ಉಡುಪಿ: ಉಡುಪಿ ಎಂಜಿಎಂ ಪದವಿಪೂರ್ವ ಕಾಲೇಜಿನ ರೊನಾಕ್ ಆರ್ ಶೆಟ್ಟಿಯವರು 2025ರ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ 646/720 ಗಳಿಸುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ 107ನೇ ಸ್ಥಾನ ರಾಜ್ಯ ಮಟ್ಟದಲ್ಲಿ 8 ನೇ ಸ್ಥಾನ ಅವಿಭಜಿತ ದ.ಕ.ಜಿಲ್ಲಾ ಮಟ್ಟದಲ್ಲಿ 3ನೇ ಸ್ಥಾನ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿದ್ದಾರೆ.
ರೊನಾಕ್ ಶೆಟ್ಟಿಯವರ ತಂದೆ ಡಾ.ರೇೂಷನ್ ಕುಮಾರ್ ಶೆಟ್ಟಿ ಸಹಾಯಕ ನಿರ್ದೇಶಕರು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ; ತಾಯಿ ಅನಿತಾ ಆರ್.ಶೆಟ್ಟಿ: ಉಪನ್ಯಾಸಕಿ ಜೀವ ಶಾಸ್ತ್ರ ವಿಭಾಗ ಎಂಜಿಎಂ. ಕಾಲೇಜು ಉಡುಪಿ. ವಿದ್ಯಾರ್ಥಿಯ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕ ಮತ್ತು ಶಿಕ್ಷಕೇತರ ವರ್ಗದವರು ಶ್ಲಾಘಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