನೆ
ಬೆಂಗಳೂರು: ಕೌನ್ಸಿಲ್ ಫಾರ್ ಇಂಡಸ್ಟ್ರಿಯಲ್ ಆಂಡ್ ಇನೋವೇಶನ್ ರಿಸರ್ಚ್ (CIIR) ಫೌಂಡೇಶನ್ ಹಾಗೂ ಜೈನ್ (ಡೀಮ್ಡ್ -ಟು -ಬಿ ಯೂನಿವರ್ಸಿಟಿ)ಯ ಸಹಯೋಗದೊಂದಿಗೆ ಇಂದು (ಜೂನ್ 28) ಬೆಂಗಳೂರಿನ ಹೋಟೆಲ್ ಶಾಂಗ್ರೀಲಾದಲ್ಲಿ “ಇನ್ನೋವೇಶನ್ ಕೌನ್ಸಿಲ್ 2025 ಆಂಡ್ ಲಾಂಚ್ ಆಫ್ ಇನ್ನೋವಾಸ್ತಾನ್ ವಿಚಾರ ವಿಕಾಸ್ ಯಾತ್ರಾ” ದ ಅಡಿಯಲ್ಲಿ ಇನೋವಾಸ್ಥಾನ್- ಕರ್ನಾಟಕ ಚಾಪ್ಟರ್ ಉಪನ್ಯಾಸ ಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಕರ್ನಾಟಕದ ಘನತೆವೆತ್ತ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿ ಮಾತನಾಡುತ್ತ, ಬೆಂಗಳೂರು ಮಹಾನಗರ ಶಿಕ್ಷಣ ಹಬ್ ಆಗುವಲ್ಲಿ ಜೈನ್ ಟು ಬಿ ಯೂನಿವರ್ಸಿಟಿಯ ಕೊಡುಗೆ ಗಮನಾರ್ಹ. ಭಾರತದ ತಕ್ಷಶಿಲಾ ನಳಂದ ವಿಶ್ವವಿದ್ಯಾಲಯಗಳು ಜ್ಞಾನ ಸಂಸ್ಕಾರ ನೀಡುವಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಆಧುನಿಕ ಕಾಲದ ಇಂದಿನ ಸಮಾಜದಲ್ಲಿ ದೇಶಾದ್ಯಂತ ಹಾಗೂ ಕರ್ನಾಟಕದ ಹಲವಾರು ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನದ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಾರತ ದೇಶ 2015ರಲ್ಲಿ ದೇಶದ ಒಟ್ಟು ಪ್ರಗತಿಯಲ್ಲಿ 81ನೆಯ ಸ್ಥಾನವನ್ನು ಹೊಂದಿದ್ದು ಈಗ 2025ರಲ್ಲಿ 40ನೇ ಸ್ಥಾನದಲ್ಲಿದೆ ಈ 10 ವರ್ಷಗಳಲ್ಲಿ ದೇಶ ಎಲ್ಲಾ ರಂಗಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಇದಕ್ಕಾಗಿ ಕಾರ್ಪೊರೇಟ್ ಸೆಕ್ಟರ್ ಗಳು, ಸ್ಟಾರ್ಟ್ ಅಪ್‌ಗಳು ಮತ್ತು ಸರ್ಕಾರದ ಶಿಕ್ಷಣ ಸಂಸ್ಥೆಗಳು ಒಟ್ಟು ಪ್ರಗತಿಗೆ ಶ್ರಮಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
