ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ತ್ರೈವಾರ್ಷಿಕ ಸಾಹಿತ್ಯ ಸಮಾವೇಶ 29ರಂದು

Chandrashekhara Kulamarva
0


ಮಂಗಳೂರು: ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ತನ್ನ ತ್ರೈವಾರ್ಷಿಕ ಸಾಹಿತ್ಯ ಸಮಾವೇಶವನ್ನು ಭಾನುವಾರ (ಜೂ.29) ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಗ್ಗೆ 9-30 ರಿಂದ ಸಂಜೆ 5-00 ಗಂಟೆಯವರೆಗೆ ಆಯೋಜಿಸಿದೆ.


ಸಮಾವೇಶವನ್ನು ಕರ್ನಾಟಕದ ಹೆಸರಾಂತ ಸಾಹಿತಿ, ಅಷ್ಟಾವಧಾನಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ವಸಂತ ಭಾರದ್ವಾಜ್ ರವರು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯದ ಸಮಕಾಲೀನ ಚಿಂತಕರು, ಬರಹಗಾರರು, ವಿಮರ್ಶಕರಾದ ಜಿ. ಬಿ. ಹರೀಶ್ ರೊಡನೆ 'ಬರಹಗಾರ ಮತ್ತು ಓದುಗನ ನಡುವಿನ ಅನುಸಂಧಾನ' ಕುರಿತು ಸಂವಾದ ಏರ್ಪಡಿಸಲಾಗಿದೆ.


ವೇದಿಕೆಯು ಪ್ರತಿವರ್ಷ ಕೊಡಮಾಡುವ 'ನುಡಿ ಭೂಷಣ' ಪ್ರಶಸ್ತಿಯನ್ನು ಮಂಡ್ಯದ ಖ್ಯಾತ ಸಾಹಿತಿ ತ.ನಾ. ಶಿವಕುಮಾರ್ (ತನಾಶಿ), ಕಲುಬುರ್ಗಿಯ ಖ್ಯಾತ ನೇತ್ರತಜ್ಞ ಡಾ. ಉದಯ ಪಾಟೀಲ ಹಾಗೂ ಬೆಂಗಳೂರಿನ ಖ್ಯಾತ ಸಾಹಿತಿ ಅನುಸೂಯ ಸಿದ್ಧರಾಮ ಅವರಿಗೆ ಪ್ರದಾನ ಮಾಡಲಾಗುವುದು. ಅಲ್ಲದೆ ಬಳಗದ ಸದಸ್ಯರಿಂದ 'ಜಾನಪದ ಸಾಂಸ್ಕೃತಿಕ ವೈಭವ', 'ಆಶು ಕವಿಗೋಷ್ಠಿ' ಇನ್ನಿತರ ಕಾರ್ಯಕ್ರಮಗಳನ್ನು ಸಮಾವೇಶದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top