ಸುಳ್ಯ: ಸುಳ್ಯದ ಜನತೆಗೆ, ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಹೊಸದೊಂದು ಮಳಿಗೆ 'ಸ್ವರ್ಣಂ ಜುವೆಲ್ಸ್' ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ.
ಗ್ರಾಹಕರ ಸೇವೆಯಲ್ಲಿ, ಚಿನ್ನೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರಿಕೆಯೊಂದಿಗೆ ಕಾರ್ಯಾರಂಭ ಮಾಡಲಿರುವ ಸ್ವರ್ಣಂ ಜುವೆಲ್ಸ್, ಜುಲೈ 7ರಂದು ಸೋಮವಾರ ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸುಂತೋಡು ಎಂಪೋರಿಯಂ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಗ್ರಾಹಕರಿಗೆ ಸಾಕಷ್ಟು ಪಾರ್ಕಿಂಗ್ ಅವಕಾಶವೂ ಲಭ್ಯವಿದೆ. ವಿಶೇಷ ಪಾರ್ಕಿಂಗ್‌ಗಾಗಿ ಕರೆಮಾಡಿ- 7975425067.
ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ ಎಂಬ ಘೋಷವಾಕ್ಯದೊಂದಿಗೆ ಕಾರ್ಯಾರಂಭ ಮಾಡಲಿರುವ ನೂತನ ಮಳಿಗೆಯಲ್ಲಿ ಪ್ರತೀ ಖರೀದಿಗೆ ಖಚಿತ ಉಡುಗೊರೆಗಳೂ ಲಭ್ಯವಿವೆ.
ಸಂಜೀವ ಕೆ., ಪ್ರವೀಣ್ ಬಿ ಗೌಡ, ಭವಿತ್ ಯು ಹಾಗೂ ಲೋಕೇಶ್ ಎಂ.ಎಸ್ ಅವರು ಸ್ವರ್ಣಂ ಜುವೆಲ್ಸ್‌ನ ಆಡಳಿತ ಪಾಲುದಾರರಾಗಿದ್ದಾರೆ.
ದೀಪೋಜ್ವಲನ ಕಾರ್ಯಕ್ರಮದಲ್ಲಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ, ಕೃಷ್ಣವೇಣಿ ಪ್ರಸಾದ್ ಮುಳಿಯ ಹಾಗೂ ಅಶ್ವಿನಿ ಕೃಷ್ಣ ಮುಳಿಯ ಹಾಗೂ ಶಶಿಕಲಾ ಮಂದಿರದ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ Ar. ಅಕ್ಷಯ್ ಕೆ.ಸಿ ಅವರು ಡೈಮಂಡ್ ಕೌಂಟರ್ ಅನ್ನು ಉದ್ಘಾಟಿಸಲಿದ್ದಾರೆ. ಸುಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಲಿದ್ದಾರೆ.
ನಾವು ತುರ್ತು ಸಮಯದಲ್ಲಿ ಗ್ರಾಹಕರ ಮನಸಿಗೊಪ್ಪುವ ಚಿನ್ನಾಭರಣಗಳನ್ನು ವಿಶೇಷವಾದ ವಿನ್ಯಾಸಗಳೊಂದಿಗೆ ತಯಾರಿಸಿಕೊಡುತ್ತೇವೆ. ಗ್ರಾಹಕರು ಮಳಿಗೆಗೆ ಭೇಟಿ ನೀಡಿ ನಮ್ಮಲ್ಲಿರುವ ವ್ಯಾಪಕ ಶ್ರೇಣಿಯ ಆಭರಣಗಳ ಸಂಗ್ರಹವನ್ನು ವೀಕ್ಷಿಸಬೇಕಾಗಿ ಕೋರುತ್ತೇವೆ.
- ಆಡಳಿತ ಪಾಲುದಾರರು, ಸ್ವರ್ಣಂ ಜ್ಯುವೆಲ್ಸ್, ಸುಳ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