ಮುಂಬೈಯಲ್ಲಿ ಕೆ.ಹೆಚ್. ಮಂಜುನಾಥ್ ದಂಪತಿಗಳಿಗೆ ಕನ್ನಡ ಸೇವೆಗೆ ಸನ್ಮಾನ

Upayuktha
0



ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ, ಯಕ್ಷರಂಗ ಯಕ್ಷಗಾನ ಸಂಸ್ಥೆಯ ಗೌರವ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ದಂಪತಿಗಳಿಗೆ ಇತ್ತೀಚಿಗೆ ಮುಂಬೈಯಲ್ಲಿ ದೇವಾಡಿಗ ಭವನ ಸಮಾರಂಭದಲ್ಲಿ ದೇವಡಿಗ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ದಾವಣಗೆರೆಯಲ್ಲಿ ಐದು ದಶಕಗಳ ಕಾಲ ನಿರಂತರ ದೇವಾಡಿಗ ಸಂಘದ ಜತೆಗೆ ಕನ್ನಡ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳ ಸಾಧನೆಗಳನ್ನು ಗುರುತಿಸಿ ವಸಂತಿ ಮಂಜುನಾಥ್ ದಂಪತಿಗಳಿಗೆ ಗೌರವ ಪೂರ್ವಕ ಸನ್ಮಾನಿಸಲಾಯಿತು.


ವಿಜೃಂಭಣೆಯ ಈ ಸಮಾರಂಭದ ವೇದಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಸಂಘದ ಗೌರವಾಧ್ಯಕ್ಷರಾದ ಪ್ರವೀಣ್ ಎನ್. ದೇವಾಡಿಗ, ಅಧ್ಯಕ್ಷರಾದ ಧರ್ಮಪಾಲ್ ಯು. ದೇವಾಡಿಗ ಮುಖ್ಯ ಅತಿಥಿಗಳಾಗಿ ಮೋಹನ್‌ ದಾಸ್ ಹಿರಿಯಡ್ಕ ಮುಂತಾದ ಗಣ್ಯ ಮಾನ್ಯರು ಉಪಸ್ಥಿತರಿದ್ದರು.


ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಸಿನಿಮಾ ಸಿರಿ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಎಲ್ಲಾ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿಮಾನದಿಂದ ಅಭಿನಂದಿಸಿದ್ದಾರೆ.



إرسال تعليق

0 تعليقات
إرسال تعليق (0)
To Top