ಇದು ಕೊಪ್ಪ ಕಸದ ಘಟಕದಲ್ಲಿ ಹಾಕಿದ CC ಕ್ಯಾಮರಾದ ಕೇಬಲ್ ಮತ್ತು ಕ್ಯಾಮರ. ಕೇಬಲ್ ರಕ್ಷಣೆಗೆ ಹೊರಗಡೆ ಪೈಪ್ ಇದೆ! ಆದರೆ ಅದನ್ನು ನೆಲದ ಮೇಲೆ ಹಾಕಿಕೊಂಡು ಹೋಗಲಾಗಿದೆ! ಅದರ ಮೇಲೆ ದಿನಕ್ಕೆ ನಾಲ್ಕು ಬಾರಿ ಟ್ರಾಕ್ಟರ್, ನಾಲ್ಕು ಬಾರಿ ಕಸದ ಗೂಡ್ಸ್ ಗಾಡಿಗಳು ಓಡಾಡುತ್ತವೆ!
ಕ್ಯಾಮರ ಅಳವಡಿಸಿದ ಅಧಿಕಾರಿಗಳಿಗೆ, ಪಂಚಾಯತಿ ಇಂಜನಿಯರ್‌ಗಳಿಗೆ, ಅದನ್ನು ಹಾಗೆ ಹಾಕಲು ಮೀಟಿಂಗ್‌ನಲ್ಲಿ ಸಲಹೆ ಮತ್ತು ಬಹುಮತದ ಅನುಮತಿ ನೀಡಿದ ರಿಯಲ್ ಸ್ಟಾರ್ಸ್ ಕೊಪ್ಪ ಪಟ್ಟಣ ಪಂಚಾಯತಿ ಸದಸ್ಯರುಗಳಿಗೆ ಮುಂದಿನ ಯಾವುದಾದರು ಒಂದು ರಾಷ್ಟ್ರ ಪ್ರಶಸ್ತಿಗೆ ನಾಮಿನೇಟ್ ಮಾಡಬಹುದು.
ನಮ್ಮ ಕೊಪ್ಪದ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳು ನಮ್ಮ ಹೆಮ್ಮೆ!
*****
ಸಾರ್ವಜನಿಕರಿಗೆ ಮೂರು ರಸ ಪ್ರಶ್ನೆಗಳು.
1) ಕಸ ಘಟಕದಲ್ಲಿ ಹೀಗೆ ಕ್ಯಾಮರ ಹಾಕಿದ್ದು ಏಕೆ?
2) ವಾಹನ ತಿರುಗಾಡುವ ದಾರಿಯಲ್ಲೇ ಶುಭ್ರ ಬಿಳಿ ಬಣ್ಣದ ಪೈಪ್ ಮತ್ತು ಅದರೊಳಗೆ ಶುಭ್ರ ಬಿಳಿ ಬಣ್ಣದ ಕ್ಯಾಮರ ಕೇಬಲ್ ಹಾಕಿರುವುದೇಕೆ?
3) ಕಂಬದಲ್ಲಿ ಕ್ಯಾಮರವನ್ನು ನೆಲ ಮುಖ ಮಾಡಿ ನೇತು ಹಾಕಿರುವುದೇಕೆ?
ಕೊಪ್ಪದ ಪಂಚಾಯತಿಯವರ ಹೊರೆತಾಗಿ (ಅವರು ಉತ್ತರ ಕೊಡುವುದಿಲ್ಲ) ರಾಜ್ಯದ ಯಾರು ಬೇಕಾದರೂ ಊಹಿಸಿ ಉತ್ತರ ಕೊಡಬಹುದು!!
ಒಂದು ವೇಳೆ ಮೂರೂ ಉತ್ತರಗಳು ಸರಿ ಉತ್ತರ ಆಗಿದ್ದರೆ ಸೂಕ್ತ ಬಹುಮಾನ ಇರುತ್ತದೆ. (ಉತ್ತರ ಬರೆಯುವಾಗ ಪ್ರಶ್ನೆ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿ)
****
ಉತ್ತರ ಬರೆಯುವವರಿಗೆ ಅನುಕೂಲವಾಗಲಿ ಎಂದು ಒಂದು ಮಾದರಿ ಸಂಭವನೀಯ ಉತ್ತರಗಳ ಪಟ್ಟಿ!:
1) ಪರ್ಸೆಂಟೇಜ್ ಹಣವನ್ನು ಹಂಚಿಕೆ ಮಾಡಲು
2) ಹೊರಗಡೆ ಶುಭ್ರವಾಗಿದ್ದರೂ ಒಳಗಡೆ ವಿದ್ಯುತ್ ಶಕ್ತಿ ಇಲ್ಲದ, ಗಟ್ಟಿತನವಿಲ್ಲದ, ವಿದ್ಯುತ್ ಪ್ರವಹಿಸುವ ಸಾಮರ್ಥ್ಯವಿಲ್ಲದ, ತುಕ್ಕು ಹಿಡಿದು ಅಯೋಗ್ಯವಾಗಿರುವ, ಸತ್ತು ನಿಷ್ಕ್ರಿಯವಾಗಿರುವ ವಿದ್ಯುತ್ ತಂತಿಗಳ ಗುಣಮಟ್ಟವನ್ನು ಮುಚ್ಚುವ ಪ್ರಯತ್ನವಾಗಿ, CC ಕ್ಯಾಮರಕ್ಕೆ ಶುಭ್ರ ಬಿಳಿ ಬಣ್ಣದ ಪೈಪ್ ಮತ್ತು ಅದರೊಳಗೆ ಶುಭ್ರ ಬಿಳಿ ಬಣ್ಣದ ದಪ್ಪ ಚರ್ಮದ ಕೇಬಲ್ ಬಳಸಲಾಗಿದೆ
3) ಅಡಕೆ ಮರ ಹತ್ತುವ ಚಿಗಳಿ ಇರುವೆಗಳು ಸಿಮೇಂಟ್ ಕಂಬ ಹತ್ತದಂತೆ ಕ್ಯಾಮರವನ್ನು ನೆಲ ಮುಖ ಹಾಕಿ, 'ಇಲ್ಲಿ cc ಕ್ಯಾಮರದ ಕಣ್ಗಾವಲಿದೆ' ಎಂದು ಇರುವೆಗಳಿಗೆ ತಿಳಿಸಲು! ಕ್ಯಾಮರ ಅಳವಡಿಸಲಾಗಿದೆ.
****
ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಸರಕಾರದ ಘೋಷ ವಾಕ್ಯದಡಿಯಲ್ಲಿ ಮತ್ತು ಧೈರ್ಯವಾಗಿ ಪ್ರಶ್ನಿಸಿ ಎಂಬ ಉತ್ತೇಜನದ ಹಿನ್ನಲೆಯಲ್ಲಿ ಈ ಪ್ರಶ್ನೆಗಳು.
ಧೈರ್ಯವಾಗಿ ಉತ್ತರಿಸಿ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