ಗುಣದಿಂದ ಮಾತ್ರ ಮನುಷ್ಯ ಜೀವಂತ: ಶ್ರೀ ಶಿವಕುಮಾರ ಸ್ವಾಮೀಜಿ

Upayuktha
0

ವೆಂಕಯ್ಯ ಕೂಸಯ್ಯ ಗುತ್ತೇದಾರರ 28ನೆಯ ಪುಣ್ಯಾರಾಧನೆ




ಅಫಜಲ್ಪುರ: ಮನುಷ್ಯನು ತನ್ನ ಜೀವನದಲ್ಲಿ ಮಾಡುವ ತಪಸ್ಸು ತ್ಯಾಗ, ದಾನ ಮುಂತಾದ ಗುಣಗಳಿಂದ ಮಾತ್ರ ಜೀವಂತನಾಗಿರುತ್ತಾನೆ ವಿನಃ ಬೇರೆ ಯಾವುದೋ ಸಂಪತ್ತಿನಿಂದ ಅಲ್ಲ ಎಂದು ಬೀದರ್ ನ ಚಿದಂಬರ ಆಶ್ರಮದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

 

ಸ್ಟೇಷನ್ ಗಾಣಗಾಪುರದಲ್ಲಿ ಜೂನ್ 22ರಂದು ಭಾನುವಾರ ನಡೆದ ವೆಂಕಯ್ಯ ಕೂಸಯ್ಯ ಗುತ್ತೇದಾರರ 28ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬನು ಪ್ರಸಿದ್ಧಿ ಪಡೆಯಬೇಕೆಂಬ ಉದ್ಘಾಟವಾದ ಹಂಬಲ ಹೊಂದಿರುತ್ತಾನೆಮನುಷ್ಯನು ಸದ್ಗುಣಗಳಿಂದ ಬಾಳಿ ತ್ಯಾಗ, ದಾನ ಮುಂತಾದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿ ಜೀವಂತವಾಗಿರುತ್ತಾನೆಯೇ ಹೊರತು ತನ್ನ ಐಶ್ವರ್ಯ ಸಂಪತ್ತುಗಳಿಂದ ಜೀವಂತವಾಗಿರಲು ಸಾಧ್ಯವಿಲ್ಲ ಶರೀರ ಜೀವಂತವಾಗಿರಲು ಸಾಧ್ಯವಿಲ್ಲ. ಆದರೆ ಪುಣ್ಯದ ಕೆಲಸ ಮಾಡಿ ಮಾನವೀಯ ಮೌಲ್ಯಗಳಿಂದ ಕೀರ್ತಿ ಹೊಂದಿ ಸದಾ ಜೀವಂತವಾಗಿರಲು ಸಾಧ್ಯವಿದೆ. ಅಂತಹ ಬದುಕನ್ನು ಮಾಡಿದ ವೆಂಕಯ್ಯ ಗುತ್ತೇದಾರರನ್ನು ಸ್ವಾಮೀಜಿಗಳು ಗಣ್ಯರು ಜನರು 27 ವರ್ಷಗಳಿಂದಲೂ ಜೀವಂತವಾಗಿರಿಸುವುದಕ್ಕೆ ಅವರ ಗುಣವಂತಿಕೆಯ ಜೀವನವೇ ಸಾಕ್ಷಿ. ಶ್ರೀ ರಾಮನ ಗುಣಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ನಿಮ್ಮಲ್ಲಿರುವ ರಾವಣನ ಗುಣಗಳನ್ನು ತ್ಯಜಿಸಿ ಉತ್ತಮ ಬದುಕು ಮಾಡಿದರೆ ಪೂಜಿತನಾಗುತ್ತಾನೆ. ಹಾಗೆ ಜನರಿಗೆ ಮಾಡಿದ ಸೇವೆ ತ್ಯಾಗ ದಾನಗಳಿಂದ ವ್ಯಕ್ತಿ ಶಾಶ್ವತವಾಗಿ ಜನರ ಮಧ್ಯೆ ಉಳಿದುಬಿಡುತ್ತಾನೆ. ಹಾಗಾಗಿ 28 ವರ್ಷ ಸಂದರು ಪೂಜ್ಯರು ಗಣ್ಯರು, ಜನರು ಸೇರಿ ಪುಣ್ಯಾರಾಧನೆ ಮಾಡುತ್ತಿದ್ದೇವೆ ಎಂದು ಹೇಳಿದರು. 


