ಕೈಗೆಟಕುವ ದರದ 4-ಚಕ್ರದ ಮಿನಿ-ಟ್ರಕ್ ಏಸ್ ಪ್ರೋ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

Upayuktha
0


ಮಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಸರಕು ಸಾಗಣೆ ವಿಭಾಗದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು 4 ಚಕ್ರದ ಮಿನಿ ಟ್ರಕ್ ಏಸ್ ಪ್ರೋ ಅನ್ನು ಬಿಡುಗಡೆ ಮಾಡಿದೆ. ಕೇವಲ ₹X.99 ಲಕ್ಷದಿಂದ ಆರಂಭವಾಗುವ ಅತ್ಯಂತ ಕೈಗೆಟಕುವ ಬೆಲೆಯೊಂದಿಗೆ, ಟಾಟಾ ಏಸ್ ಪ್ರೋ ಭಾರತದ ಅತ್ಯಂತ ಕೈಗೆಟಕುವ ನಾಲ್ಕು-ಚಕ್ರದ ಮಿನಿ ಟ್ರಕ್ ಆಗಿದ್ದು, ಅಸಾಧಾರಣ ದಕ್ಷತೆ, ಬಹುಮುಖತೆ ಮತ್ತು ಉನ್ನತ ಮೌಲ್ಯವನ್ನು ನೀಡುತ್ತದೆ.


ಹೊಸ ತರಂಗದ ಉದ್ಯಮಿಗಳನ್ನು ಸಶಕ್ತಿಕರಣಗೊಳಿಸಲು ವಿನ್ಯಾಸಗೊಳಿಸಲಾದ ಟಾಟಾ ಏಸ್ ಪ್ರೋ, ಪೆಟ್ರೋಲ್, ಬೈ-ಫ್ಯೂಯಲ್ (ಸಿಎನ್‌ಜಿ + ಪೆಟ್ರೋಲ್), ಮತ್ತು ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಲಭ್ಯವಿದೆ– ಗ್ರಾಹಕರಿಗೆ ತಮ್ಮ ವ್ಯಾಪಾರದ ಅಗತ್ಯಗಳಿಗೆ ಸೂಕ್ತವಾದ ವಾಹನವನ್ನು ಆಯ್ಕೆ ಮಾಡಲು ಸೌಲಭ್ಯವನ್ನು ಒದಗಿಸುತ್ತದೆ.


ಏಸ್ ಪ್ರೋನ ಬಿಡುಗಡೆ ಕುರಿತು, ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಅವರು, “ಟಾಟಾ ಏಸ್‌ನ ಬಿಡುಗಡೆಯು ಭಾರತದಲ್ಲಿ ಸರಕು ಸಾಗಣೆ ವಿಭಾಗದಲ್ಲಿ ಕ್ರಾಂತಿಯನ್ನು ತಂದಿತು. ಕಳೆದ ಎರಡು ದಶಕಗಳಲ್ಲಿ, ಇದು 25 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಸಶಕ್ತಿಕರಣಗೊಳಿಸಿ, ಪ್ರಗತಿ ಮತ್ತು ಸಾಧ್ಯತೆಯ ಸಂಕೇತವಾಯಿತು. ಹೊಸ ಟಾಟಾ ಏಸ್ ಪ್ರೋನೊಂದಿಗೆ, ನಾವು ಹೊಸ ತಲೆಮಾರಿನ ಕನಸುಗಾರರಿಗಾಗಿ ಈ ಪರಂಪರೆಯನ್ನು ನವೀಕೃತ ಉದ್ದೇಶದೊಂದಿಗೆ ಮುಂದುವರೆಸುತ್ತಿದ್ದೇವೆ. ಸ್ಥಿರತೆ, ಸುರಕ್ಷತೆ ಮತ್ತು ಲಾಭದಾಯಕತೆಗಾಗಿ ವಿನ್ಯಾಸಗೊಳಿಸಲಾದ ಏಸ್ ಪ್ರೋ, ತಮ್ಮ ಭವಿಷ್ಯವನ್ನು ತಾವೇ ತೆಗೆದುಕೊಳ್ಳಲು ಸಿದ್ಧರಿರುವ ಆಕಾಂಕ್ಷಿಗಳ ಆಕಾಂಕ್ಷೆಗಳನ್ನು ಈಡೇರಿಸಲು ಹೆಚ್ಚಿನ ಗಳಿಕೆಯ ಸಾಮರ್ಥ್ಯವನ್ನು ಒದಗಿಸುತ್ತದೆ” ಎಂದು ಹೇಳಿದ್ದಾರೆ.


ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದ ಉಪಾಧ್ಯಕ್ಷ ಮತ್ತು ವ್ಯಾಪಾರ ಮುಖ್ಯಸ್ಥ (SCVPU) ಪಿನಾಕಿ ಹಲ್ದಾರ್ ಅವರು ಮಾತನಾಡಿ, “ಉದ್ದೇಶಿತ ಟಾಟಾ ಏಸ್ ಪ್ರೋವನ್ನು ಗ್ರಾಹಕರ ಒಳನೋಟಗಳನ್ನು ಪಡೆದು ಅಭಿವೃದ್ಧಿಪಡಿಸಲಾಗಿದೆ ಮತ್ತು ವಿವಿಧ ಅಗತ್ಯಾಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಲಕ್ಷಾಂತರ ಕಿಲೋಮೀಟರ್ಗಳನ್ನು ಒಳಗೊಂಡು ಕಠಿಣ ಪರೀಕ್ಷೆಗೆ ಒಳಗಾಗಿದೆ. ಬಹು-ಇಂಧನ ಆಯ್ಕೆಗಳು, ಸುಲಭ ಕೈಗೆಟಕುವಿಕೆಯ ದರ ಮತ್ತು ವರ್ಧಿತ ಚಾಲನಾ ಸಾಮರ್ಥ್ಯದೊಂದಿಗೆ, ಏಸ್ ಪ್ರೋ ವಿವಿಧ ಬಳಕೆಯ ಸಂದರ್ಭಗಳಲ್ಲಿ ಉನ್ನತ ಮೌಲ್ಯವನ್ನು ನೀಡುತ್ತದೆ” ಎಂದು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top