ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್.ಡಿ.ಎಂ. ಉಜಿರೆಯ ಎನ್ನೆಸ್ಸೆಸ್‌ ಸ್ವಯಂಸೇವಕರು

Upayuktha
0


ಉಜಿರೆ: ಇಲ್ಲಿನ ಶ್ರೀ ಧ. ಮಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕ ನೆವಿಲ್ ನವೀನ್ ಮೋರಸ್ ಮತ್ತು ದೀಪಕ್ ಇತ್ತೀಚೆಗೆ ನಡೆದ ಎರಡು ವಿಭಿನ್ನ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಭಾಗವಹಿಸಿದರು.


ಮೇ ತಿಂಗಳ 15 ಮತ್ತು 16 ರಂದು ಮಂಗಳೂರಿನ ಯೆನೆಪೋಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ದಲ್ಲಿ ಭಾರತ ಸರಕಾರ ಮತ್ತು ಯೂತ್ ಅಫೇರ್ಸ್ ಮತ್ತು ಸ್ಪೋರ್ಟ್ಸ್ ವತಿಯಿಂದ “ಭಾರತದ ಭವಿಷ್ಯವನ್ನು ಕಲ್ಪಿಸುವುದು: ಬದಲಾವಣೆ ತರುವವರಾಗಿ ಯುವಕರು” ಎಂಬ ಹೆಸರಿನಡಿಯಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕೀರ್ಣ ಐಕಾನ್ ಯೂತ್ 2025 ರಲ್ಲಿ ಇಲ್ಲಿನ ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕ ನೇವಿಲ್ ನವೀನ್ ಮೊರಾಸ್ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧೀಕರಿಸಿ ಭಾಗವಹಿಸಿದರು.


ಇದೇ ತಿಂಗಳ 5 ಮತ್ತು 6 ರಂದು ರಾಜ್ಯ ಎನ್ ಎಸ್ ಎಸ್ ಸೆಲ್ ಮತ್ತು ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಸಹಯೋಗದೊಂದಿಗೆ ನಡೆದ “ಗ್ಲೋಬಲ್ ಯೂತ್ ಸುಮ್ಮಿಟ್ 2025, ಯೂತ್ ಪವರ್, ಇನ್ನೋವೇಟ್, ಇನ್ಸ್ಪೈರ್, ಇಂಪ್ಯಾಕ್ಟ್” ನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ದೀಪಕ್ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧೀಕರಿಸಿ ಭಾಗವಹಿಸಿದರು.


ಇವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ. ಪಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್, ಪ್ರೊ. ದೀಪ ಆರ್. ಪಿ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top