CIIR ತಂಡದ ಸಂಚಾಲಕತ್ವದಲ್ಲಿ ಇನ್ನೋವೇಶನ್ ಮೂವ್ಮೆಂಟ್ 2025ರ ಇನೋವಾಸ್ಥಾನ್ ಕರ್ನಾಟಕ ಚಾಪ್ಟರ್ ವಿಷಯವಾಗಿ ಸಮೂಹ ಚರ್ಚಾಗೋಷ್ಠಿಯಲ್ಲಿ ಡಾ. ಚೆನ್‌ರಾಜ್ ರಾಯ್‌ಚಂದ್- ಚಾನ್ಸೆಲರ್, ಜೈನ್ (ಡೀಮ್ಡ್-ಟು-ಬೀ ಯೂನಿವರ್ಸಿಟಿ) ಅವರು ಮಾತನಾಡುತ್ತಾ, ಯುವ ನಾಯಕರ ನಾಯಕತ್ವದ ಬೆಳವಣಿಗೆ ಮತ್ತು ಅವರ ನಾಯಕತ್ವದಲ್ಲಿ ಭಾರತದ ವಿಕಸನವನ್ನು ಕಾಣುವ ಅವಕಾಶಕ್ಕೆ ದೇಶ ಇಂದು ಮುಂದಾಗಿರುವುದು ಗಮನಾರ್ಹ. ಭಾರತವನ್ನು ಜಗತ್ತಿನ ಭೂಪಟದಲ್ಲಿ ಔದ್ಯೋಗಿಕವಾಗಿ ಮತ್ತು ಆರ್ಥಿಕವಾಗಿ ಕಾಣುವಲ್ಲಿ ದೇಶದ ಔದ್ಯೋಗಿಕ ವಲಯದ ಹಾಗೂ ಶೈಕ್ಷಣಿಕ ವಲಯದ ಕೊಡುಗೆ ಮಹತ್ವಪೂರ್ಣ. ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಅನುಗುಣವಾಗಿ ರೂಪುಗೊಂಡ ಹಲವಾರು ಸ್ಟಾರ್ಟಪ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳ ಕಾರ್ಯಾ ಗಣನೀಯ, ಪೇಟೆಂಟ್‌ಗಳು ದೇಶದ ಪ್ರಗತಿಯಲ್ಲಿ ಗಣನೀಯವಾಗಿ ಪರಿಗಣಿತವಾಗಿವೆ. ಪೇಟೆಂಟ್‌ಗಳನ್ನು ದ್ವಿಗುಣಗೊಳಿಸುವಲ್ಲಿ ದೇಶಕ್ಕೆ ಬೌದ್ಧಿಕ ಸಾಮರ್ಥ್ಯ ಹೇರಳವಾಗಿದೆ. ದೇಶದ ಶಿಕ್ಷಣ ಸಂಸ್ಥೆಗಳು ಹಾಗೂ ಯುವ ಪ್ರತಿಭೆಗಳು ಸರಿಯಾದ ದಿಶೆಯಲ್ಲಿ ಶ್ರಮಿಸಿದ್ದೇ ಆದಲ್ಲಿ ಈ ಪೇಟೆಂಟ್‌ಗಳ ಸಂಖ್ಯೆಯನ್ನು ಹೆಚ್ಚಳಗೊಳಿಸಬಹುದು ಎಂದರು.
ಎಐಸಿಟಿ ಚೇರ್ಮನ್ ಪ್ರೊಫೆಸರ್ ಟಿ.ಜಿ ಸೀತಾರಾಮನ್ ಅವರು ಮಾತನಾಡುತ್ತಾ, ಇನ್ನೋವೇಶನ್ ಎನ್ನುವುದು ಭಾರತಕ್ಕೆ ಹೊಸದಲ್ಲ.ಅದು ನಾಗರಿಕತೆಯ ಕಾಲದಿಂದಲೂ ಬಂದದದ್ದು. ಜ್ಞಾನದಿಂದ ಹಣ ಸಂಪಾದಿಸಲು ಸಾಧ್ಯವಿದೆ ಆದರೆ ಹಣದಿಂದ ನಿಗದಿತ ಮಟ್ಟದ ಜ್ಞಾನ ಸಂಪಾದಿಸುವುದು ಸವಾಲಿನ ಕೆಲಸ. ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸುವ ರಾಷ್ಟ್ರಗಳ ಸ್ಥಾನದಲ್ಲಿ ಪ್ರಮುಖವಾಗಿ ನಿಲ್ಲುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ದೇಶದ ಪ್ರತಿಭೆ, ಜ್ಞಾನ ಭೌತಿಕ ಸಾಮರ್ಥ್ಯ ಕಾರಣವೆಂಬುದು ಪ್ರಶಂಶನೀಯ. ದೇಶದ ಔದ್ಯೋಗಿಕ ವಲಯ, ಶೈಕ್ಷಣಿಕ ವಲಯದಲ್ಲಿ ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ಸ್ಥಾಪಿತಗೊಂಡ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಇಂಜಿನಿಯರಿಂಗ್, ಇನ್ನೋವೇಶನ್ ಎಲ್ಲವೂ ಇಂದು ಕರ್ನಾಟಕದಿಂದಲೇ ಪೂರೈಕೆಯಾಗುತ್ತಿರುವುದು ವಿಶಿಷ್ಟವಾದದ್ದು. ಒಂದು ವರ್ಷದಲ್ಲಿ ಸಾವಿರಾರು ಇಂಜಿನಿಯರುಗಳು ದೇಶಾದ್ಯಂತ ರೂಪುಗೊಳ್ಳುವಲ್ಲಿ ಕರ್ನಾಟಕದ ಮತ್ತು ಬೆಂಗಳೂರಿನ ಪಾತ್ರ ಮಹತ್ವದ್ದು. ಚೀನಾ ದೇಶ ವಸ್ತುಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಮುಖ ಪಾತ್ರ ವಹಿಸಿದೆ ಮತ್ತು ಮಾರುಕಟ್ಟೆಯನ್ನು ಗಿಟ್ಟಿಸಿಕೊಂಡಿದೆ. ಇದು ಭಾರತಕ್ಕೆ ಸಾಧ್ಯವಾಗದ ಮಾತೇನಲ್ಲ. ಈ ಸವಾಲನ್ನು ದೇಶದ ಪ್ರತಿಭೆಗಳನ್ನು ಹಾಗೂ ಅವರ ಕೌಶಲ್ಯಗಳನ್ನು ಬಳಸಿಕೊಂಡು ಸಾಧ್ಯವಾಗಿಸಿಕೊಳ್ಳಲು ಸಾಧ್ಯವಿದೆ. ಆ ದಿಶೆ ಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ ಪ್ರತಿಭೆಗಳನ್ನು ಬೆಳೆಸಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ಇಂದು ತಾಂತ್ರಿಕ ಶಿಕ್ಷಣದ ಪುಸ್ತಕಗಳನ್ನು ನಮ್ಮ ಪ್ರದೇಶದ ಭಾಷೆ ಕನ್ನಡದಲ್ಲಿಯೇ ರೂಪಿಸಲು ಇಲ್ಲಿನ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರು ಮುಂದಾಗಬೇಕಿದೆ ಎಂದು ತಿಳಿಸಿದರು.
ಉನ್ನತ್ ಪಿ. ಪಂಡಿತ್- ಕಂಟ್ರೋಲರ್ ಜನರಲ್, DPIIT; ಪ್ರೊ. ಆಶುತೋಷ್ ಶರ್ಮಾ- ಅಧ್ಯಕ್ಷರು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಡಾ. ಆಶ್ವಿನ್ ಫರ್ನಾಂಡೀಸ್- ಕಾರ್ಯನಿರ್ವಾಹಕ ನಿರ್ದೇಶಕ (AMESA), QS ಕ್ವಾಕ್ವಾರೆಲ್ಲಿ ಸಿಮಾಂಡ್ಸ್‌ಪ್ರೊ. ಮುಂತಾದವರು ಪಾಲ್ಗೊoಡಿದ್ದರು.
ಇನೋವಾಸ್ಥಾನ್ ಎಂಬುದು ‘ಉನ್ನತ ಶಿಕ್ಷಣ ಸಂಸ್ಥೆಗಳು (HEIs), ಸ್ಟಾರ್ಟ್‌ಅಪ್‌ಗಳು ಮತ್ತು MSMEಗಳಲ್ಲಿ ನಾವೀನ್ಯತೆ, ಬೌದ್ಧಿಕ ಸಂಪತ್ತಿನ ಸೃಷ್ಟಿ, ತಂತ್ರಜ್ಞಾನದ ವರ್ಗಾವಣೆ ಹಾಗೂ ವಾಣಿಜ್ಯೀಕರಣ ವ್ಯವಸ್ಥೆಯಲ್ಲಿ ಪೋಷಿಸಲು ಸಮರ್ಪಿತವಾಗಿದೆ.
