ಪದ್ಮಾವತಿ ಕೆ.ವಿ ಅವರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸಿ ಪ್ರಶಸ್ತಿ

Upayuktha
0


ಚೆನ್ನೈ: ಅಮೆರಿಕನ್ ವಿಸ್ಡಂ ಪೀಸ್ ಯುನಿವರ್ಸಿಟಿ, ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ ತಮಿಳುನಾಡು ಹೊಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಕಾಡುಗೋಡಿಯ ಜನನಿ ಪಬ್ಲಿಕ್ ಶಾಲೆಯ ಶೈಕ್ಷಣಿಕ ಆಡಳಿತ ಅಧಿಕಾರಿ ಪದ್ಮಾವತಿ ಕೆ ವಿ  ಅವರಿಗೆ ಪ್ರತಿಷ್ಠಿತ ಡಾ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಶೈಕ್ಷಣಿಕ ಸಂಪನ್ಮೂಲ  ವ್ಯಕ್ತಿಯಾಗಿ  ಪದ್ಮಾವತಿ ಕೆ ವಿ ಯವರು ಕಳೆದ ಒಂದುವರೆ ದಶಕದಿಂದ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಎಂಟನೇ ರಾಂಕ್ ವಿಜೇತೆಯಾಗಿ, ಇತಿಹಾಸ ಎಂ ಎ, ಬಿ ಎಡ್  ಪೂರೈಸಿ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.


ನಾಡಿನ ಅನೇಕ ಪತ್ರಿಕೆಗಳಲ್ಲಿ ಸಾಂದರ್ಭಿಕ ಲೇಖನಗಳು ಪ್ರಕಟವಾಗಿವೆ.  ವಿಶ್ವ ವಿಖ್ಯಾತ  ಕ್ಷಿಪಣಿ ತಂತ್ರಜ್ಞಾನ  ವಿಜ್ಞಾನಿ, ಈ ದೇಶ ಕಂಡ ಹೆಮ್ಮೆಯ ಗೌರವಾನ್ವಿತ ರಾಷ್ಟ್ರಪತಿ ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ರವರ ಸ್ಮರಣಾರ್ಥ ನೀಡುವ ಈ ಪ್ರಶಸ್ತಿ ಲಭಿಸಿದ್ದಕ್ಕೆ ವಿವಿಯ ಆಯ್ಕೆ ಸಮಿತಿ ಸದಸ್ಯರಿಗೆ ಧನ್ಯವಾದ ಮತ್ತು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ವೇದಿಕೆಯಲ್ಲಿ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಸ್ಕೃತ ಅಕಾಡೆಮಿಯ ಆಡಳಿತ ಕುಲ ಸಚಿವ ಎಸ್ ಕುಮಾರ್, ಡಾ. ಕರಾಟೆ ಎಪಿ ಶ್ರೀನಾಥ್, ಸಾಲೂರು ಬೃಹನ್ಮಠದ ಕೃಷ್ಣ ಮೂರ್ತಿ ಮಹಾಸ್ವಾಮಿಗಳು, ನಿವೃತ್ತ ಎಸಿಪಿ ಡಾ ಲಯನ್ ಎಸ್ ಬಿ ಛಬ್ಬಿ, ಡಿಸಿಪಿ ಬಿಎಸ್ ಅಂಗಡಿ, ಗಂಗಮ್ಮ ಶಕ್ತಿ ಪೀಠದ ಎಸ್ ರವಿಚಂದ್ರನ್ ಸ್ವಾಮೀಜಿ ಮೊದಲಾದ ಗಣ್ಯರು  ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top