ಗ್ರಾಮೀಣ ಮಕ್ಕಳಿಗೆ ವಿದ್ಯೆಯ ಬೆಳಕು: ಡಾ. ಶ್ರೀಶ ಬೈಪದವು

Upayuktha
0

 4,600 ವಿದ್ಯಾರ್ಥಿಗಳಿಗೆ ವಾಂಟಿವಾ–ಆಕಾಂಕ್ಷಾ ಶಾಲಾ ಕಿಟ್ 



ಪುತ್ತೂರು: ಪುತ್ತೂರಿನ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಬೆಂಗಳೂರಿನ ವಾಂಟಿವಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಕೈಜೋಡಿಸಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಗ್ರಾಮೀಣ ಭಾಗದ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ಗಳನ್ನು ವಿತರಿಸುವ ಶ್ಲಾಘನೀಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿವೆ.


ವಾಂಟಿವಾ ಸಂಸ್ಥೆಯ ಸಿಎಸ್ಆರ್ (CSR) ನಿಧಿಯ ಬೆಂಬಲದಿಂದ, ಆಕಾಂಕ್ಷಾ ಟ್ರಸ್ಟ್ ನಡೆಸಿದ ಈ ಅಭಿಯಾನದ ಭಾಗವಾಗಿ, ಒಟ್ಟು 29 ಶಾಲೆಗಳ 4,600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಿಟ್ಗಳನ್ನು ಶಾಲೆಯ ಶೈಕ್ಷಣಿಕ ವರ್ಷದ ಆರಂಭದೊಳಗೆ ವಿತರಿಸಲಾಗಿದೆ. ಈ ಕಿಟ್ಗಳಲ್ಲಿ ಶಾಲಾ ಚೀಲ, ಕಂಪಾಸ್ ಬಾಕ್ಸ್ ಮತ್ತು ಹತ್ತು ನೋಟ್ ಪುಸ್ತಕಗಳು ಸೇರಿದ್ದು, ಒಟ್ಟು 42,000ಕ್ಕೂ ಅಧಿಕ ಪುಸ್ತಕಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಲಾಗಿದೆ.


ಈ ಶೈಕ್ಷಣಿಕ ಸಹಾಯದಿಂದ ದಕ್ಷಿಣ ಕನ್ನಡ ಜಿಲ್ಲೆಯ 26 ಮತ್ತು ಕಾಸರಗೋಡು ಜಿಲ್ಲೆಯ 3 ಗ್ರಾಮೀಣ ಶಾಲೆಗಳು ಪ್ರಯೋಜನ ಪಡೆದುಕೊಂಡಿವೆ. ಈ ಯೋಜನೆ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಲ ನೀಡುವುದರ ಜೊತೆಗೆ, ಶೈಕ್ಷಣಿಕ ಸಮಾನತೆಗೆ ಸಹಾಯ ಮಾಡುವುದರಲ್ಲಿ ಸಹ ಪ್ರಾಮುಖ್ಯತೆ ಹೊಂದಿದೆ.


ಗ್ರಾಮೀಣ ಶಾಲಾ ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಂದ ಈ ಕಿಟ್ ವಿತರಣಾ ಕಾರ್ಯಕ್ರಮವು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಯೋಜನೆಯ ಹಿನ್ನೆಲೆಯು 'ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಶಿಕ್ಷಣ ಸೌಲಭ್ಯ’ ನೀಡುವ ಉದ್ದೇಶವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.


 ಪ್ರತೀ ಮಕ್ಕಳು ಸಮಾನ ಶೈಕ್ಷಣಿಕ ಸೌಲಭ್ಯ ಪಡೆಯಬೇಕು ಎಂಬುದು ನಮ್ಮ ನಂಬಿಕೆ. ವಾಂಟಿವಾ ಸಂಸ್ಥೆಯ ಈ ಸಹಭಾಗಿತ್ವ ಗ್ರಾಮೀಣ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ನಿಜವಾದ ಬದಲಾವಣೆಗೆ ಕಾರಣವಾಗುತ್ತಿದೆ.

- ಡಾ. ಶ್ರೀಶ ಬೈಪದವು, ಸಂಸ್ಥಾಪಕ ಟ್ರಸ್ಟಿ, ಆಕಾಂಕ್ಷಾ ಟ್ರಸ್ಟ್ ಪುತ್ತೂರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top