ಸ್ಟಾರ್ಟ್‌ಅಪ್‌ಗಳು ಮತ್ತು MSMEಗಳು ಎಂಬ ಉಪಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ 2020 ರಡಿಯಲ್ಲಿ ರೂಪಿಸಲ್ಪಟ್ಟ ಭಾರತದ ದೃಷ್ಟಿಕೋನಕ್ಕೆ ಅತ್ಯಂತ ನಿಕಟವಾಗಿದೆ ಮತ್ತು ಸಮನಾಗಿದೆ.ಅಲ್ಲದೆ ಸಾಂಸ್ಥಿಕ ನಾವೀನ್ಯತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಉದ್ಯಮ-ಶಿಕ್ಷಣ ಸಹಯೋಗವನ್ನು ಉತ್ತೇಜಿಸುತ್ತದೆ. ಇನೋವಾಸ್ಥಾನ್ CIIR ಫೌಂಡೇಶನ್‌ನ ರಾಷ್ಟ್ರೀಯ ಉಪಕ್ರಮವಾಗಿದೆ ಎಂದು ಡಾ. ಶ್ವೇತಾ ಸಿಂಗ್- ಅಧ್ಯಕ್ಷರು ಕೌನ್ಸಿಲ್ ಆಫ್ ಇಂಡಸ್ಟ್ರಿಯಲ್ ಇನ್ನೋವೇಶನ್ ಆಂಡ್ ರಿಸರ್ಚ್ (CIIR)ರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಪಾಲಿಸಿ ಟು ಪ್ರ್ಯಾಕ್ಟಿಸ್- ಬ್ರೀಡಿಂಗ್ ಅಕಾಡೆಮಿಯ, ಸ್ಟಾರ್ಟ್ ಅಪ್ಸ್ ಆಂಡ್ ಇಂಡಸ್ಟ್ರಿ ಎಂಬ ವಿಷಯದ ಮೇಲೆ ಉಮೇಶ್ ರಾಮಲಿಂಗಾಚಾರ್
ಅವರ ಸಂಚಾಲಕತ್ವದಲ್ಲಿ ನಡೆದ ವಿಶೇಷ ಚರ್ಚಾ ಗೋಷ್ಠಿಯಲ್ಲಿ ಸಂತೋಷ್ ಕುಮಾರ್ ನಿರ್ದೇಶಕರು spjmr, ಅನುಜ್ ವಿಶ್ವಕರ್ಮ- ಮುಖ್ಯಸ್ಥರು- ಉನ್ನತ ಶಿಕ್ಷಣ ಕಾರ್ಯಕ್ರಮಗಳು, ಉದಯ್ ನಾರಂಗ್- ಸಹ-ಸಂಸ್ಥಾಪಕ, ಒಮೆಗಾ ಸೀಕಿ ಮೊಬಿಲಿಟಿ, ಡಾ. ಸಕ್ಷಮ್ ಖಂಡೇಲ್‌ವಾಲ್- ನಿರ್ದೇಶಕರು ವಿಪ್ರೋ, ರಾಜೇಶ್ ಭಟ್ ಬಿ- ಡಿಎಕ್ಸ್‌ಸಿ ಟೆಕ್ನಾಲಜಿಸ್ ಹಿರಿಯ ಸಲಹೆಗಾರ, ಮೋಹನ್ ಕುಮಾರ್- ಕನ್ಸಲ್ಟೆಂಟ್ ವಿಪ್ರೋ ಮೊದಲಾದವರು ಪಾಲ್ಗೊಂಡಿದ್ದರು.
ನಂತರ ಉದ್ಯಮ ಮತ್ತು ಶೈಕ್ಷಣಿಕ ವಲಯಗಳ ನಾವೀನ್ಯತೆ ಮತ್ತು ಬದಲಾವಣೆಯ ರೂವಾರಿಗಳಿಗೆ ಗೌರವಾರ್ಪಣೆ ಸಮಾರಂಭ ನಡೆಯಿತು. ಸರ್ಕಾರಿ ಅಧಿಕಾರಿಗಳ, ಶೈಕ್ಷಣಿಕ ನಾಯಕರ, ಆವಿಷ್ಕಾರ ಮತ್ತು ಉದ್ಯಮ ಸಂಸ್ಥಾಪಕರ ನಡುವೆ ಅನೌಪಚಾರಿಕ ಸಂವಾದ ಕಾರ್ಯಕ್ರಮ ಸಂಪನ್ನವಾಯ್ತು.
ಸಂಪರ್ಕ ಮಾಹಿತಿ:
ಶ್ರೀಮತಿ ರಾಜೇಶ್ವರಿ ವೈ ಎಂ,
ಸಂಯೋಜಕರು,
ಕನ್ನಡ ವಿಭಾಗ
ಜೈನ್ ಡೀಮ್ಡ್-ಟು-ಬಿ ಯೂನಿವರ್ಸಿಟಿ
-9964663510- ym. rajeshwari@jainuniversity.ac.in
ಡಾ. ರಾಜಕುಮಾರ್ ಬಡಿಗೇರ
ಸಹಾಯಕ ಪ್ರಾಧ್ಯಾಪಕ- +9880089797
b. rajkumar@jainuniversity.ac.in
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