ಪುಣ್ಯದ ಕಾರ್ಯದಿಂದ ಶಾಶ್ವತ ಸ್ಮರಣೆ: ಜಿಡಗಾಶ್ರೀ


ನಮ್ಮ ಬದುಕಿನಲ್ಲಿ ಪುಣ್ಯದ ಕಾರ್ಯಗಳನ್ನು ಮಾಡಿದರೆ, ಪರಮಾತ್ಮನು ಮೆಚ್ಚಿಕೊಳ್ಳುತ್ತಾನೆ ನಾವು  ಪಾಪ ಕರ್ಮಗಳನ್ನು ಮಾಡಿ ಬದುಕು ಸಾಧಿಸಿದರೆ ದೇವರ ಮುನಿ ಸಿಗೆ ಕಾರಣನಾಗುತ್ತಾನೆ. ಪುಣ್ಯದ ಕಾರ್ಯದಿಂದ ಕಾಯ ಅಳಿದರೂ ಸ್ಮರಣೆ ಶಾಶ್ವತವಾಗಿ ಉಳಿಯುತ್ತದೆ ಎಂದು ಜಡಗಾ, ಮುಗಳಖೋಡ ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. 


ದಿವಂಗತ ವೆಂಕಯ್ಯ ಗುತ್ತೇದಾರರು ಪುಣ್ಯದ ಜೀವನ ಮಾಡಿ ಬಡಬಗ್ಗರ ಕಣ್ಣೀರು ಒರೆಸಿ, ನೊಂದವರಿಗೆ ಸಹಾಯ ಹಸ್ತ ಚಾಚಿ ಜನಾನುರಾಗಿ ಆಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬಂದು 28ನೇ ವರ್ಷದ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.ಅಂತಹ ಶ್ರೇಷ್ಠ ವ್ಯಕ್ತಿತ್ವದ ನಮಗೆ ಆದರ್ಶವಾಗಲಿ ಎಂದರು.


ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಅಭಿನವ ಚೆನ್ನ ಮಲ್ಲ ಶಿವಯೋಗಿ ಶಿವಾಚಾರ್ಯರು ಪೂಜ್ಯ ವಿಶ್ವರಾಧ್ಯ ಮಳೆಯಿಂದ ಶಿವಾಚಾರ್ಯರು ಪೂಜ್ಯ ಸಿದ್ದರಾಮ ಶಿವಾಚಾರ್ಯರು, ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಪೂಜ್ಯ ಶಂಭುಲಿಂಗ ಶಿವಾಚಾರ್ಯರು ಪೂಜ್ಯ ರಾಜಶೇಖರ ಶಿವಾಚಾರ್ಯರು, ಪೂಜ್ಯ ಶಂಕರಾನಂದ ಶಿವಾಚಾರ್ಯರು, ಪೂಜ ಗುಂಡು ಮುತ್ಯಾ, ಸಚಿವರಾದ ಮಾಲಿಕಯ್ಯ ಗುತ್ತೇದಾರ್, ಚಂದ್ರಕಾಂತ ಗುತ್ತೇದಾರ್ ಸತೀಶ್ ಗುತ್ತೇದಾರ್, ಅಶೋಕ್ ಗುತ್ತೇದಾರ್ ಅರವಿಂದ ಗುತ್ತೇದಾರ್, ನಿತಿನ್ ಗುತ್ತೇದಾರ್ ಜಮುನಾ ಗುತ್ತೇದಾರ್, ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ್, ಪ್ರವೀಣ್ ಗುತ್ತೇದಾರ್ ಕುಶಾಲ ಗುತ್ತೇದಾರ್ ಡಾಕ್ಟರ್ ಸುಶೀಲ್ ಗುತ್ತೇದಾರ್ ಅಮೋಘ ಗುತ್ತೇದಾರ್ ಸುಶೀಲ ಗುತ್ತೇದಾರ್, ಅರವಿಂದ ಹಾಲಾಕಿ ಶಿವಪುತ್ರಪ್ಪ ಕೊರಳ್ಳಿ, ಮಕ್ಬುಲ್ ಪಟೇಲ್ ವಿಶ್ವನಾಥ ರವರು ಶಾಂತಯ್ಯ ಹಿರೇಮಠ್ ಪಾಷಾ ಮಣ್ಣೂರ್ ಡಾ. ಸದಾನಂದ ಪೆರ್ಲ ಮತ್ತಿತರ ಅನೇಕರು ಉಪಸ್ಥಿತರಿದ್ದರು.


ಖ್ಯಾತ ಸಂಗೀತ ಕಲಾವಿದರಾದ ಬಾಬುರಾವ್ ಕೋಬಾಳ್, ಶಿವಶಂಕರ ಬಿರಾದಾರ್, ಬಸಯ್ಯ ಗುತ್ತೇದಾರ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶನಿವಾರ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆ ನೆರವೇರಿತು. ಜಾತಿ ಮತ ಪಂಥವನ್ನು ಮೀರಿ ಸರ್ವರು ಪುಣ್ಯಾರಾಧನೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.


