ಸಾಗರ: ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತು ವಾರ್ಷಿಕ ಸಭೆ

Upayuktha
0


ಸಾಗರ: ರಾಘವೇಶ್ವರ ಭವನದಲ್ಲಿ ಇಂದು (ಜೂ.23) ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತು ಸಾಗರ (ರಿ) ವಾರ್ಷಿಕ ಸಭೆಯು ನಡೆಯಿತು.


ಖ್ಯಾತ ಘನಪಾಠಿಗಳಾದ ಸುಚೇತನ ಭಟ್, ಸುಮುಖ ಭಟ್, ದತ್ತಾತ್ರೇಯ ಭಟ್ ಇವರುಗಳಿಂದ ಸಲಕ್ಷಣ ಘನ ಪಾರಾಯಣ ನಡೆಯಿತು ಹಾಗೂ ಪಾರಾಯಣ ಕ್ರಮದ ಬಗ್ಗೆ ಮಾಹಿತಿ ನೀಡಿದರು.


ಅರುಣ ಭಟ್ ಕೊಳಗಿ ಇವರು ಮನಶಾಸ್ತ್ರದ ಬಗ್ಗೆ ಉಪನ್ಯಾಸ ನಡೆಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಏಕಾಗ್ರತೆಯ ಮಹತ್ವ ತಿಳಿಸಿದರು. ಸೀತಾರಾಮ ಹೆಗಡೆ ಮಾತನಾಡಿ, ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾಹಿತಿ ಉಪನ್ಯಾಸ ನೀಡಿದರು.


ಸಭಾಧ್ಯಕ್ಷರಾದ ನಾಗರಾಜ ಭಟ್ ಮುಂಗರವಳ್ಳಿ ವೈದಿಕರ ಜವಾಬ್ದಾರಿ ಕುರಿತು ಮಾತನಾಡಿದರು. ವಾರ್ಷಿಕ ಮಹಾಸಭೆ ಯ ಅಧ್ಯಕ್ಷ ತೆ ವಹಿಸಿ ಮಾತನಾಡಿದ ರಾಜೇಂದ್ರ ಪ್ರಸಾದ ಭಟ್, ಪರಿಷತ್ತಿನ ಮುಂದಿನ ಕಾರ್ಯಚಟುವಟಿಕೆ ವಿವರಿಸಿದರು.


ವಿಷ್ಣುಮೂರ್ತಿ ಭಟ್ ನಿರೂಪಿಸಿದರು. ಸುಮಂತ ಭಟ್ ಮಡಸೂರು ವಂದಿಸಿದರು. ಕಾರ್ಯದರ್ಶಿಗಳಾದ ಸಮರ್ಥ ಭಟ್ ಮಂಕಳಲೆ, ಶೇಷಗಿರಿ ಭಟ್ ಸಿಗಂಧೂರು, ರವೀಂದ್ರ ಶರ್ಮಾ, ಪ್ರಶಾಂತ ಕೊಳತ್ತಾಯ, ಅನಿಲ ಹೊಳ್ಳ, ಪರಮೇಶ್ವರ ಭಟ್, ರಾಘವೇಂದ್ರ ಭಟ್, ಶ್ರೀರಾಮ ಭಟ್ ಕಲ್ಮಕ್ಕಿ, ಮನುಭಟ್, ಶ್ರೀಮೂರ್ತಿ ಭಟ್ ಗೀಜಗಾರು, ಶಂಕರ ದೀಕ್ಷಿತ, ಉಮೇಶ ಭಟ್ ಸಂಪ, ಇನ್ನಿತರರು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top