ಯೋಗ ದಿನ ನಿತ್ಯ ಮಾಡಬೇಕು : ಸುಮಾ ಶೆಟ್ಟಿ

Upayuktha
0



ಮಂಗಳೂರು: ಆರೋಗ್ಯ ಭಾರತಿ ಮಂಗಳೂರು, ರುದ್ರ ಸಮಿತಿ  ಶ್ರೀ ಭಾರತೀ ಕಾಲೇಜು,ಮಂಗಳೂರು ಮತ್ತು ಚೂಂತಾರು ಸರೋಜಿನಿ  ಭಟ್ ಪ್ರತಿಷ್ಠಾನ(ರಿ) ಮಂಗಳೂರು ಜಿಲ್ಲಾ  ಇದರ ಜಂಟಿ ಆಶ್ರಯದಲ್ಲಿ ಜೂನ್  21 ವಿಶ್ವ ಯೋಗ ದಿನದಂದು ಯೋಗ  ಶಿಬಿರ ಕಾರ್ಯ ಕ್ರಮ ಶ್ರೀಭಾರತಿ ಕಾಲೇಜು ನಂತೂರು  ಪದವು ಇಲ್ಲಿ ಬೆಳಿಗ್ಗೆ6:30 ರಿಂದ 8 ರವಗೆ ನಡೆಯಿತು.ಯೋಗ ಗುರುಗಳಾದ ಸುಮಾ ಶೆಟ್ಟಿ ಮತ್ತು ಕಾಟಿಪಳ್ಳ ಸುಬ್ರಮಣ್ಯ ಭಟ್ ಯೋಗ ತರಬೇತಿ ನೀಡಿದರು. ಸುಮಾರು ೨೫ ಮಂದಿ ಈ ಶಿಬಿರದ ಪ್ರಯೋಜನ ಪಡೆದರು.


ಕಾರ್ಯದರ್ಶಿ ಆರೋಗ್ಯ ಭಾರತಿ ಮಂಗಳೂರು ಉಮೇಶ್ ಪ್ರಭು, ಹವ್ಯಕ ಸಭಾದ  ಡಾ. ರಾಜೇಂದ್ರ ಪ್ರಸಾದ್, ಆರೋಗ್ಯ ಭಾರತಿ ವಿಭಾಗ ಸಂಚಾಲಕ ಪುರುಷೋತ್ತಮ, ಮಂಗಳೂರು ಮಹಾನಗರ ಸಂಘ ಚಾಲಕ ಡಾ.ಸತೀಶ್ ರಾವ್,ಆರೋಗ್ಯ ಭಾರತಿ ಜಿಲ್ಲಾಧ್ಯಕ್ಷ ಡಾ.ಈಶ್ವರ ಪಲ್ಲಾದೆ, ಆರೋಗ್ಯ ಭಾರತಿ ಗೌರವ ಅಧ್ಯಕ್ಷ ಡಾ.ಮುರಲೀ ಮೋಹನ್ ಚೂಂತಾರು, ಸರೋಜಿನಿ ಪ್ರತಿಷ್ಟಾನದ ಡಾ.ರಾಜಶ್ರೀ ಮೋಹನ್, ಡಾ. ಮೊಹಾಂತಿ ಉಪಸ್ಥಿತರಿದ್ದರು.


ಡಾ. ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು.ಡಾ‌. ಚೂಂತಾರು ವಂದನಾರ್ಪಣೆಗೈದರು. ಕಾಟಿಪಳ್ಳ ಸುಬ್ರಮಣ್ಯ ಭಟ್ ಯೋಗದ ಮಹತ್ವ ಮತ್ತು ಅನಿವಾರ್ಯತೆಯನ್ನು ವಿವರಿಸಿದರು. ಸುಮಾ ಶೆಟ್ಟಿ ಮಾತನಾಡಿ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹಾರೈಸಿದರು‌.ಪ್ರತಿ ದಿನ ಯೋಗ ಮಾಡಿದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಯೋಗದಿಂದ ರೋಗ ದೂರವಾಗುತ್ತದೆ ಎಂಧು ನುಡಿದರು.ಇದೇ ಸಂದರ್ಬದಲ್ಲಿ  ಶ್ರೀಮತಿ ಸುಮಾ ಶೆಟ್ಟಿ ಮತ್ತು  ಶ್ರೀಸುಬ್ರಮಣ್ಯ ಭಟ್ ರವರನ್ನು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top