ಸಹೋದರರ ವೈಮನಸ್ಸು ದೂರಾಗಿದೆ, ಸಂತುಷ್ಟಿ ತಂದಿದೆ: ಮಾಲಿಕಯ್ಯ ಗುತ್ತೇದಾರ್



ಸ್ಟೇಷನ್ ಗಾಣಗಾಪುರ: ಪೂಜ್ಯರಾದ ದಿವಂಗತ ವೆಂಕಯ್ಯ ಕೂಸಯ್ಯ ಗುತ್ತೇದಾರ್ ಅವರು ಸದ್ಗುಣಗಳನ್ನು ಮತ್ತು ದಾನ ,ಧರ್ಮದಿಂದ ಜನರ ಮನಸ್ಸು ಗೆದ್ದ ಮಹಾ ಮಾನವತಾವಾದಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಡೀ ಗುತ್ತೇದಾರ್ ಕುಟುಂಬಸ್ಥರು ಮುನ್ನಡೆಯುತ್ತಿದ್ದೇವೆ. ನಾವು ಸಹೋದರರು ಯಾವುದೋ ಕಾರಣಕ್ಕಾಗಿ ದೂರಾಗಿದ್ದು ತಂದೆಯವರಿಗೂ ಅದು ಖುಷಿ ಕೊಟ್ಟಿರಲಿಲ್ಲ. ಹೀಗಾಗಿ ವೈಮನಸ್ಸು ಬಿಟ್ಟು ಈಗ ಒಂದಾಗಿದ್ದೇವೆ. ಅದಕ್ಕಾಗಿ ಈಗ ಸಂತುಷ್ಟಿ ನೆಲೆಸಿದ ವಾತಾವರಣ ಕಂಡುಬರುತ್ತಿದೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಹೇಳಿದರು.


ವೆಂಕಯ್ಯ ಕೂಸಯ್ಯ ಗುತ್ತೇದಾರರ 28ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ,  ತಂದೆಯವರು ಹಾಕಿಕೊಟ್ಟ ಇಂತಹ ಮಹಾನ್ ಆದರ್ಶವಿದ್ದರೂ ಕಳೆದ ವರ್ಷ ಯಾವುದೋ ಕಾರಣಕ್ಕಾಗಿ ಸಹೋದರರು ಪರಸ್ಪರ ವೈ ಮನಸು ತಾಳಿ ದೂರಾಗಿದ್ದೆವು. ಅದಕ್ಕಾಗಿ ಕೈಲಾಸವಾಸಿಯಾದ ತಂದೆಯವರು ಕೂಡ ಮುನಿಸಿಕೊಂಡ ಕಾರಣದಿಂದಾಗಿ ಪ್ರತಿ ವರ್ಷ ಪುಣ್ಯ ಸ್ಮರಣೆ ಯಂದು ಮಳೆ ಬರುತ್ತಿದ್ದರೂ ಕಳೆದ ವರ್ಷ ಮಾತ್ರ ಮಳೆ ಕೂಡ ಬರದೆ ಅದರ ಸೂಚನೆಯನ್ನು ನೀಡಿತ್ತು. ಕೃಷಿ ಕಾಯಕ ಜೀವಿಯಾದ ತಂದೆಯವರ ಪುಣ್ಯ ಸ್ಮರಣೆಯ ದಿನ ಪ್ರತಿ ವರ್ಷ ಮಳೆ ಬಂದು ಉತ್ತಮ ಬೆಳೆಯಾಗಿ ಸಂತುಷ್ಟದ ಜೀವನ ಎಲ್ಲೆಡೆ ಆಗುತ್ತಿತ್ತು. ಕುಟುಂಬದ ವೈಮನಸಿನಿಂದ ಕಳೆದ ವರ್ಷ ಅದರ ಆಘಾತ ಅನುಭವಿಸಿದ್ದೆವು. ಆದರೆ ಈಗ ಸಹೋದರರೆಲ್ಲ ವೈಮನಸ್ಸನ್ನು ದೂರ ಮಾಡಿ ಒಂದಾಗಿರುವುದರಿಂದ ಮತ್ತೆ ಮಳೆ ಸುರಿದಿದೆ. ಸಂತುಷ್ಟಿ ನೆಲೆಸಿದೆ ಹೀಗಾಗಿ ತಂದೆಯವರು ಸಂತುಷ್ಟಿ ಹೊಂದಿದ್ದಾರೆ ಎಂಬುದಕ್ಕೆ ಪ್ರಕೃತಿ ಕೂಡಾ ಸಾಕ್ಷಿಯಾಗಿದೆ ಎಂದರು. 


ಎಲ್ಲರೂ ನಿಮ್ಮ ತಂದೆ ತಾಯಿಯನ್ನು ದೇವರಂತೆ, ಪೂಜ್ಯ ಭಾವನೆಯಿಂದ ಕಂಡು ಅವರ ಸೇವೆಯನ್ನು ಮಾಡಿ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅದುವೇ ನಿಜವಾದ ದೇವರ ಸೇವೆ ಯಾಗುತ್ತದೆ ಎಂದು ಅವರು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top